ಬೆಂಗಳೂರು : ನಿಲಿಕಾನ್ ಸಿಟಿ ರಸ್ತೆಗಳ ಸ್ಥಿತಿ ಹೇಗಾಗಿದೆ ಅಂದ್ರೆ. ಗುಂಡಿಗಳಲ್ಲಿ ರಸ್ತೆಯೋ..? ರಸ್ತೆಯಲ್ಲಿ ಗುಂಡಿಗಳೋ ಎನ್ನುವಂತಾಗಿದೆ. ಬಲಿಗಾಗಿ ಬಾಯ್ತೆರೆದು ಕಾಯ್ತಿರೋ ಯಮಗುಂಡಿಗೆ ಯುವತಿ ಬಲಿಯಾಗಿದ್ದಾಳೆ. HBR ಲೇಔಟ್ನ ಅಶ್ವತ್ಥ್ ನಗರ ಮುಖ್ಯ ರಸ್ತೆಯಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಡ್ರೈನೇಜ್ಗೆ ಬಿದ್ದ ಯುವತಿ ದಾರುಣವಾಗಿ ಮೃತಪಟ್ಟಿದ್ದಾಳೆ.
ರಣಮಳೆಯ ಆರ್ಭಟಕ್ಕೆ ರಾಜಧಾನಿಯ ರಸ್ತೆಗಳು ಗುಂಡಿಮಯವಾಗಿವೆ. ಈ ಮಧ್ಯೆ ರಸ್ತೆಗಳ ಗುಂಡಿಗಳನ್ನ ಮುಚ್ಚಾಬೇಕಾದ ಅಧಿಕಾರಿಗಳು, ಡಿಬ್ರಿಸ್ ಹಾಕಿ ಮತ್ತೊಂದು ಅವಾಂತರ ಮಾಡಿದ್ದಾರೆ. ನಯಾ ಪೈಸೆ ಖರ್ಚಿಲ್ಲದೇ ಕಟ್ಟಡ ಅವಶೇಷಗಳನ್ನ ಸುರಿದ್ದಾರೆ. ಇನ್ನು ಗುಂಡಿಗಳಿಗೆ ಆಳೆತ್ತರ ಅವಶೇಷ ಸುರಿದಿದ್ದರಿಂದ ದಿಬ್ಬದಂತಿದ್ದ ರಸ್ತೆಯಲ್ಲಿ ವಾಹನ ಸವಾರರು ಓಡಾಡಲು ಹರಸಾಹಸಪಡಬೇಕಿದೆ.
ರಸ್ತೆಗಳ ಗುಂಡಿ ಮುಚ್ಚುತ್ತೀವಿ ಅಂತ ಇಟ್ಟಿಗೆ ತಂದು ಹಾಕಿದ್ದಾರೆ. ಈ ಇಟ್ಟಿಗೆಯ ರೋಡಲ್ಲಿ ವಾಹನ ಸವಾರರ ಪ್ರಾಣ ಹೋದ್ರೆ ಯಾರು ಹೊಣೆ. ರಸ್ತೆ ಗುಂಡಿಗಳಿಗೆ ಅಮಾಯಕ ಜನರ ಪ್ರಾಣ ಹೋಗುತ್ತಿದೆ. ರಸ್ತೆ ಗುಂಡಿಗಳಿಗೆ ಬಿದ್ದು ಯಾವ ರಾಜಾಕಾರಣಿ, ಯಾವ ಅಧಿಕಾರಿಗಳು ಸತ್ತಿದ್ದಾರೆ ಹೇಳಿ ಅಂತ ಬೈಕ್ ಸವಾರರು ಆಕ್ರೋಶ ವ್ಯಕ್ತ ಪಡಿಸಿದ್ರು.
ಈಗಾಗಲೇ ಬೆಂಗಳೂರಿನ ರಸ್ತೆಗಳು ಅದೋಗತಿ ತಲುಪಿದೆ. ಜನರು ಮಾತ್ರವಲ್ಲ. BMTC ಬಸ್ಗೂ ರಸ್ತೆ ಗುಂಡಿ ಎಫೆಕ್ಟ್ ತಟ್ಟಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಪೀಣ್ಯ ಕಡೆ ತೆರಳುತ್ತಿದ್ದ ಬಸ್, ಮಾಗಡಿ ರಸ್ತೆ ಬಳಿ ಗುಂಡಿಯಲ್ಲಿ ಸಿಲುಕಿ ಬಾರೀ ಅವಾಂತರವೇ ಸೃಷ್ಟಿಯಾಯ್ತು. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಗುಂಡಿಗಳನ್ನ ಸರಿಪಡಿಸಲಿ ಅನ್ನೋದೇ ಪವರ್ ಟಿವಿ ಕಳಕಳಿ.
ಮಲ್ಲಾಂಡಳ್ಳಿ ಶಶಿಧರ್ ಜೊತೆ ಸ್ವಾತಿ ಪುಲಗಂಟಿ, ಮೆಟ್ರೋ ಬ್ಯೂರೋ, ಪವರ್ ಟಿವಿ