ಬೆಂಗಳೂರು : ಬೊಮ್ಮಾಯಿ ಆಡಳಿತಕ್ಕೆ ಬಂದ ಮೇಲೆ ಖಡಕ್ ನಿರ್ಧಾರವನ್ನು ತೆಗೆದುಕೊಳ್ತಿಲ್ಲ. ಸಾಲು ಸಾಲು ಸವಾಲಿದ್ದರೂ ಬಿಗ್ ಆ್ಯಕ್ಷನ್ ಆಗ್ತಿಲ್ಲ ಅಂತ ಕೆಲವರು ಆರೋಪಿಸುತ್ತಿದ್ರು. ಇದನ್ನ ಬೆಂಗಳೂರು ಭೇಟಿ ವೇಳೆ ಅಮಿತ್ ಶಾ ಕೂಡ ಖಡಕ್ ಸೂಚನೆ ಕೊಟ್ಟು ಹೋಗಿದ್ರೆ. ಹೀಗಾಗಿ ಜನಸ್ಪಂದನಾ ಸಮಾವೇಶದ ಮೂಲಕ ಸಿಎಂ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ಸಾಕಷ್ಟು ಸವಾಲು ಹಾಕಿದ್ರು. ಹಾಗೇ ಕೂಲ್ ಆಗಿ ಮಾತಾನಾಡ್ತಿದ್ದ ಸಿಎಂ ಕಾಂಗ್ರೆಸ್ ನಾಯಕರಿಗೆ ನಮ್ಮ ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ಮುಂದೆಯೂ ಬಿಜೆಪಿ ಬರೋದು ಶತಃಸಿದ್ದ, ಧಮ್ ಇದ್ರೆ ನಮ್ಮನ್ನ ತಡೆಯಿರಿ ಅಂತ ಸವಾಲು ಹಾಕಿದ್ರು ಸಿಎಂ ಬೊಮ್ಮಾಯಿ. ಈ ಮೂಲಕ ಚುನಾವಣೆ ಹತ್ತಿರ ಬರ್ತಿದ್ದಂತೆ ಮತ್ತಷ್ಟು ಖಡಕ್ ನಿರ್ಧಾರ ತೆಗೆದುಕೊಳ್ಳುವ ಸಂದೇಶ ರವಾನಿಸಿದಂತೆ ಕಾಣುತ್ತಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗು ಕುಟುಂಬದ ಭ್ರಷ್ಟಾಚಾರ ಹಗರಣದ ಕುರಿತು ಪವರ್ ಟಿವಿ ವರದಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದೀಗ ಸೂಕ್ತ ತನಿಖೆಗೆ ಕೋರ್ಟ್ ಆದೇಶ ನೀಡಿ, ನೋಟಿಸ್ ಕೊಟ್ಟಿದೆ. ಸದ್ಯ, ಕಾಂಗ್ರೆಸ್ ನಾಯಕರು ಕೂಡ ಇದೇ ವಿಚಾರ ಇಟ್ಕೊಂಟು ಬಿಜೆಪಿ ವಿರುದ್ಧ ತಿರುಗಿ ಬೀಳಲು ರೆಡಿಯಾಗಿದ್ದಾರೆ. ನನ್ನ ಆಡಳಿತ ಕಾಲದ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಕೆಲವು ದಿನಗಳಿಂದ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಮೊನ್ನೆ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಅವರಿಗೆ ಹೈಕೋರ್ಟ್ ನೋಟಿಸ್ ನೀಡಿದ್ದನ್ನು ನೋಡಿದರೆ ಇವರು