Thursday, December 19, 2024

ಪವರ್ ಜೊತೆ ಚಾರ್ಮ್​ ಸೀಕ್ರೆಟ್ ಬಿಚ್ಚಿಟ್ಟ ರಮೇಶ್

ಚಿರ ಯುವಕ, ಸರಿಸಾಟಿಯಾಗದ ನಿರೂಪಕ, ಮಾತುಗಳ ಮೂಲಕವೇ ಎಲ್ಲರನ್ನು ಮಂತ್ರಮುಗ್ಧಗೊಳಿಸೋ ಮೋಡಿಗಾರ, ಮೇಧಾವಿ, ಅಪ್ರತಿಮ ಕಲಾವಿದ, ಸುಂದರಾಂಗ, ಉಫ್​​..! ಒಂದಾ ಎರಡಾ, ರಮೇಶ್​ ಅರವಿಂದ್​ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆಯೇ. ಯೆಸ್​​.. ಕನ್ನಡ ಸಿನಿಲೋಕದಲ್ಲಿ ವಿಭಿನ್ನ ಛಾಪು ಮೂಡಿಸಿರೋ ರಮೇಶ್​ ಬರ್ತ್​​ ಡೇ ಸಂಭ್ರಮದಲ್ಲಿದ್ದಾರೆ. ಪವರ್​ ಟಿವಿ ಜತೆ ನೀವೆಲ್ಲೂ ಕೇಳಿರದ ಇಂಟ್ರೆಸ್ಟಿಂಗ್​ ಸೀಕ್ರೇಟ್ಸ್​​ ಹಂಚಿಕೊಂಡಿದ್ದಾರೆ. ಅದೇನ್​ ಗೊತ್ತಾ ..? ನೀವೇ ಓದಿ.

ವಯಸ್ಸು ಕೇಳಿದ್ದಕ್ಕೆ ಬಿದ್ದು ಬಿದ್ದು ನಕ್ಕ ಅರವಿಂದ್​​​​..!

ಕನ್ನಡ ಸಿನಿಲೋಕದಲ್ಲಿ ರಮೇಶ್​ ಅರವಿಂದ್​ ಬಗ್ಗೆ ಕಿರು ಪರಿಚಯದ ಅವಶ್ಯಕತೆಯೇ ಇಲ್ಲ. ಅಂದೂ, ಇಂದು, ಮುಂದಿನ ಜನರೇಷನ್​ಗೂ ರಮೇಶ್​​ ಚಿರಯುವಕನಾಗಿಯೇ ಮಿಂಚುವ ಸ್ಯಾಂಡಲ್​ವುಡ್​​ನ ಅದ್ಭುತ ಸ್ಟಾರ್​ ನಟ. ಮಾಸದ ಅಂದ, ಹಾಲುಗಲ್ಲದ ಚೆಲುವು, ಸದಾ ಮುಗುಳ್ನಗುವ ಸೂರ್ತಿದಾಯಕ ಮಾತಿನ ವೀರ, ಧೀರ, ಸಮ್ಮೋಹಕ ಸರದಾರ ರಮೇಶ್​ ಅರವಿಂದ್​.

58ನೇ ಬರ್ತ್​ಡೇ ಖುಷಿಯಲ್ಲಿರೋ ರಮೇಶ್​ ಸಿನಿಜರ್ನಿಯೇ ರೋಚಕ. ಸಿನಿಮಾ, ಶಿಕ್ಷಣ, ಸಾಮಾಜಿಕ ಸೇವೆ ಎಲ್ಲಾ ರಂಗದಲ್ಲೂ ಬ್ಯುಸಿಯಾಗಿರೋ ಬಹುಬಾಷಾ ನಟ. ಕನ್ನಡ, ತಮಿಳು, ತೆಲುಗು ಸೇರಿದಂತೆ ಮಲಯಾಳಂ ಸಿನಿಮಾಗಳಲ್ಲೂ ಹೆಸ್ರು ಮಾಡಿದ ಶ್ರೇಷ್ಠ ನಟ ರಮೇಶ್​​ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ರು.

ಇದೇ ಮೊದಲ ಬಾರಿಗೆ ಸ್ಟಾರ್ ನಟರೊಬ್ಬರು ಫ್ಯಾನ್ಸ್​ಗೆ ತಮ್ಮ ಫೋನ್​ ನಂಬರ್​ ನೀಡಿದ್ದಾರೆ. ವಿಶ್​ ಮಾಡೋ ಜತೆಗೆ ಸಲಹೆ ನೀಡೋ ಅವಕಾಶ ಕಲ್ಪಿಸಿದ್ದಾರೆ. ಅದ್ಭುತ ಭಾಷಣಕಾರ, ಯುವಕರ ಪಾಲಿನ ಆಶಾಕಿರಣ ರಮೇಶ್​ ಅರವಿಂದ್​ ಟೈಮ್​ ಮ್ಯಾನೇಜ್​ ಮೆಂಟ್​ ಸೀಕ್ರೆಟ್​ ಬಿಚ್ಚಿಟ್ಟಿದ್ದಾರೆ.

ರಮೇಶ್​ ಅರವಿಂದ್​ ಬರ್ತ್​​ ಡೇ ಸಲುವಾಗಿ ಶಿವಾಜಿ ಸುರತ್ಕಲ್​ 2 ಟೀಸರ್​ ರಿಲೀಸ್​ ಆಗಿದೆ. ಮಿಸ್ಟೇರಿಯಸ್​ ಕೇಸ್​ ಮಾಯಾವಿಯಾಗಿ ರಮೇಶ್​ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ಸಾವಿರ ಕೋಟಿ ದೋಚುವ ಸಿನಿಮಾಗೆ ರಮೇಶ್​ ಪ್ಲಾನ್​ ಮಾಡಿಕೊಂಡಿದ್ದಾರೆ.

140ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮನರಂಜಿಸಿದ ಸರಸ್ವತಿ ಪುತ್ರ ರಮೇಶ್​​​ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಮೃತವರ್ಷಿಣಿ, ಅಮೇರಿಕಾ ಅಮೇರಿಕಾ, ಆಪ್ತಮಿತ್ರ, ಪುಷ್ಪಕ ವಿಮಾನ ಮುಂತಾದ ಹಿಟ್ ಸಿನಿಮಾಗಳಲ್ಲಿ ರಮೇಶ್ ಅಭಿನಯಿಸಿದ್ದಾರೆ. ಅನೇಕ ಸಿನಿಮಾಗಳು ಶತಕ ಬಾರಿಸಿವೆ. ಜನಸಾಮಾನ್ಯರಿಗೆ ಬದುಕನ್ನು ಜೀವಿಸುವ  ಸರಳ ಸಂದೇಶವನ್ನು ರಮೇಶ್​​ ಬಿಚ್ಚಿಟ್ಟಿದ್ದಾರೆ.

ಜನಮಾನಸದ ಮೆಚ್ಚಿನ ಹೀರೋ ಆಗಿ ಮಿಂಚುತ್ತಿರುವ ರಮೇಶ್​ ಅರವಿಂದ್​​ ಬಾಳು ಹಸನಾಗಿರಲಿ. ಕನ್ನಡದ ಹೆಮ್ಮೆಯ ಪ್ರತೀಕವಾಗಿರೋ ಅದ್ಭುತ ಕಲಾವಿದನಿಗೆ ಕನ್ನಡಾಭಿಮಾನಿಗಳ ಪರವಾಗಿ ಪವರ್​ ಟಿವಿ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES