Wednesday, January 22, 2025

ಒತ್ತುವರಿ ತೆರವು ಬಡವರ ಮೇಲೆ ದಾಳಿ, ಪ್ರಭಾವಿಗಳನ್ನ ಉಳಿಸುವ ಹುನ್ನಾರ

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಎಂಬ ಬಿಬಿಎಂಪಿ ನಾಟಕ ಮಾಡಿ ಬಡವರ ಮೇಲೆ ದಾಳಿ ನಡೆಸುವ ಮೂಲಕ ಪ್ರಭಾವಿಗಳ ಅಕ್ರಮಗಳನ್ನು ಉಳಿಸುವ ಹುನ್ನಾರವಿದೆ ಎಂದು ರಾಜ್ಯ ಕಾಂಗ್ರೆಸ್​ ಬಿಜೆಪಿ ಸರ್ಕಾರವನ್ನ ಪ್ರಶ್ನಿಸಿದೆ.

ಇತ್ತೀಚಿಗೆ ಮಳೆಯಿಂದ ಬೆಂಗಳೂರಿನ ಹಲವು ನಗರಗಳು, ರಸ್ತೆಗಳು, ಬಿಲ್ಡಿಂಗ್​ಗಳು ಜಲಾವೃತಗೊಂಡಿದ್ದವು ಈ ಬಗ್ಗೆ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್​ ಬಿಬಿಎಂಪಿ ನಾಟಕವು ಅಸಹಾಯಕರ, ಬಡವರ ಮೇಲೆ ದಾಳಿ ನಡೆಸುವ ಮೂಲಕ ಪ್ರಭಾವಿಗಳ ಅಕ್ರಮಗಳನ್ನು ಸಕ್ರಮಗೊಳಿಸುವ ಹುನ್ನಾರದಂತಿದೆ ಹರಿಹಾಯ್ದಿದೆ.

ಅಂತೆಯೇ, ರಾಜ್ಯ ಸರ್ಕಾರ ಐಟಿ ಕಂಪೆನಿಗಳಿಗೆ ಪತ್ರ ಬರೆಯುವ ಬಿಜೆಪಿ ಬಡವರಿಗೆ ಕನಿಷ್ಠ ನೋಟಿಸನ್ನೂ ನೀಡದೆ ಜೆಸಿಬಿ ನುಗ್ಗಿಸಿ ಮೆನಗಳನ್ನ ಕೆಡುತ್ತಿದೆ. ಆದರೆ, ಪ್ರಭಾವಿಗಳ ಜಾಗವನ್ನು ರಕ್ಷಿಸುತ್ತಿರುವುದೇಕೆ ಎಂದು ಕಾಂಗ್ರೆಸ್​ ಕೇಳಿದೆ.

RELATED ARTICLES

Related Articles

TRENDING ARTICLES