Thursday, January 23, 2025

ಅವರ ಕ್ಷೇತ್ರದ ಕಾರ್ಯಕರ್ತರೇ ಲೂಟಿ ರವಿ ಅಂತಾರೆ : ದಿನೇಶ್​​​ ಗುಂಡುರಾವ್

ಬೆಂಗಳೂರು : ಸಿದ್ದರಾಮಯ್ಯರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿರುವ ಸಿ.ಟಿ.ರವಿ ತಮ್ಮ ಸಂಸ್ಕಾರವೇನು ಎಂಬುದನ್ನು ತೋರಿಸಿಕೊಂಡಿದ್ದಾರೆ.

ಸಿ.ಟಿರವಿ ಸಾರ್ವಜನಿಕ ಜೀವನದಲ್ಲಿರುವವರು, ಸಾರ್ವಜನಿಕ ಜೀವನದಲ್ಲಿರುವವರು ತಾವು ಬಳಸುವ ಭಾಷೆಯ ಮೇಲೆ ಹಿಡಿತವಿರಬೇಕು ಎಂದು KPCC ಮಾಜಿ ಅಧ್ಯಕ್ಷ ದಿನೇಶ್​​​ ಗುಂಡುರಾವ್​​ ಟ್ವೀಟ್​ ಮಾಡಿ ಸಿ.ಟಿ .ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್​​ ಮಾಡಿರುವ ದಿನೇಶ್​​​ ಗುಂಡುರಾವ್​​​​, ಸಿ.ಟಿ.ರವಿಯವರಿಗೆ ಲೂಟಿ ರವಿ ಎಂಬ ಅನ್ವರ್ಥನಾಮ ಇಟ್ಟಿದ್ದು ಸಿದ್ದರಾಮಯ್ಯರಲ್ಲ. ಸ್ವತಃ ಅವರ ಕ್ಷೇತ್ರದ BJP ಕಾರ್ಯಕರ್ತರೇ ಲೂಟಿ ರವಿ ಎನ್ನುತ್ತಾರೆ. ಇದನ್ನು ಸಿದ್ದರಾಮಯ್ಯ‌ ಹೇಳಿದ್ದೇ ರವಿಯವರಿಗೆ ಚೇಳು ಕಡಿದಂತಾಗಿದೆ ಎಂದು ಅಪಹಾಸ್ಯ ಮಾಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯರ ವಿರುದ್ಧ ಕೀಳು‌ ಪದಪ್ರಯೋಗ ಮಾಡಿ ರವಿ ತಮ್ಮ ಹೊಲಸು ನಾಲಗೆ ಪ್ರದರ್ಶಿಸಿದ್ದಾರೆ. ಕೆಲವರಿಗೆ ದೊಡ್ಡವರನ್ನು ತೆಗಳಿ ದೊಡ್ಡವರೆನಿಸಿಕೊಳ್ಳುವ ಚಟವಿರುತ್ತದೆ.

ಸಿ.ಟಿ.ರವಿಗೂ ಈ ಚಟವಿದೆ. ಸಿದ್ದರಾಮಯ್ಯರ ರಾಜಕೀಯ ಅನುಭವ, ಹಿರಿತನ ಮತ್ತು ಯೋಗ್ಯತೆ‌ ಈ ನಾಡಿಗೆ ತಿಳಿದಿದೆ. ಅವರ ಬಗ್ಗೆ ಕೀಳಾಗಿ ಮಾತಾಡುವ ರವಿ ತಮ್ಮ ಯೋಗ್ಯತೆಯೇನು ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಪುಂಡು ಪೋಕರಿಯಂತೆ ಮಾತಾಡಿದರೆ ಗೌರವ ಉಳಿಯುವುದಿಲ್ಲ ಎಂದು ಕಿಡಿಕಾರಿದ್ರು.

RELATED ARTICLES

Related Articles

TRENDING ARTICLES