Monday, December 23, 2024

ಜ್ಞಾನವಾಪಿ ಮಸೀದಿಯಲ್ಲಿ ಲಿಂಗ ಪತ್ತೆ, ಹಿಂದೂಗಳಿಗೆ ಮೊದಲ ಜಯ

ಲಖನೌ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಹಿನ್ನಲೆಯಲ್ಲಿ ಹಿಂದೂಗಳೂ ಸಲ್ಲಿಸಿರುವ ಅರ್ಜಿಗಳು ಅರ್ಹ ಎಂದು ವಾರಣಸಿ ಜಿಲ್ಲಾ ಕೋರ್ಟ್​​ ನ್ಯಾಯಾಧೀಶ ಎಕೆ ವಿಶ್ವೇಶ್​ ಅವರಿಂದ ಈ ತೀರ್ಪು ಹೊರಬಿದ್ದಿದೆ. ಈ ಮೂಲಕ ಹಿಂದೂಗಳಿಗೆ ಮೊದಲ ಜಯವಾಗಿದೆ.

ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ನಗರದ ಜ್ಞಾನವಾಪಿ ಮಸೀದಿಯೊಳಗೆ ಶಿವಲಿಂಗ ಪತ್ತೆ ಹಿನ್ನಲೆಯಲ್ಲಿ ಐವರು ಹಿಂದೂ ಮಹಿಳೆಯರು ಪೂಜೆ ಸಲ್ಲಿಸುವ ಹಕ್ಕನ್ನು ಕೋರಿ ವಾರಣಾಸಿಯ ನ್ಯಾಯಾಲಯವು ಮೊರೆ ಹೋಗಿದ್ದರು, ಈ ವಿಚಾರಣೆ ನಡೆಸಿ ಇಂದು ತೀರ್ಪು ನೀಡಿದ ನ್ಯಾಯಾಲಯ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನ​ ಪುರಸ್ಕರಿಸಿದೆ. ಕೇಸ್​ಗೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯನ್ನ ಸೆಪ್ಟೆಂಬರ್​ 22 ರಂದು ನ್ಯಾಯಾಲಯ ನಡೆಸಲಿದೆ.

ಜ್ಞಾನವಾಪಿ ಮಸೀದಿಯೊಳಗೆ ಯಾವುದೇ ಶಿವಲಿಂಗವಿರಲಿಲ್ಲ. ಈ ಜಾಗ ಅಲ್ಪಸಂಖ್ಯಾತರ ವಕ್ಫ್​ ಮಂಡಳಿಗೆ ಸೇರಿದ್ದು, ಈ ಜಾಗವನ್ನ ಯತಾಸ್ಥಿತಿಯಲ್ಲಿ ಕಾಪಾಡುವಂತೆ ಎಂದು ಮುಸ್ಲಿಂ ವಕ್ಫ್​ ಮಂಡಳಿ ವಾದ ಮಾಡಿತ್ತು. ಅಲ್ಲದೇ ಐವರು ಸಲ್ಲಿಸಿದ್ದ ಅರ್ಜಿಯನ್ನ ವಜಾ ಮಾಡುವಂತೆ ವಕ್ಫ್​ ಮಂಡಳಿ ಕೇಳಿಕೊಂಡಿತ್ತು.

RELATED ARTICLES

Related Articles

TRENDING ARTICLES