Monday, November 25, 2024

ಚಡ್ಡಿ ಸುಡಬಹುದು, RSS ವಿಚಾರ ಸುಡಲು ಸಾಧ್ಯವಿಲ್ಲ : ಸಿ.ಟಿ ರವಿ

ಬೆಂಗಳೂರು : ಕಾಂಗ್ರೆಸ್ ಟ್ವೀಟ್​​ನಲ್ಲಿ RSS ಚಡ್ಡಿ ಸುಡುವ ಫೋಟೋ ಹಾಕಿ ಭಾರತ್ ಜೋಡೋ ಮಾಡುತ್ತಿದ್ದಾರೆ. ಭಾರತ ಜೋಡೋ ಹೆಸರಲ್ಲಿ ಭಾರತೀಯತೆ ಸುಡುತ್ತಿದ್ದಾರೆ ಎಂದು ಸಿ. ಟಿ ರವಿ ಹೇಳಿದ್ದಾರೆ,

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, RSS ರಾಷ್ಟ್ರ ಸೇವೆ ಮಾಡುವ ಸಂಘಟನೆ, ಯುದ್ಧ ಸಂದರ್ಭದಲ್ಲಿ RSS ಪಾಲ್ಗೊಂಡಿದೆ. ಕಾಂಗ್ರೆಸ್ ಮನೋಭಾವನೆ ಎಲ್ಲರಿಗೂ ಗೊತ್ತು. ಉಗ್ರನನ್ನ ಒಸಾಮಾಜೀ ಎಂದು ಉಲ್ಲೇಖಿಸುತ್ತಾರೆ. ತುಕುಡೇ ಗ್ಯಾಂಗನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅಪ್ಜಲ್ ಗುರು ಬಗ್ಗೆ ಮರುಕು ವ್ಯಕ್ತಪಡಿಸುತ್ತಾರೆ. ಚಡ್ಡಿ ಸುಡಬಹುದು, RSS ವಿಚಾರ ಸುಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು, ಚಡ್ಡಿ ಹಾಕಿ ಕಾಂಗ್ರೆಸ್ ನವರೇ ಶಾಖೆಗೆ ಬರುವ ದಿನ ದೂರ ಇಲ್ಲ. RSS ಮೇಲೆ ಕ್ರಷ್ ಅಗಿದೆ ಅಂತಾ ನೆಹರೂ ಹೇಳಿದ್ರು, ಭಾರತದ ಎಲ್ಲಾ ಭಾಷೆಗಳು ಸಹ ಭಾರತದ ಆತ್ಮ, ಮಾತೃಭಾಷೆಯಲ್ಲೇ ವ್ಯವಹರಿಸಿ, ಮಾತನಾಡಲು ಹೆಮ್ಮೆ ಪಡಿ. ಕೀಳರಿಮೆ ತರುಪ ಪ್ರಯತ್ನ ಬ್ರಿಟೀಷ್‌ನವರು ಮಾಡಿದ್ರು, ಈಗ ಕಾಂಗ್ರೆಸ್ ಮಾಡುತ್ತಿದ್ದಾರೆ. ಹಿಂದಿ ದಿವಸ್ ನಾವು ಪ್ರಾರಂಭ ಮಾಡಿದ್ದಲ್ಲ. ಯಾವ ಪಕ್ಷದ ಬೆಂಬಲದಲ್ಲಿ ದೇವೆಗೌಡರು ಪ್ರಧಾನಿಯಾಗಿದ್ದರೋ ಆ ಪಕ್ಷದವರೇ ಹಿಂದಿ ಏರಿಕೆ ಮಾಡಿರೋದು ಎಂದರು.

ಅದಲ್ಲದೇ, ಏಕ್ ಭಾರತ್ ಶ್ರೇಷ್ಟ ಭಾರತ್ ಅಂತ ನಮ್ಮ ಪಕ್ಷ ಹೊಸ ಯೋಜನೆ ಜಾರಿ ಮಾಡಿದೆ. ಬೇರೆ ಬೇರೆ ರಾಜ್ಯಗಳ ಉತ್ಸವಗಳನ್ನ ಬೇರೆ ಬೇರೆ ರಾಜ್ಯಗಳಲ್ಲಿ ಮಾಡಬೇಕು. ಭಾಷೆ ಬಾಂಧವ್ಯದ ಸಂಕೇತ ಅಂತಾ ನಾನು ಭಾವಿಸುತ್ತೇನೆ. ಆದ್ರೆ ಕೆಲವರು ಅದನ್ನ ಬೆಂಕಿ ಹಚ್ಚೋಕೆ ಬಳಸುತ್ತಾರೆ. ಬೇರೆ ಬೇರೆ ರಾಜ್ಯಗಳು ಹಾಗೂ ಭಾಷೆಗಳ ಉತ್ಸವ ನಡೆದಾಗ ಸಾಂಸ್ಕೃತಿಕ ಸಂಬಂಧ ಬೆಳೆಯುತ್ತೆ. ಸ್ವತಂತ್ರ್ಯ ಪೂರ್ವದಲ್ಲಿ ಎಲ್ಲೂ ಭಾಷೆ ವಿಚಾರದಲ್ಲಿ ಗಲಾಟೆಗಳು ಆಗಲಿಲ್ಲ. ಭಾರತ ಜನನಿಯ ತನುಜಾತೆ ಅಂತಾ ಕುವೆಂಪು ಹೇಳಿದ್ದಾರೆ. ಅದನ್ನ ಅರ್ಥ ಮಾಡಿಕೊಂಡು ಮಾತನಾಡಬೇಕು. ಹಿಂದಿಗೆ ಸಿಗುವ ಸನ್ಮಾನ ಕನ್ನಡಕ್ಕೂ ಸಿಗಬೇಕು ಎಂದು ಹೇಳಿದರು.

ಇನ್ನು, ಸಿದ್ದರಾಮಯ್ಯ ಕಚ್ಚೆ ಹರುಕ ಅಂತ ಸಿ.ಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಜನರ ಮಾತು ಅಂತ ಅವರು ಹೇಳಿದ್ರು. ನಾನು ಜನರ ಮಾತು ಅಂತಾ ಹೇಳಿದ್ದೇನೆ. ಮಾತು ಅನ್ನೋದು ಅವರಿಗೆ ಮಾತ್ರ ಬರುವುದಲ್ಲ ನಮಗೂ ಬರುತ್ತೆ, ಕೆಲವರು ಪ್ರಧಾನಿಗಳನ್ನ, ಸ್ವಾಮೀಜಿಗಳನ್ನ ಏಕವಚನದಲ್ಲಿ ಮಾತನಾಡಿದ್ದಾರೆ. ಅವರ ಬಗ್ಗೆ ಮಾತನಾಡುವಾಗ ಹುದ್ದೆಗಳು ನೆನಪಾಗುವುದಿಲ್ಲವಾ? ವಿಶ್ವನಾಥ್ ಅವರು ಸಿದ್ದರಾಮಯ್ಯನವರು ಒಂದೆ ಊರಿನವರು ಎಂದು ಅವರ ಹೆಸರು ಪ್ರಸ್ತಾಪ ಮಾಡಿದ್ದೆ ಎಂದರು.

RELATED ARTICLES

Related Articles

TRENDING ARTICLES