Monday, December 23, 2024

ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭ

ಬೆಂಗಳೂರು : ಇಂದಿನಿಂದ ಸೆಪ್ಟೆಂಬರ್ 23ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್​​ ಸಿದ್ಧತೆ ನಡೆಸಿದೆ.

JDSನಿಂದಲೂ ಸರ್ಕಾರಕ್ಕೆ ಚಾಟಿ ಬೀಸಲು ತಯಾರಿ ನಡೆಸಿದ್ದು, ಸರ್ಕಾರದ ತಾಕತ್ತು. ವಿಪಕ್ಷದ ಧಮ್ ಪ್ರದರ್ಶನಕ್ಕೆ ಅಖಾಡ ರೆಡಿಯಾಗಿದೆ. ಮಳೆಗಾಲದ ಅಧಿವೇಶನಕ್ಕೆ ಮಳೆಗಾಲದ ತೊಂದರೆಗಳೇ ಅಸ್ತ್ರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಕಾಂಗ್ರೆಸ್​​ ತಯಾರಿಯಾಗಿದೆ.

ಇನ್ನು, BJP ವರ್ಸಸ್ ಕಾಂಗ್ರೆಸ್ ಫೈಟ್​​ಗೆ ವೇದಿಕೆಯಾಗಲಿದೆ. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಕ್ಕೆ ಕಾಂಗ್ರೆಸ್​​ ಸಿದ್ಧವಾಗಿದ್ದು, ಬೊಮ್ಮಾಯಿ ಸರ್ಕಾರವನ್ನು ಕಟ್ಟಿಹಾಕಲು ಎಲ್ಲಾ ರೀತಿಯಲ್ಲಿ ತಯಾರಿ ನಡೆಸಿದೆ. ಗುತ್ತಿಗೆದಾರ ಸಂಘ ಮಾಡಿರುವ 40% ಕಮಿಷನ್ ಆರೋಪ, ಹಾಗೆನೇ ಬೆಂಗಳೂರು ಮಳೆ ಅನಾಹುತ ಬಗ್ಗೆ ಪ್ರಸ್ತಾಪ ಮಾಡಲು ತೀರ್ಮಾನಿಸಲಾಗಿದ್ದು, ಕಾಂಗ್ರೆಸ್​​​ಗೆ ಕೌಂಟರ್ ಕೊಡಲು ಸಿದ್ಧವಾಗಿರುವ ಬಿಜೆಪಿ ಅರ್ಕಾವತಿ ಲೇಔಟ್ ರೀಡೂ ಪ್ರಕರಣ ಪ್ರಸ್ತಾಪ ಮಾಡಲು CM ಟೀಂ ರೆಡಿಯಾಗಿದೆ. ಕಾಂಗ್ರೆಸ್ ಆರೋಪಕ್ಕೆ ದಾಖಲೆ ಸಮೇತ ಬಿಜೆಪಿ ಸಿದ್ಧಪಡಿಸಿಕೊಂಡಿದೆ.

RELATED ARTICLES

Related Articles

TRENDING ARTICLES