Sunday, January 19, 2025

ಹೊಟೇಲ್​ಗೆ ನುಗ್ಗಿದ ವಾಹನ; ಎದ್ನೋ ಬಿದ್ನೋ ಓಡಿದ ಗ್ರಾಹಕರು

ಕೊಪ್ಪಳ; ಕೊಪ್ಪಳದಲ್ಲಿ ಏಕಾಏಕಿ ಹೆದ್ದಾರಿ ಪಕ್ಕದ ಹೊಟೇಲ್​ಗೆ ಟೆಂಪೋ ಪ್ಯಾಸೆಂಜರ್ ವಾಹನ ನುಗ್ಗಿದ ಘಟನೆಯ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್​ಗೆ ನುಗ್ಗಿದ್ದು, ಕ್ಷಣಮಾತ್ರದಲ್ಲಿ ನಾಲ್ಕೈದು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ವೇಳೆ ಹೊಟೇಲ್​ ಮುಂದೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ಗೆ ವಾಹನ ಡಿಕ್ಕಿ ಹೊಡದ ರಭಸಕ್ಕೆ ಗ್ಯಾಸ್ ಲೀಕ್ ಆಗಿದೆ. ಆಗ ಹೊಟೇಲ್​ನಲ್ಲಿ್ದ ಜನರು ಎದ್ನೋ ಬಿದ್ನೋ ಎನ್ನುವಂತೆ ಗ್ರಾಹಕರು ಓಡಿದ್ದಾರೆ. ಈ ಘಟನೆಯಲ್ಲಿ ಟೆಂಪೋ ಪ್ಯಾಸೆಂಜರ್ ವಾಹನದ ಮುಂಬಾಗ ಸಂಪೂರ್ಣ ಜಖಂ ಆಗಿದೆ. ಎರಡ್ಮೂರು ಬೈಕ್ ಸೇರಿದಂತೆ ಹೊಟೇಲ್ ಪೀಠೋಪಕರಣಗಳಿಗೂ ಹಾನಿಯಾಗಿದೆ.

RELATED ARTICLES

Related Articles

TRENDING ARTICLES