Monday, December 23, 2024

ಬೆಣ್ಣೆನಗರಿ ಕಾಂಗ್ರೆಸ್​ನಲ್ಲಿ ಭಿನ್ನಮತ; ಶಾಮನೂರು ವಿರುದ್ದ ಕೆಂಡ

ದಾವಣಗೆರೆ: ಸಮರಕ್ಕೆ ಹೋಗುವ ಮುನ್ನವೇ ಸೈನ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಂದು ಕಾರಣದಲ್ಲಿ ದಂಡ ನಾಯಕ ಆಗಿದ್ದವನನ್ನೆ ಬದಲಿಸುವ ಅಚ್ಚರಿಯ ಅಗ್ರಹಗಳು ಕೇಳಿ ಬಂದಿವೆ. ಎಷ್ಟೋ ದಶಕಗಳಿಂದ ಶಾಮನೂರು ಮನೆ ಸುತ್ತ ಸತ್ತಾಡುತ್ತಿದ್ದವರೇ ಇಂದು ಶಾಮನೂರು ವಿರುದ್ದ ಗುಡುಗುತ್ತಿದ್ದಾರೆ. ತೆರೆಮರೆ ಕಾದಾಟವಿಗಾ ತೆರೆ ಮೇಲೆ ಪ್ರದರ್ಶನ ಆಗುತ್ತಿದೆ. ಬೆಣ್ಣೆ ನಗರಿ ಜನಕ್ಕೆ ಅಚ್ಚರಿ ಹಾಗೂ ಆಶ್ಚರ್ಯ ಏಕಕಾಲಕ್ಕೆ ಆಗುತ್ತಿದೆ.

ಇತ್ತೀಚಿಗೆ ದಾವಣಗೆರೆಯಲ್ಲಿ ನಡೆದ ಪ್ರತಿ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಅಮೃತ ಮಹೋತ್ಸವ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದೆ. ಪ್ರತಿ ಪಕ್ಷಗಳಿಗೆ ನಡುಕ ಹುಟ್ಟಿದೆ. ಜೊತೆಗೆ ದೇಶದಲ್ಲಿ ಕಂಡರಿಯದ ಜನ ಸಾಗರ ದಾವಣಗೆರೆಯಲ್ಲಿ ಸೇರಿದ್ದು ಮಾತ್ರ ಐತಿಹಾಸಿಕ ಘಟನೆಗಳಲ್ಲಿ ದಾಖಲಾಗಿದೆ. ಸಿದ್ದರಾಮೋತ್ಸವದ ಚರ್ಚೆ ಇನ್ನೂ ಜನ ಮನಸ್ಸಿನಲ್ಲಿ ಹಚ್ಚು ಹಸಿರಾಗಿಯೇ ಇದೆ. ದೀಪದ ಕೆಳಗೆ ಕತ್ತಲು ಎನ್ನವಂತೆ ಸಿದ್ದರಾಮೋತ್ಸವ ನಡೆದ ನೆಲದಲ್ಲಿಯೇ ಕಾಂಗ್ರೆಸ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ.

ಇಂದು ಕಾಂಗ್ರೆಸ್ಸಿನಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ವಿರುದ್ಧ ಇರುವ ಗುಂಪು ಒಂದೇಡೆ ಸೇರಿ ಕೆಂಡಕಾರಿದೆ. ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸತತ ಮೂರನೇ ಸಲ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆದ ಹಿನ್ನೆಲೆ ದಾವಣಗೆರೆಯಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಇದರಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ವಿರೋಧಿ ಬಳಗವೇ ಸೇರಿದ್ದು ವಿಶೇಷವಾಗಿತ್ತು. ಅಚ್ಚರಿ ಸಂಗತಿ ಅಂದ್ರೆ ಹರಿಹರ ಶಾಸಕ ಎಸ್ ರಾಮಪ್ಪ ಸಹ ಇದರಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದು ಮನೆಗೆ ಮಾತ್ರ ಸೀಮಿತವಾಗಿದೆ. ಅವರ ಮನೆಯ ಚೇಲಗಳಿಂದ ಇಡೀ ಕಾಂಗ್ರೆಸ್ ಹಾಳಾಗುತ್ತಿದೆ. ಕಾಂಗ್ರೆಸ್ ಪಕ್ಷ ವನ್ನು ಉಳಿಸಬೇಕು ಎಂದು ಒಕ್ಕೊರಲಿನಿಂದ ಜಪವಾಗಿತ್ತು, ಅಲ್ಲದೆ ಈ ಗುಂಪಿನ ಪ್ರಮುಖ ಆಗ್ರಹ ಅಂದ್ರೆ ಸಿದ್ಧರಾಮಯ್ಯ ಅವರು ಶಾಮನೂರು ಶಿವಶಂಕರಪ್ಪ ಸ್ಪರ್ಧಿಸುವ ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಲು ಎಂಬುದು. ದಾವಣಗೆರೆ ದಕ್ಷಿಣ ವಿಧಾನ ಕ್ಷೇತ್ರದಿಂದ ಸಿದ್ದರಾಮಯ್ಯ ರನ್ನ ನಿಲ್ಲಿಸಿ ಸುಲಭವಾಗಿ ಗೆಲ್ಲಿಸಿ ಕಳುಹಿಸುತ್ತೇವೆ ಎಂದು ಎಂಎಲ್ ಸಿ ಅಬ್ಲುಲ್ ಜಬ್ಬಾರ್ ತಿಳಿಸಿದರು.

