Sunday, December 22, 2024

ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ರ ಬ್ಲಡ್ ಗ್ರೂಪ್ ಒಂದೆ : ಸಿಟಿ ರವಿ

ಬೆಂಗಳೂರು : ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ನನ್ನದಲ್ಲ, ಜಾಸ್ತಿ ವಿಷಯ ಬೇಕು ಅಂದ್ರೆ ವಿಶ್ವನಾಥ್ ಬರ್ತಾರೆ. ಸಿದ್ದರಾಮಯ್ಯ ಹಾಗೂ ವಿಶ್ವನಾಥ್ ರ ಬ್ಲಡ್ ಗ್ರೂಪ್ ಒಂದೆ.ಪ್ರಾಸ ಬದ್ದವಾಗಿ ಸಿಟಿನ ಲೂಟಿ ಅನ್ನುವುದಾದರೆ ಸಿದ್ದುನ ಪೆದ್ದ ಅನ್ನಬಹುದು ಎಂದರು.

ಇನ್ನು, ಕೆಂಪಣ್ಣನವರ ಆಯೋಗ ಸತ್ಯಾಸತ್ಯತೆಯನ್ನ ಹೊರಗೆ ತರಲು ರಚನೆ ಮಾಡಿದ್ದು. ಟಿಎ,ಡಿಎ ತೆಗೆದುಕೊಳ್ಳಲು ಕೆಂಪಣ್ಣ ಆಯೋಗ ರಚನೆ ಮಾಡಿದ್ದಲ್ಲ. ಸಿಟಿನ ಲೂಟಿ ಅನ್ಬೇಕಾದ್ರೆ, ಇವರನ್ನ ಏನೆಂದು ಕರೆಯಬೇಕು. ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ? ಟೆಬಲ್ ಗುದ್ದಿ ಕೇಳ್ತಿದ್ರು. ನಾನು ಏನು ಹೇಳಬೇಕೋ ಅದನ್ನ ಸೂಕ್ಷ್ಮವಾಗಿ ಹೇಳಿದ್ದೇನೆ ಎಂದು ಹೇಳಿದರು.

ಅದಲ್ಲದೇ, ನನಗೆ ಕೇಳಿದಂತೆ ಇತರರಿಗೂ ಅಷ್ಟೇ ಗಟ್ಟಿಯಾಗಿ ಪ್ರಶ್ನೆ ಕೇಳಿ. ಸಮಾಜವಾದಿಗಳ ಮಜವಾದಿ ತನ ನೋಡ್ತಿದ್ದೇನೆ. ಸೆಂಟ್ ಹೊಡೆದುಕೊಂಡು ವಾಸನೆ ಮುಚ್ಚಿ ಹಾಕಲು ಸಾಧ್ಯವಿಲ್ಲ, ನಾನು ಹೇಳಿದ ವಿಚಾರ ಪಬ್ಲಿಕ್ ಡೊಮೈನ್​ಗೆ ಬಿಟ್ಟಿದ್ದೀನಿ. ಅವರು ಏನು ಪ್ರತಿಕ್ರಿಯೆ ಕೊಡ್ತಾರೆ ಅನ್ನೋದನ್ನ ನೋಡೋಣ. ನಾನು ಹೇಳಿಲ್ಲ ಎಂದು ಹೇಳಿಲ್ಲ, ನಿಮಗೂ ಜವಾಬ್ದಾರಿ ಇದೆ. ಉತ್ತರ ಕೊಡುವವರು ಏನು ಕೊಡ್ತಾರೆ ನೋಡೋಣ ಎಂದರು.

RELATED ARTICLES

Related Articles

TRENDING ARTICLES