Monday, December 23, 2024

ಮುಖ್ಯಮಂತ್ರಿ ಶಿಂಧೆ ಹಾಗೂ ಮಾಜಿ ಸಿಎಂ ಠಾಕ್ರೆ ಬೆಂಬಲಿಗರ ನಡುವೆ ಹೊಡೆದಾಟ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಶಿವಸೇನೆ ಪಕ್ಷದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಬೆಂಬಲಿಗರ ನಡುವೆ ಗಣೇಶ್ ವಿಸರ್ಜನೆ ವೇಳೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಈ ಘಟನೆ ನಂತರ ಎರಡು ಗುಂಪುಗಳ ದೂರುಗಳ ನಂತರ, ಮುಂಬೈ ಪೊಲೀಸರು ಹಾಗೂ ಸ್ಥಳೀಯ ಶಾಸಕ ಸದಾ ಸರ್ವಾಂಕರ್ ಸೇರಿದಂತೆ ಎರಡೂ ಕಡೆಯ 10 ರಿಂದ 20 ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಈ ಘಟನೆ ಸಂಬಂಧ ದಾದರ್ ಪೊಲೀಸರು ಐವರು ಶಿವ ಸೇನಾ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ಘಟನೆಯಲ್ಲಿ ಸಂತೋಷ್ ತಲವನೆ ಹಾಗೂ ಮಹೇಶ್ ಸಾವಂತ್ ಮೇಲೆ ಸೇರಿದಂತೆ 30 ಮಂದಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಲವನೆ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದರೆ, ಮಹೇಶ್ ಸಾವಂತ್ ಶಿವಸೇನೆ ಪಕ್ಷದ ನಾಯಕರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಠಾಕ್ರೆಯನ್ನು ಬೆಂಬಲಿಸಿರುವ ಶಿವಸೇನಾ ಸಂಸದ ಅರವಿಂದ್ ಸಾವಂತ್ ಘರ್ಷಣೆಯ ಸ್ಥಳದಲ್ಲಿ ಸಾರ್ವಜನಿಕವಾಗಿ ಗುಂಡು ಹಾರಿಸಿದ ಆರೋಪದ ಮೇಲೆ ಬಿಜೆಪಿಯ ಶಿಂಧೆ ಸರ್ಕಾರದ ಶಾಸಕ ಸದಾ ಸರ್ವಾಂಕರ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರ ಬಂಧನದ ನಂತರ ದಾದರ್ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದ ಶಿವಸೇನಾ ಸಂಸದ ಅರವಿಂದ್ ಸಾವಂತ್, ಬಂಧಿತರನ್ನು ಬಿಡುಗಡೆ ಮಾಡದಿದ್ದರೆ ಮತ್ತು ಸರ್ವಾಂಕರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ಧ ಶಿವಸೇನೆ ಪಕ್ಷವು ಬೀದಿಗಿಳಿಯುತ್ತದೆ. ನಿಜವಾದ ಶಿವ ಯಾರು ಎಂದು ಜನರಿಗೆ ತಿಳಿಯುತ್ತದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES