Wednesday, January 22, 2025

ಹೇಗಿರಲಿದೆ ‘ಮಾನ್ಸೂನ್ ರಾಗ’ ಪ್ರೀ- ರಿಲೀಸ್ ಇವೆಂಟ್..?​

ಕಟ್ಟೆ ಬೆಂಗಳೂರಲ್ಲಿ ಗುಡುಗಿದ್ರೆ ಮುಂಬೈ- ಹೈದ್ರಾಬಾದ್​ನಲ್ಲಿ ಮಳೆ, ಕೊಚ್ಚಿನ್- ಚೆನ್ನೈನಲ್ಲಿ ಸೈಕ್ಲೋನ್ ಎದ್ದಂತೆ.  ಯೆಸ್.. ಆ ಕಟ್ಟೆ ಇದೀಗ ಬಿಗ್ ಸ್ಕ್ರೀನ್ ಮೇಲೆ ಮೂಡೋ ಸಮಯ ಬಂದಿದೆ. ಮಾನ್ಸೂನ್ ರಾಗದ ಸ್ಯಾಂಪಲ್ಸ್​ಗೆ ಫಿದಾ ಆಗಿರೋ ಸಿನಿರಸಿಕರ ನಾಡಿಮಿಡಿತ ಮತ್ತಷ್ಟು ಹೆಚ್ಚಿಸಲಿದೆ ಚಿತ್ರತಂಡ. ಇಷ್ಟಕ್ಕೂ ಪ್ರೀ ರಿಲೀಸ್ ಇವೆಂಟ್ ಯಾವಾಗ..? ಯಾರೆಲ್ಲಾ ಬರ್ತಿದ್ದಾರೆ ಅನ್ನೋದ್ರ ರಿಪೋರ್ಟ್​ ನಿಮ್ಮ ಮುಂದೆ.

  • ಫ್ಯಾನ್ಸ್​ಗೆ ಸ್ಪೆಷಲ್ ಪಾಸ್.. ದುನಿಯಾ ವಿಜಯ್ ಚೀಫ್ ಗೆಸ್ಟ್
  • ಫಂಕ್ಷನ್​ನಲ್ಲಿ ಬೈರಾಗಿ, ವೀರಂ, ಭೀಮ, ಹೆಡ್​ಬುಷ್ ಟೀಮ್ಸ್
  • ಫಸ್ಟ್ ಟೈಂ ಬೆಳ್ಳಿತೆರೆ ಮೇಲೆ ಡಿಂಪಲ್ ಕ್ವೀನ್- ಡಾಲಿ ಮಿಂಚು

ಎಲ್ಲರನ್ನ ಕಾಡುವಂತಹ ಹಂಡ್ರೆಡ್ ಪರ್ಸೆಂಟ್ ಕ್ಲಾಸ್ ಕಂಟೆಂಟ್ ಜೊತೆ ಮಾಸ್ ಮಸಾಲ ಮಿಕ್ಸ್ ಮಾಡಿ, ಕ್ಲಾಸಿಕಲ್ ಮ್ಯೂಸಿಕ್ ನಿಂದ ನಾಡಿಮಿಡಿತ ಹೆಚ್ಚಿಸಿರೋ ಸಿನಿಮಾ ಮಾನ್ಸೂನ್ ರಾಗ. ಡಾಲಿ ಧನಂಜಯ, ಡಿಂಪಲ್ ಕ್ವೀನ್ ರಚಿತಾರಾಮ್ ಹಾಗೂ ಯಶಾ ಶಿವಕುಮಾರ್ ಮುಖ್ಯಭೂಮಿಕೆಯ ಈ ಚಿತ್ರ ಇದೇ ಸೆಪ್ಟೆಂಬರ್ 16ಕ್ಕೆ ಅದೃಷ್ಟ ಪರೀಕ್ಷೆಗೆ ಥಿಯೇಟರ್ ಅಂಗಳಕ್ಕೆ ಬರ್ತಿದೆ.

