Wednesday, January 22, 2025

ಸಿದ್ದರಾಮಯ್ಯ ನಿವಾಸಕ್ಕೆ ಲಗ್ಗೆ ಹಾಕಿ ಭೇಟಿಗೆ ಪಟ್ಟು ಹಿಡಿದ PSI ಅಭ್ಯರ್ಥಿಗಳು

ಬೆಂಗಳೂರು: ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ ಹಿನ್ನಲೆಯಲ್ಲಿ ಪಿಎಸ್​ಐ ಅಭ್ಯರ್ಥಿಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ಶಿವಾನಂದ ವೃತ್ತದ ಕುಮಾರಕೃಪಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿದ 100 ಕ್ಕೂ ಹೆಚ್ಚು ಪಿಎಸ್ ಐ ಅಭ್ಯರ್ಥಿಗಳು, ಸಿದ್ದರಾಮಯ್ಯ ಭೇಟಿ ಮಾಡಿ ಪಿಎಸ್​ಐ ಬಗ್ಗೆ ಸದ್ಯ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಲು ಆಗಮಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರನ್ನ ಭೇಟಿಯಾಗಲು ಅನುಮತಿ ಕೇಳದೆ ಪಿಎಸ್​ಐ ಅಭ್ಯರ್ಥಿಗಳು ಬಂದ ಕಾರಣಕ್ಕೆ ಪೊಲೀಸರು ಭೇಟಿಗೆ ಆಕ್ಷೇಪ ವ್ಯಕ್ತಪಡಿದ್ದಾರೆ. ಸಿದ್ದರಾಮಯ್ಯ ನಿವಾಸದ ಮುಂಭಾಗದ ಲಾನ್ ನಲ್ಲಿ‌ ಪಿಎಸ್​ಐ ಅಭ್ಯರ್ಥಿಗಳು ಕಾದು ಕುಳಿತಿದ್ದಾರೆ. ಸೆಕ್ಯೂರಿಟಿ ಕಾರಣ ನೀಡಿ ವಾಪಾಸ್ ತೆರಳುವಂತೆ ಪಿಎಸ್​ಐ ಅಭ್ಯರ್ಥಿಗಳಿಗೆ ಪೊಲೀಸರು ಮನವೊಲಿಕೆ ಯತ್ನ ಮಾಡಿದ್ದಾರೆ.

ಆದರೆ, ಪೊಲೀಸರ ಮನವೊಲಿಕೆಗೆ ಬಗ್ಗದ ಪಿಎಸ್​ಐ ಅಭ್ಯರ್ಥಿಗಳು, ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಾತನಾಡಿಯೇ ಹೋಗುವುದಾಗಿ ಪಟ್ಟು ಹಿಡಿದು ಅಭ್ಯರ್ಥಿಗಳು ಕುಳಿತಿದ್ದಾರೆ.

RELATED ARTICLES

Related Articles

TRENDING ARTICLES