ಬೆಂಗಳೂರು : ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಡೇಸಗೂರುಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗ್ತಿದೆ. ಕಳೆದ ವಾರವಷ್ಟೇ ನಿನ್ನ ದುಡ್ಡು ವಾಪಸ್ ಕೊಡ್ತೀನಿ ಎಂಬ ಆಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಪಿಎಸ್ ಐ ನೇಮಕಾತಿ ಸಂಬಂಧ ಬಸವರಾಜ್ ದಡೇಸಗೂರು 15 ಲಕ್ಷ ಕೊಟ್ಟಿದ್ದೇವೆ ಎಂಬ ವ್ಯಕ್ತಿಯ ವಿಡಿಯೋವೊಂದನ್ನ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ, ಮಾಜಿ ಸಚಿವ ಶಿವರಾಜ್ ತಗಂಡಗಿ, ಪ್ರಿಯಾಂಕ್ ಖರ್ಗೆ, ವಿಡಿಯೋ ಹಾಗು ಪೋಟೋವೊಂದನ್ನ ಬಿಡುಗಡೆ ಮಾಡಿದ್ದಾರೆ.
ಇನ್ನು ಪಿಎಸ್‌ಐ ಹಗರಣದಲ್ಲಿ ಬಸವರಾಜ್ ದಡೇಸಗೂರು ಹಣ ತೆಗದುಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ನಾವು ವಿಡಿಯೋ ಕೂಡ ಬಿಡುಗಡೆ ಮಾಡಿದ್ದೇವೆ. ಪಿಎಸ್‌ಐ ಹಗರಣದಲ್ಲಿ ಭಾಗಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿಯಾದ ಅಮೃತ್ ಪೌಲ್ ಬಂಧಿಸಿದ್ದಾರೆ. ಇದೀಗ ದಡೇಸಗೂರು ಹಣ ತೆಗದುಕೊಂಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆದರೂ ಇದುವರೆಗೂ ಅವರ ವಿರುದ್ಧ ಎಫ್‌ಐಆರ್ ಹಾಕಿ, ಬಂಧಿಸೋದಕ್ಕೆ ಯಾಕೆ ತಡ ಮಾಡ್ತಿದ್ದೀರಾ ಎಂದು ಮಾಜಿ ಸಚಿವ ಶಿವರಾಜ್ ತಗಂಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ದೇ ಕೂಡಲೇ ಈ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ನೀಡುವಂತೆ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ವಿಡಿಯೋ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಡೇಸಗೂರು, ಆ ವಿಡಿಯೋ, ಆಡಿಯೋ ಎಲ್ಲವೂ ಸುಳ್ಳು, ಎಲ್ಲವೂ ಎಡಿಟ್ ಮಾಡಲಾಗಿದೆ.ಇದು ಮಾಜಿ ಸಚಿವ ಶಿವರಾಜ್ ತಗಂಡಗಿ ಷ್ರಡಂತ್ಯ ಎಂದು ಆರೋಪ ನಿರಾಕರಿಸಿದ್ದಾರೆ. ಇನ್ನು ಕಾಂಗ್ರೆಸ್ ಬಿಡುಗಡೆ ಮಾಡಿರುವ, ಫೋಟೋ, ವಿಡಿಯೋದಲ್ಲಿ ಸತ್ಯಾಂಶ ಇದ್ರೆ ತನಿಖೆಗೆ ಕೊಡುವುದಾಗಿ ಸಿಎಂ ಹೇಳಿದ್ದಾರೆ.
ಒಟ್ಟಾರೆ, ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಬಿಜೆಪಿ ಶಾಸಕ ಬಸವರಾಜ ದಡೇಸಗೂರು, ಪಿಎಸ್‌ಎ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪೋಟೋ,ವಿಡಿಯೋ ಬೊಮ್ಮಾಯಿ ಸರ್ಕಾರಕ್ಕೆ ತೀವ್ರ ಮುಜುಗರನ್ನುಂಟು ಮಾಡಿದೆ. ಸದನದಲ್ಲಿ ಈ ವಿಚಾರ ಚರ್ಚೆಗೆ ಬಂದಾಗ, ಸರ್ಕಾರ ಯಾವ ರೀತಿ ಈ ಪ್ರಕರಣವನ್ನ ಸರ್ಮಥನೆ ಮಾಡಿಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.