ರವೀಂದ್ರನಾಥ್ ನಿರ್ದೇಶನದ ಹಾಗೂ ಎಆರ್ ವಿಖ್ಯಾತ್ ನಿರ್ಮಾಣದ ಈ ಸಿನಿಮಾಗೆ ಜೆ ಅನೂಪ್ ಸೀಳಿನ್ ಸಂಗೀತವಿದ್ದು, ಈಗಾಗ್ಲೇ ರಿಲೀಸ್ ಆಗಿರೋ ಸ್ಯಾಂಪಲ್ ಝಲಕ್​ಗಳು ಸಿನಿಮಾ ಮೇಲಿನ ನಿರೀಕ್ಷೆ ದ್ವಿಗುಣಗೊಳಿಸಿವೆ. ಎಸ್ ಕೆ ರಾವ್ ಸಿನಿಮಾಟೋಗ್ರಫಿ ಕಣ್ಣಿಗೆ ಹಬ್ಬ ನೀಡಲಿದ್ದು, ಹಾಡುಗಳು ಕಣ್ಮನ ತಣಿಸುತ್ತಿವೆ.

ಅಂದಹಾಗೆ ಸಿನಿಮಾ ರಿಲೀಸ್​ಗೂ ಮುನ್ನ ದೊಡ್ಡದೊಂದು ಪ್ರೀ ರಿಲೀಸ್ ಇವೆಂಟ್ ಮಾಡೋಕೆ ಚಿತ್ರತಂಡ ಯೋಜನೆ ರೂಪಿಸಿದೆ. ಇದೇ ಸೆಪ್ಟೆಂಬರ್ 13 ಮಂಗಳವಾರ ಸಂಜೆ, ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಪ್ರೀ ರಿಲೀಸ್ ಫಂಕ್ಷನ್ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕಾಗಿ ಡಾಲಿ ಫ್ಯಾನ್ಸ್ ಹಾಗೂ ಕನ್ನಡ ಅಭಿಮಾನಿಗಳಿಗೆ ಸ್ಪೆಷಲ್ ಎಂಟ್ರಿ ಪಾಸ್​ಗಳನ್ನ ಮಂಗಳವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಅದೇ ಭವನದಲ್ಲಿ ವಿತರಿಸಲಾಗುತ್ತಿದೆ.

ಸ್ಯಾಂಡಲ್​ವುಡ್ ಸಲಗ ಅಂತ್ಲೇ ಖ್ಯಾತಿ ಪಡೆದ ದುನಿಯಾ ವಿಜಯ್ ಅವ್ರು ಈ ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಆಗಿ ಆಗಮಿಸುತ್ತಿರೋದು ವಿಶೇಷ. ಅಲ್ಲದೆ, ಇಡೀ ಮಾನ್ಸೂನ್ ರಾಗ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಇರಲಿದ್ದಾರೆ. ಇದರ ಹೊರತಾಗಿ ಹೆಡ್​ಬುಷ್ ಚಿತ್ರದಿಂದ ಲೂಸ್​ಮಾದ ಯೋಗಿ, ವಸಿಷ್ಠ, ರಘು ಮುಖರ್ಜಿ ಬರಲಿದ್ದಾರೆ. ಭೀಮ, ಬೈರಾಗಿ, ವೀರಂ ಚಿತ್ರತಂಡಗಳು, ಕೆಆರ್​ಜಿ ಕಾರ್ತಿಕ್- ಯೋಗಿ ಟೀಂ ಕೂಡ ಭಾಗಿಯಾಗಲಿದೆ.

ನಮ್ಮ ಕನ್ನಡ ಇಂಡಸ್ಟ್ರಿಯಿಂದ ಹೊಸ ಹೊಸ ಪ್ರಯೋಗಗಳು ಹೊರಬರುತ್ತಿದ್ದು, ಪರಭಾಷಿಗರು ಕೂಡ ವ್ಹಾವ್ ಅಂತಿದ್ದಾರೆ. ಇಂತಹ ಸುವರ್ಣ ಯುಗದಲ್ಲಿ ಮ್ಯೂಸಿಕಲಿ ಮ್ಯಾಜಿಕ್ ಮಾಡೋಕೆ ಬರ್ತಿದೆ ಮಾನ್ಸೂನ್ ರಾಗ. ಇಲ್ಲಿ ಡಾಲಿ ಹಾಗೂ ಆತನ ಎರಡು ಲವ್ ಸ್ಟೋರಿಗಳ ಜೊತೆಗೆ ಸುಹಾಸಿನಿ ಮಣಿರತ್ನಂ- ಅಚ್ಯುತ್ ಪ್ರೇಮ್ ಕಹಾನಿ ಕೂಡ ನೋಡುಗರನ್ನ ಕಾಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES