Tuesday, November 5, 2024

ನಲಪಾಡ್​ ಅಕಾಡೆಮಿ ತೆರವು ಬಗ್ಗೆ ಹರಿಹಾಯ್ದ ಶಾಸಕ ಎನ್​.ಎ ಹ್ಯಾರಿಸ್​​​​​​

ಬೆಂಗಳೂರು: ನಲಪಾಡ್​ ಅಕಾಡೆಮಿ ಒತ್ತುವರಿ ತೆರವು ಕಾರ್ಯಾಚರಣೆಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಬಂದ ಹಿನ್ನಲೆಯಲ್ಲಿ ಶಾಸಕ ಎನ್.ಎ ಹ್ಯಾರಿಸ್ ಮಾತನಾಡಿದ್ದಾರೆ.

ಒತ್ತುವರಿ ತೆರವು ಕಾರ್ಯಾಚರಣೆ ಬಗ್ಗೆ ನಮಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಆ ಮೋರಿ ಎಲ್ಲಿದೆ,‌ ಎಲ್ಲಿಗೆ ತಲುಪುತ್ತದೆ ಗೊತ್ತಿಲ್ಲ. ನಮಗೆ ನೋಟಿಸ್​ ನೀಡದೆ ತೆರವು ಮಾಡ್ತಿದ್ದಾರೆ. ದೇಶದಲ್ಲಿ ಕಾನೂನು ಇದೆ. ಇದು ನನ್ನ ಪ್ರಾಪರ್ಟಿ, ಸರ್ಕಾರದ ಆಸ್ತಿ ಅಲ್ಲ, ಇಲ್ಲಿ ಪ್ರವಾಹ ಆಗಿಲ್ಲ, ಪ್ರವಾಹ ಆಗಿರೋ ಕಡೆ ತೆರವು ಮಾಡ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ರಾಜಕಾಲುವೆ ಒತ್ತುವರಿ ಬಗ್ಗೆ 25 ವರ್ಷದಿಂದ ಯಾರೂ ಪ್ರಶ್ನೆ ಮಾಡಿಲ್ಲ. ನಾನು ನಮ್ಮ ಜಾಗದ ದಾಖಲೆ ಕೊಡಬೇಕಲ್ವಾ, ಜಾಯಿಂಟ್ ಸರ್ವೇ ಮಾಡಬೇಕಿತ್ತು. ಶಾಲೆ ಒಳಗಡೆ ತೆರವು ಮಾಡ್ತಿಲ್ಲ. ಹೊರಗೆ ಮಾಡ್ತಿದ್ದಾರೆ, ಮಾಡಲಿ ಅಂತ ಬಿಟ್ಟಿದ್ದೇನೆ. ನಮ್ಮ ಬಳಿ ದಾಖಲೆ ಇದೆ, ಅದನ್ನ ಕೇಳೋದು ತಪ್ಪಾ, ರಾಜಕೀಯ ಷಡ್ಯಂತ್ರದ ಬಗ್ಗೆ ನಾನು ಮಾತಾಡಲ್ಲ. ಬಿಜೆಪಿ ಸರ್ಕಾರ ಕೂಡ ನಮ್ಮದೇ ಸರ್ಕಾರ, ನಾನು ಸಾಮನ್ಯ ಪ್ರಜೆಯಾಗಿ ಕೋರ್ಟ್ ಹೋಗಿ ತೆರವು ಬಗ್ಗೆ ಅಡೆತಡೆ ತಂದಿಲ್ಲ. ಮುಂದಿನ ದಿನ ಈ ಬಗ್ಗೆ ಮಾತಾಡಿಕೊಂಡು ಬಗೆಹರಿಸಿಕೊಳ್ತೀವಿ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES