Monday, December 23, 2024

ಉಪ್ಪಿ ಬರ್ತ್ ಡೇ’ಗೆ ಕೆಜಿಎಫ್​ನ ಮೀರಿಸೋ ಕಬ್ಜ ಟೀಸರ್​

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ನಮ್ಮ ಸೌತ್ ಸಿನಿಮಾಗಳು ಅಬ್ಬರಿಸಿ, ಬೊಬ್ಬಿರಿಯುತ್ತಿರೋ ಈ ಸುವರ್ಣ ಯುಗದಲ್ಲಿ ಕಬ್ಜ ಅನ್ನೋ ಮತ್ತೊಂದು ಮಾಸ್ಟರ್​ಪೀಸ್ ಸಿನಿಮಾ ಬರ್ತಿದೆ. ಕೆಜಿಎಫ್ ರೇಂಜ್​ನಲ್ಲಿರೋ ಮೆಗಾ ಮಲ್ಟಿಸ್ಟಾರ್ ಸಿನಿಮಾ ಇದಾಗಿದ್ದು, ಟೀಸರ್ ಲಾಂಚ್​ಗೆ ಡೆಡ್​ಲೈನ್ ಫಿಕ್ಸ್ ಆಗಿದೆ.

ಇದು 100 ಕೋಟಿ ಬಜೆಟ್​ನ ಪ್ಯಾನ್ ಇಂಡಿಯಾ ವೆಂಚರ್

ಒಂದು ದೊಡ್ಡ ವಿಷನ್.. ಅದಕ್ಕಾಗಿ ಸಿಕ್ಕಾಪಟ್ಟೆ ಪ್ಯಾಷನ್ ಇದ್ರೆ ಏನೆಲ್ಲಾ ವಂಡರ್ಸ್​ ಮಾಡಬಹುದು ಅನ್ನೋದಕ್ಕೆ ಕೆಜಿಎಫ್ ಒಳ್ಳೆಯ ನಿದರ್ಶನ. ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡಿದ ಈ ಸಿನಿಮಾ ಮೇಕಿಂಗ್​ ವಿಚಾರ ಹೊಸ ಕ್ರಾಂತಿಯನ್ನೇ ಮಾಡಿತು. ಇದೀಗ ಅದೇ ಹಾದಿಯಲ್ಲಿ ಮತ್ತೊಂದು ಮೆಗಾ ಪ್ಯಾನ್ ಇಂಡಿಯಾ ಸಿನಿಮಾ ತಯಾರಾಗ್ತಿದೆ. ಅದೇ ಕಬ್ಜ.

ಆರ್ ಚಂದ್ರು ಡ್ರೀಮ್ ಪ್ರಾಜೆಕ್ಟ್ ಇದಾಗಿದ್ದು, ಹಗಲಿರುಳು ತನುಮನ ದನವನ್ನು ಅರ್ಪಿಸಿ ಈ ಸಿನಿಮಾನ ತೆರೆ ಮೇಲೆ ತರೋ ಪ್ರಯತ್ನದಲ್ಲಿದ್ದಾರೆ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್. ಅಂದಹಾಗೆ ಇದ್ರ ಬಜೆಟ್ ಬರೋಬ್ಬರಿ 100 ಕೋಟಿ. ಕನ್ನಡದ ಜೊತೆ ಸುಮಾರು ಆರೇಳು ಇಂಡಿಯನ್ ಲಾಂಗ್ವೇಜಸ್​ನಲ್ಲಿ ಬರ್ತಿರೋ ಈ ಚಿತ್ರ ಅಂಡರ್​ವರ್ಲ್ಡ್​ಗೆ ಹೊಸ ಆಯಾಮ ಕೊಡಲಿದೆ. ಮೇಕಿಂಗ್​ನಿಂದ ಮತ್ತೆ ಕನ್ನಡಿಗರ ತಾಕತ್ತನ್ನ ವಿಶ್ವಕ್ಕೆ ಗೊತ್ತು ಮಾಡಲಿದೆ.