ಇನ್ನೂ ಅಲ್ಪಸಂಖ್ಯಾತರೇ ನಿರ್ಣಯರಾಗಿರುವ ಮ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ. ದಾವಣಗೆರೆ ನಾಯಕ ಸಮಾಜದ ಪ್ರಭಾವಿ ಮುಖಂಡ ಬಿ ವೀರಣ್ಣ ಬಹುತೇಕರು ಶಾಮನೂರು ಕುಟುಂಬದ ಆಪ್ತರೇ ನಿರಂತರವಾಗಿ ಅವರ ಮನೆ ಸುತ್ತಲು ಇರುವ ನಾಯಕರೇ ಆದ್ರೆ ಇಂತಹ ನಾಯಕರು ಆಕ್ರೋಶಗೊಂಡಿದ್ದಾರೆ. ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ, ಅವರು ಹೇಳಿದ್ದೆ ವೇದ ವಾಕ್ಯವಾಗಿದೆ. ಕಾರ್ಯಕರ್ತರಿಗೆ ಮುಖಂಡಿಗೆ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಲಾಗಿದ್ದು, ಜೊತೆಗೆ ಜಿಲ್ಲಾ ಪಂಚಾಯಿ ಮಾಜಿ ಅಧ್ಯಕ್ಷ ಡಾ. ವೈ ರಾಮಪ್ಪ ಅವರನ್ನ ಕಾಂಗ್ರೆಸ್ ನಿಂದ ಉಚ್ಚಾಟನೆ ಮಾಡಲಾಗಿದ್ದು. ಅದಕ್ಕೂ ಇಂದಿನ ಸಭೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಇಷ್ಟರಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ಜನ್ಮ ದಿನವಿದೆ. ಇದಕ್ಕೆ ಸಿದ್ದರಾಮಯ್ಯ, ಡಿಕೆಶಿ ಆಗಮಿಸಲಿದ್ದಾರೆ.

ಆದ್ರೆ ಕಾಂಗ್ರೆಸ್ಸಿನ ಒಂದು ಗುಂಪು ಶಾಮನೂರರು ಕುಟುಂಬದ ವಿರುದ್ಧ ಹೋರಾಟಕ್ಕೆ ಸಜ್ಜಾಗಿರುವುದು ಅಚ್ಚರಿ ತಂದಿದೆ. ಅಲ್ಲದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಬದಲಿಸಿ ಎನ್ನುವ ಕೂಗು ಕೂಡ ಕೇಳಿ ಬಂದಿದೆ. ಇನ್ನೆನ್ನೂ ಚುನಾವಣೆ ಹತ್ತಿರವಿದೆ. ಹೀಗಿರುವಾಗ ದಾವಣಗೆರೆಯಲ್ಲಿ ಮಾತ್ರ ಕೈ ನಡುವೆ ಕಾದಾಟ ಶುರುವಾಗಿದೆ, ಅದು ಶಾಮನೂರು ನಾಯಕತ್ವವನ್ನೆ ಬದಲಿಸಬೇಕು ಎಂಬ ಕೂಗು ಕೇಳಿ ಬಂದಿದ್ದು, ಸದ್ಯ ದಾವಣಗೆರೆ ಕಾಂಗ್ರೆಸ್ ಹೊಡೆದ ಮನೆಯಾಗಿದೆ.

ಮಧುನಾಗರಾಜ್ ಕುಂದುವಾಡ, ಪವರ್ ಟಿವಿ ದಾವಣಗೆರೆ

RELATED ARTICLES

Related Articles

TRENDING ARTICLES