Wednesday, January 22, 2025

ನನಗೂ ವಿಡಿಯೋ,ಪೋಟೋಗೂ ಸಂಬಂಧ ಇಲ್ಲ : ಬಸವರಾಜ ದಡೇಸುಗೂರು

ಬೆಂಗಳೂರು : ನನಗೂ ವಿಡಿಯೋ,ಪೋಟೋಗೂ ಸಂಬಂಧ ಇಲ್ಲ, ಅದಕ್ಕೆ ಪರಸಪ್ಪ ಅವರೇ ಉತ್ತರ ಕೊಡ್ತಾರೆ ಎಂದು ವಿಧಾನಸೌಧದಲ್ಲಿ ಬಸವರಾಜ ದಡೇಸುಗೂರು ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಆರೋಪ‌ ಮಾಡಿದ್ದಾರೆ. ನನಗೂ ವಿಡಿಯೋ,ಪೋಟೋಗೂ ಸಂಬಂಧ ಇಲ್ಲ. ಅದಕ್ಕೆ ಪರಸಪ್ಪ ಅವರೇ ಉತ್ತರ ಕೊಡ್ತಾರೆ. ಬಹಳಷ್ಟು ವಿಡಿಯೋ ಇದ್ದಾವೆ ಎಂದು ಮಾಜಿ ಸಚಿವರು ಹೇಳಿದ್ದಾರೆ. ಮೊದಲು ಆ ವಿಡಿಯೋಗಳನ್ನು ಬಿಡುಗಡೆ ಮಾಡಲಿ. ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಸರಿಯಲ್ಲ ಎಂದರು.

ಇನ್ನು, ದೈರ್ಯ ಇದ್ದರೇ, ಎಲೆಕ್ಷನ್ ಗೆ ಬರಲಿ, ಮಾಧ್ಯಮಗಳಲ್ಲಿ ಸುಳ್ಳು ಹೇಳುವುದು ಬೇಡ, ಮಾಜಿ‌ ಮಂತ್ರಿಯೊಬ್ಬರು, ಹಾಲಿ ಶಾಸಕರ ಬಗ್ಗೆ ಹೇಗೆ ಮಾತಾಡಬೇಕು ಎಂದು ಗೊತ್ತಿರಬೇಕು, ಸ್ವಾಭಿಮಾನದಿಂದ ಇರಬೇಕು, ಸಭಾಧ್ಯಕ್ಷರರ ಮುಂದೆ ಬೇಕಾದರೆ ವಿಡಿಯೋ ಮಂಡಿಸಲಿ, ಆಡಿಯೋ ಬಗ್ಗೆ ಪರಸ್ಪಪ್ಪ ಉತ್ತರ ಕೊಡ್ತಾರೆ, ಅಧಿವೇಶನದ ಬಳಿಕ ಉತ್ತರ ಕೊಡ್ತೇನೆ‌, 22 ರ ಬಳಿಕ ಎಲ್ಲದಕ್ಕೂ ಉತ್ತರ ಕೊಡ್ತೇನೆ, 15 ಜನ ಹಣ ಕೊಟ್ಟಿರುವವರು ಇದ್ದಾರೆ ಎಂದು ಆರೋಪ ಮಾಡಿದ್ದಾರೆ, ನಂದೆ ಕಾರು ಕಳಿಸುತ್ತೇನೆ ಅವರನ್ನು ಕರೆದುಕೊಂಡು ಬಂದು ವಿಡಿಯೋ ಬಿಡುಗಡೆ ಮಾಡಲಿ, ಜನರ ಮುಂದೆ ಮೊದಲು ವಿಡಿಯೋ ಇಡಲಿ. ಸಿಎಂ ಅವರನ್ನು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಭೇಟಿ ಮಾಡಿದ್ದೇನೆ ಎಂದರು.

RELATED ARTICLES

Related Articles

TRENDING ARTICLES