Monday, December 23, 2024

ರಿಲೀಸ್​ಗೆ​ ರಾಕಿಂಗ್​ ರಾಣನ ಫ್ಯಾನ್ಸಿ ಡೇಟ್ ಫಿಕ್ಸ್..!

ಪಡ್ಡೆಹುಲಿ ಚಿತ್ರದಿಂದ ನಾಯಕನಟನಾಗಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್, ಇದೀಗ ರಾಣಾ ಅವತಾರದಲ್ಲಿ ಮಿಂಚ್ತಿದ್ದಾರೆ. ಟೀಸರ್​ನಿಂದ ರಾಣಾ ಗತ್ತು ಗಮ್ಮತ್ತು ತೋರಿಸಿದ್ದ ಶ್ರೇಯಸ್ ಮಂಜು, ಫಸ್ಟ್ ಟೈಂ ಲಾಂಗ್ ಹಿಡಿದು ಖದರ್​ ತೋರಿಸ್ತಿದ್ದಾರೆ. ಫೈನಲ್ಲಿ ಫ್ಯಾನ್ಸಿ ರಿಲೀಸ್​ ಡೇಟ್​ ಅನೌನ್ಸ್​ ಮಾಡಿರುವ ಚಿತ್ರತಂಡ ಗುಡ್​ನ್ಯೂಸ್​ ಕೊಟ್ಟಿದೆ.

  • ಬ್ಯೂಟಿ ಕ್ವೀನ್​ ರೀಷ್ಮಾ ಜತೆ ಶ್ರೇಯಸ್​ ರಂಗಿನೋಕುಳಿ

ಚೊಚ್ಚಲ ಸಿನಿಮಾ ಪಡ್ಡೆಹುಲಿ ಮೂಲಕ ಘರ್ಜಿಸಿದ ನಿರ್ಮಾಪಕ ಕೆ. ಮಂಜು ಅವ್ರ ಪುತ್ರ ಶ್ರೇಯಸ್​ ಮಂಜು ರಾಣಾ ಅವತಾರದಲ್ಲಿ ಬರ್ತಿದ್ದಾರೆ. ನಿರೀಕ್ಷಿಸಿದ ಸಕ್ಸಸ್ ಕಾಣದಿದ್ದರೂ, ಶ್ರೇಯಸ್​ಗೆ ಸಖತ್​​ ಹೆಸ್ರು ತಂದು ಕೊಡ್ತು. ಇದೀಗ ರಾಣಾ ಅವತಾರದಲ್ಲಿ ಅಬ್ಬರಿಸಿ ಬೊಬ್ಬಿರಿಯೋಕೆ ತುದಿಗಾಲಲ್ಲಿ ನಿಂತಿದ್ದಾನೆ ಶ್ರೇಯಸ್​​​​. ಯೆಸ್​​​.. ರಾಣಾ ಸಿನಿಮಾ ಇದೇ ನವೆಂಬರ್​ 11ಕ್ಕೆ ರಿಲೀಸ್ ಆಗ್ತಿದೆ.

ಏಕ್​ ಲವ್​ ಯಾ ಸಿನಿಮಾ ಮೂಲಕ ಸಿನಿರಸಿಕರ ಹೃದಯದಲ್ಲಿ ಪುಟ್ಟ ಗುಡಿ ಮಾಡಿರುವ ರೀಷ್ಮಾ ನಾಣಯ್ಯ ರಾಣಾನಿಗೆ ಜೋಡಿಯಾಗಿ ನಟಿಸ್ತಿದ್ದಾರೆ. ಈಗಾಗ್ಲೇ ಬಾಲಿವುಡ್ ರೇಂಜ್​ನಲ್ಲಿ ‘ರಾಣ’ ರಂಗೀನ್ ಸಾಂಗ್ ಕೂಡ ಯೂಟ್ಯೂಬ್​​ನಲ್ಲಿ ಕಮಾಲ್​ ಮಾಡಿದೆ. ಶ್ರೇಯಸ್ ಜೊತೆ ಸೊಂಟ ಬಳುಕಿಸಿರುವ ಬಿಂದಾಸ್​ ಬೆಡಗಿ ಸಂಯುಕ್ತಾ ಹೆಗ್ಡೆ ಸಿನಿಮಾಗೆ ಕಿಕ್​ಸ್ಟಾರ್ಟ್​ ಕೊಟ್ಟಿದ್ದಾರೆ.

ಸಿಂಗಲ್​ ಟೀಸರ್​ ಮೂಲಕವೇ ಚಿತ್ರಪ್ರೇಮಿಗಳ ಎದೆಯಲ್ಲಿ ರಾಣ ಎದೆಬಡಿತದ ಸಪ್ಪಳ ಶುರುವಾಗಿದೆ. ರಾಣಾ ಅಪ್ಡೇಟ್​​ಗಾಗಿ ಕಾಯ್ತಿದ್ದ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಸಿಕ್ಕಿದ್ದು, ಫ್ಯಾನ್ಸಿ ಡೇಟ್​ಗೆ ತೆರೆಗೆ ಬರೋಕೆ ರೆಡಿಯಾಗಿದೆ. 11:11:22ಕ್ಕೆ ಸಿಲ್ವರ್​ ಸ್ಕ್ರೀನ್​ ಮೇಲೆ ರಾಣಾ ದರ್ಬಾರ್​ ಶುರುವಾಗಲಿದೆ. ಈ ಡೇಟ್​ ಹಿಂದಿನ ರಹಸ್ಯ ಏನು ಅನ್ನೋದನ್ನ ಚಿತ್ರತಂಡ ಸದ್ಯದಲ್ಲೇ ಕನ್ಫರ್ಮ್​ ಮಾಡಲಿದೆ.

ರಾಣ ಚಿತ್ರಕ್ಕೆ ಱಪರ್ ಚಂದನ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿಯಿದೆ. ನಂದಕಿಶೋರ್ ನಿರ್ದೇಶನದ ಈ ಚಿತ್ರವನ್ನು ಗುಜ್ಜಾಲ್ ಪುರುಷೋತ್ತಮ್ ನಿರ್ಮಿಸ್ತಿದ್ದಾರೆ. ಎನಿವೇ ಪಡ್ಡೆ ಹುಲಿ ಉಗ್ರರೂಪ ಎಷ್ಟು ಘೋರವಾಗಿರುತ್ತೆ ಅನ್ನೋದು ಸೆಪ್ಟೆಂಬರ್​ಗೆ ಗೊತ್ತಾಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES