Monday, November 18, 2024

ದಕ್ಷಿಣ ಆಫ್ರಿಕಾ ಮುಖ್ಯ ಕೋಚ್ ಹುದ್ದೆಗೆ ಮಾರ್ಕ್ ಬೌಚರ್​​​ ಗುಡ್ ​ಬೈ.?

ನವದೆಹಲಿ: ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ-20 ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಮಾರ್ಕ್ ಬೌಚರ್ ತಮ್ಮ ಜವಾಬ್ದಾರಿಯನ್ನು ತ್ಯಜಿಸಲಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರಕಟಿಸಿದೆ.

ಮಾರ್ಕ್ ಬೌಚರ್ ಡಿಸೆಂಬರ್ 2019ರಿಂದ ಮುಖ್ಯ ಕೋಚ್ ಸ್ಥಾನಕ್ಕೆ ನೇಮಕಗೊಂಡಿದ್ದರು, ಜನವರಿಯಲ್ಲಿ ತವರಿನಲ್ಲಿ ಭಾರತದ ವಿರುದ್ಧ ಸ್ಮರಣೀಯ ಗೆಲುವು ಸೇರಿದಂತೆ ದಕ್ಷಿಣ ಆಫ್ರಿಕಾ ತಂಡದ 11 ಟೆಸ್ಟ್ ಗೆಲುವುಗಳಿಗೆ ಸಾಕ್ಷಿಯಾಗಿದ್ದರು. ಮಾರ್ಕ್ ಬೌಚರ್ ತಮ್ಮ ಭವಿಷ್ಯದ ವೃತ್ತಿ ಮತ್ತು ವೈಯಕ್ತಿಕ ಉದ್ದೇಶಗಳಿಗೆ ಅನುಗುಣವಾಗಿ ಇತರ ಅವಕಾಶಗಳನ್ನು ಬಳಸಿಕೊಳ್ಳುವ ದೃಷ್ಟಿಯಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಸಿಎಸ್​ಯ ಹೇಳಿಕೆಯಲ್ಲಿ ತಿಳಿಸಿದೆ.

ಆಫ್ರೀಕಾ ಕ್ರಿಕೆಟ್​ ಬೌಚರ್​​ ನಿರ್ಧಾರವನ್ನು ಗೌರವಿಸುತ್ತದೆ ಮತ್ತು ಅವರ ಮುಂದಿನ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುತ್ತದೆ ಎಂದು ಹೇಳಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಸೀಮಿತ ಓವರ್‌ಗಳ ಕಣದಲ್ಲಿ, ಮಾರ್ಕ್ ಬೌಚರ್ ದಕ್ಷಿಣ ಆಫ್ರಿಕಾಕ್ಕೆ 12 ಏಕದಿನ ಹಾಗೂ 23 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನ ಗೆಲ್ಲಿಸಲು ನೆರವಾಗಿದ್ದಾರೆ.

RELATED ARTICLES

Related Articles

TRENDING ARTICLES