ಹೇಳಿದ್ದು ನನಗೋ, ಯಡಿಯೂರಪ್ಪನವರಿಗೋ ಎಂದು ಗೊಂದಲವಾಗುತ್ತಿದೆ ಅಂತ ವ್ಯಂಗ್ಯವಾಡಿದ್ದಾರೆ. ಹಾಗೆಯೇ ಧಮ್ ಇದ್ರೆ ಕಾಂಗ್ರೆಸ್ ಅಕ್ರಮ ಮಾಡಿದೆ ಅಂತ ಆರೋಪ ಮಾಡೋದು ಬಿಟ್ಟು ತನಿಖೆ ನಡೆಸಿ.. ನಮ್ಮನ್ನು ಹೆದರಿಸುತ್ತೀರಾ..? ಬ್ಲ್ಯಾಕ್‌ಮೇಲ್ ಮಾಡ್ತಿರಾ..? ಇದಕ್ಕೆಲ್ಲ ನಾವು ಹೆದರುವ ಗಿರಾಕಿಗಳಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಜನಸ್ಪಂದನ ಕಾರ್ಯಕ್ರಮ ಹಾಗೂ ನಾಯಕರು ಹೇಳಿದಂತ ಹೇಳಿಕೆಗಳಿಗೆ ಕಾಂಗ್ರೆಸ್ ಕಿಡಿಕಾರಿದೆ. ಇದು ಸರ್ಕಾರದ ಸಾಧನೆಯ ಉತ್ಸವಕ್ಕಿಂತ, ಕೇವಲ ಮುಖ್ಯಮಂತ್ರಿ ಹಾಗೂ ಮೂರ್ನಾಲ್ಕು ಮಂತ್ರಿಗಳ ಉತ್ಸವವಾಗಿತ್ತು ಅಂತಾ ವ್ಯಂಗ್ಯವಾಡಿದ್ದಾರೆ ಕಾಂಗ್ರೆಸ್ ನಾಯಕರು.
ಕಾಂಗ್ರೆಸ್‌ನಲ್ಲಿ ಬಹಳ ಉತ್ಸವಗಳು ಇವೆ ಎಂದು ಗದಗದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ರು.
ಸಿದ್ಧರಾಮೋತ್ಸವ, ಶಿವಕುಮಾರೋತ್ಸವ, ಪರಮೇಶ್ವರೋತ್ಸವ, ಜಮೀರೋತ್ಸವ ಮಾಡಿ, ನಾವು ಜನಸ್ಪಂದನ , ಜನೋತ್ಸವ ಮಾಡಿದ್ದೇವೆ.. ಈ ಹಿಂದೆ, ಹಾಸಿಗೆ, ದಿಂಬುಗಳನ್ನೂ ಸಹ ಅವರು ಬಿಡಲಿಲ್ಲ ಎಂದು ವ್ಯಂಗ್ಯಮಾಡಿದ್ದಾರೆ.
ಒಟ್ನಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಹಾಕಿದ ಸವಾಲಿಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಸಿಎಂ ಸುಳ್ಳು ಸಾಧನೆಗಳ ಬಗ್ಗೆ ರಾಜ್ಯದ ಜನತೆಗೆ ಹೇಳ್ತಿದ್ದಾರೆ ಅನ್ನೋದು ಕಾಂಗ್ರೆಸ್ ನಾಯಕರ ಆರೋಪವಾಗಿದೆ. ಇನ್ನೂ ನಾಳೆಯಿಂದ ನಡೆಯುವ ಮಳೆಗಾಲದ ಅಧಿವೇಶನದಲ್ಲಿ ಸಿಎಂ ಮಾಡಿರುವ ಆರೋಪಗಳಿಗೆ ಉತ್ತರ ನೀಡ್ತೀವಿ ಎಂದು ಸವಾಲಾಕಿದ್ದಾರೆ ಕೈ ನಾಯಕರು. ಏಟು-ಎದುರೇಟಿನಲ್ಲಿ ಯಾರು ಯಶಸ್ವಿಯಾಗ್ತಾರೆ ಅನ್ನೋದು ಕಾದು ನೋಡಬೇಕಿದೆ
ರೂಪೇಶ್ ಬೈಂದೂರು ಪವರ್ ಟಿವಿ