ರಿಯಲ್ ಸ್ಟಾರ್ ಉಪೇಂದ್ರ ರೆಟ್ರೋ ಡಾನ್ ಆಗಿ ಆರ್ಭಟಿಸಿದ್ರೆ, ಭಾರ್ಗವ್ ಭಕ್ಷಿಯಾಗಿ ಕಿಚ್ಚ ಸುದೀಪ್, ಕ್ವೀನ್ ಆಗಿ ಶ್ರಿಯಾ ಸರಣ್ ಲೀಡ್​ನಲ್ಲಿ ನೋಡುಗರಿಗೆ ಥ್ರಿಲ್ ಕೊಡಲಿದ್ದಾರೆ. ಶೋಲೆ, ಗಂಧದಗುಡಿ ಚಿತ್ರದಲ್ಲಿ ಬಳಕೆ ಆಗಿರೋ ವೆಪನ್ಸ್​ನ ಈ ಚಿತ್ರದಲ್ಲಿ ಬಳಸಿರೋದು ಇಂಟರೆಸ್ಟಿಂಗ್. ಇನ್ನು ಇಲ್ಲಿಯವರೆಗೂ ಮೇಕಿಂಗ್ ತುಣುಕುಗಳನ್ನಷ್ಟೇ ರಿವೀಲ್ ಮಾಡಿದ್ದ ಟೀಂ, ಇದೀಗ ಟೀಸರ್ ಲಾಂಚ್ ಮಾಡೋಕೆ ಮುಂದಾಗಿದೆ.

ಇದೇ ಸೆಪ್ಟೆಂಬರ್ 18ಕ್ಕೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿದ್ದು, ಫ್ಯಾನ್ಸ್​ನ ಮನೆಗೆ ಇನ್ವೈಟ್ ಮಾಡಿದ್ದಾರೆ. ಆದ್ರೆ ಅದಕ್ಕೂ ಒಂದು ದಿನ ಮುನ್ನ ಸೆಪ್ಟೆಂಬರ್ 17ರ ಸಂಜೆ 5ಕ್ಕೆ ಮೋಸ್ಟ್ ಎಕ್ಸ್​ಪೆಕ್ಟೆಡ್ ಕಬ್ಜ ಟೀಸರ್​ನ ಲಾಂಚ್ ಮಾಡಲಿದೆ ಟೀಂ. ಇದು ಉಪ್ಪಿ ಜನುಮ ದಿನಕ್ಕೆ ಸಿಗ್ತಿರೋ ದುಬಾರಿ ಗಿಫ್ಟ್ ಆಗಿರಲಿದ್ದು, ಬೆಸ್ಟ್ ಗಿಫ್ಟ್ ಆಗಲಿದೆ.

ಌಕ್ಷನ್ ಸೀಕ್ವೆನ್ಸ್, ಉಪ್ಪಿ ಲುಕ್ಸ್, ಸಿನಿಮಾಟೋಗ್ರಫಿ, ಬ್ಯಾಗ್ರೌಂಡ್ ಮ್ಯೂಸಿಕ್ ಹೀಗೆ ಎಲ್ಲವೂ ಫ್ರೆಶ್ ಫೀಲ್ ಕೊಡಲಿವೆ. ಬೃಹತ್ ಸೆಟ್​ಗಳಲ್ಲಿ ತಯಾರಾದ ಕಬ್ಜ ಕನ್ನಡ ಚಿತ್ರರಂಗದ ಏಳೆಗೆಗೆ ಮತ್ತೊಂದು ಬೂಸ್ಟರ್ ಡೋಸ್ ಆಗಲಿದೆ. ಪರಭಾಷಾ ಕೋಟೆ ಕೊತ್ತಲುಗಳನ್ನ ಆವರಿಸಿರೋ ನಮ್ಮ ಕನ್ನಡದ ಭಾವುಟ, ಮತ್ತಷ್ಟು ಜೋರಾಗಿ ಹಾರಲಿದೆ. ಕಥೆ ಜೊತೆ ಮೇಕಿಂಗ್ ಕೂಡ ಡಿಫರೆಂಟ್ ಆಗಿರಲಿರೋ ಈ ಮೈಲಿಗಲ್ಲು ಸಿನಿಮಾ ಅಕ್ಷರಶಃ ಟ್ರೆಂಡ್ ಸೆಟ್ ಮಾಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES