Monday, December 23, 2024

ಶಾಸಕರ ಬರ್ತ್​ಡೇಗೆ ಇಡೀ ಮೈಸೂರು ಫ್ಲೆಕ್ಸ್​​ಮಯ

ಮೈಸೂರು : ಫ್ಲೆಕ್ಸ್.. ಫ್ಲೆಕ್ಸ್.. ಫ್ಲೆಕ್ಸ್. ಎಲ್ಲಿ ನೋಡಿದ್ರೂ, ಎತ್ತ ನೋಡಿದ್ರೂ ಫ್ಲೆಕ್ಸ್​ಗಳದ್ದೆ ಹವಾ. ಅಂದಹಾಗೆ ಇದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಬರ್ತ್​ಡೇ ಎಫೆಕ್ಟ್. ಸಾಂಸ್ಕೃತಿಕ ನಗರದಲ್ಲಿ ಎಲ್ಲಂದ್ರಲ್ಲಿ ಫ್ಲೆಕ್ಸ್ ಹಾಕುವಂತಿಲ್ಲ. ಆದ್ರೆ, ಬೇಲಿಯೇ ಎದ್ದು ಹೊಲ ಮೆಯ್ದ ಹಾಗಾಗಿದೆ ಮೈಸೂರು ಸ್ಥಿತಿ. ಯಾಕಂದ್ರೆ ನಮ್ಮ ನಾಯಕರು ಹೇಳೋದು ಒಂದು‌. ಮಾಡೊದು ಇನ್ನೊಂದು ಎನ್ನುವಂತಿದೆ. ಫ್ಲೆಕ್ಸ್, ಪ್ಲಾಸ್ಟಿಕ್ ವಿರುದ್ಧ ಬಿಜೆಪಿ ನಾಯಕರು ಪುಂಕಾನು ಪುಂಕವಾಗಿ ಭಾಷಣ ಬೀಗಿದ್ರು. ಆದ್ರೆ, ಶಾಸಕ ಎಲ್.ನಾಗೇಂದ್ರ ಬರ್ತ್​ಡೇಯಿಂದ ಇಡೀ ಮೈಸೂರು ಫ್ಲೆಕ್ಸ್​​ಮಯವಾಗಿದೆ.

ಇನ್ನೂ, ಮೈಸೂರಿನ ಚಾಮರಾಜ ಕ್ಷೇತ್ರದಾದ್ಯಂತ ಬೃಹತ್ ಕಟೌಟ್​ಗಳು ತಲೆ ಎತ್ತಿವೆ. ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಅಭಿಮಾನಿಗಳು ಶಾಸಕ ನಾಗೇಂದ್ರ ಬರ್ತ್​ಡೇಗೆ ಕೇಕ್ ಕಟಿಂಗ್, ಪಟಾಕಿ ಸಿಡಿಸೋದ್ರಿಂದ ಸಾರ್ವಜನಿಕರು ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿತ್ತು. ಸಾರ್ವಜನಿಕರು ಕೂಡ ಶಾಸಕರ ವರ್ತನೆಗೆ ತಿರುಗಿ ಬಿದ್ದಿದ್ರು.

ಒಟ್ಟಿನಲ್ಲಿ, ಫ್ಲೆಕ್ಸ್ ಮುಕ್ತ ಅಭಿಯಾನಕ್ಕೆ ಮುನ್ನುಡಿ ಹಾಕಬೇಕಿದ್ದ ಶಾಸಕರೇ ಫ್ಲೆಕ್ಸ್ ಹಾಕೊಂಡು ಮೈಸೂರಿನ ಅಂದಗೆಡಿಸಿದ್ದು, ಮೈಸೂರಿಗರ ಕೆಂಗಣ್ಣಿಗೆ ಗುರಿಯಾಗಿದೆ. ಆದಷ್ಟು ಶೀಘ್ರವೇ ಫ್ಲೆಕ್ಸ್​ಗಳನ್ನ ತೆರವು ಮಾಡಬೇಕು ಅನ್ನೋ ಒತ್ತಾಯ ಕೇಳಿಬಂದಿದೆ.

ಹರೀಶ್ ಜೊತೆ ಸುರೇಶ್.ಬಿ, ಪವರ್ ಟಿವಿ, ಮೈಸೂರು

RELATED ARTICLES

Related Articles

TRENDING ARTICLES