Friday, November 22, 2024

ನಾಳೆಯಿಂದ ಅಧಿವೇಶನ; ಬೊಮ್ಮಾಯಿ ಸರ್ಕಾರ ಕಟ್ಟಿಹಾಕಲು ಟಗರು ಗುಟುರು

ಬೆಂಗಳೂರು: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕೇವಲ 9 ತಿಂಗಳು ಮಾತ್ರ ಬಾಕಿ ಇದೆ. ಚುನಾವಣಾ ವರ್ಷದಲ್ಲಿ ನಡೆಯುತ್ತಿರುವ ಮಳೆಗಾಲ ಅಧಿವೇಶನ ಆಡಳಿತ ಪಕ್ಷ ಹಾಗು ಪ್ರತಿಪಕ್ಷಗಳಿಗೆ ತುಂಬಾನೇ ಮಹತ್ವದಾಗಿದೆ. ಸರ್ಕಾರದ ಮೇಲೆ ಬಂದಿರುವ ಸಾಲು ಸಾಲು ಭ್ರಷ್ಟಾಚಾರ ಆರೋಪಗಳು ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಅಸ್ತ್ರಗಳು ಸಿಕ್ಕಾಂತೆ ಆಗಿದೆ. 40% ಕಮಿಷನ್ ಆರೋಪ, ಪಿಎಸ್ ಐ ಹಗರಣ, ಉಪನ್ಯಾಸಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನ ಪ್ರಸ್ತಾಪ ಮಾಡುವ ಮೂಲಕ ಬೊಮ್ಮಾಯಿ ಸರ್ಕಾರವನ್ನ ಕಟ್ಟಿಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ.

ಇನ್ನು ಬಿಜೆಪಿ-ಕಾಂಗ್ರೆಸ್ ಜಂಗೀಕುಸ್ತಿಗೆ ಈ ಅಧಿವೇಶನದ ವೇದಿಕೆ ಸಜ್ಜಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರವನ್ನ ಕಟ್ಟಿಹಾಕಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಟೀಮ್ ರೆಡಿಯಾಗಿದೆ.

ನಾಳೆ ಅಧಿವೇಶನದ ಮೊದಲನೇ ದಿನ ಹಿನ್ನಲೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆಗೆ ಅವಕಾಶ ಮಾಡಿಕೊಡಲಾಗಿದೆ. ಸಚಿವರಾಗಿದ್ದ ಉಮೇಶ್ ಕತ್ತಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಾಡಲಾಗುತ್ತದೆ. ಮಂಗಳವಾರದಿಂದ ವಿಧಾನಮಂಡಲ ಅಧಿವೇಶನ ರಂಗೇರಲಿದೆ. ರಾಜ್ಯ ಗುತ್ತಿಗೆದಾರ ಸಂಘ ಆರೋಪ ಮಾಡಿರುವ 40% ಕಮಿಷನ್ ಬಗ್ಗೆ ನಿಲುವಳಿ ಸೂಚನೆ ಮಂಡನೆ ಮಾಡಲು ಪ್ರತಿಪಕ್ಷ ಕಾಂಗ್ರೆಸ್ ತೀರ್ಮಾನಿಸಿದೆ.

ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸಚಿವ ಮುನಿರತ್ನ ಮೇಲೆ ಮಾಡಿರುವ ಕಮಿಷನ್ ಆರೋಪ ಬಗ್ಗೆಯೂ ಪ್ರಸ್ತಾಪ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಅಲ್ಲದೇ, ಪಿಎಸ್​ಐ ಹಗರಣದಲ್ಲಿ ಬಿಜೆಪಿ ಶಾಸಕ ಬಸವರಾಜ ಡಡೇಸುಗೂರು ಆಡಿಯೋವನ್ನ ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ. ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ.

ಅತ್ತ ಕಡೆ ಸಿದ್ದರಾಮಯ್ಯ ಅವರ ಟೀಮ್​ ಪ್ರಸ್ತಾಪ ಮಾಡುವ ಆರೋಪಗಳಿಗೆ ತಿರುಗೇಟು ‌ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರ ತಂಡವು ತಯಾರಾಗಿದೆ.

ನಿನ್ನೆಯಷ್ಟೇ ಪ್ರತಿಪಕ್ಷ ಕಾಂಗ್ರೆಸ್​ಗೆ ಧಮ್, ತಾಕತ್ ಬಗ್ಗೆ ಆಕ್ರೋಶ ಭರಿತವಾದ ಭಾಷಣ ಮಾಡಿದ್ದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದ ಬಾಯಿ ಮುಚ್ಚಿಸಲು ರಣತಂತ್ರ ರೂಪಿಸಿದ್ದಾರೆ. ಸಿದ್ದರಾಮಯ್ಯ ಅವಧಿಯ ಅರ್ಕಾವತಿ ಲೇಔಟ್ ರೀಡೂ ಪ್ರಕರಣ, ಸೋಲಾರ್ ಪಾರ್ಕ್ ನಲ್ಲಿ ಅವ್ಯವಹಾರ ಆರೋಪ, ಹಾಸಿಗೆ ದಿಂಬು ಹಗರಣ ಸೇರಿದಂತೆ ಪ್ರಮುಖ ಹಗರಣಗಳ ಬಗ್ಗೆ ದಾಖಲೆ ಸಂಗ್ರಹ ಮಾಡಿದ್ದಾರೆ. ಸರ್ಕಾರದ ಮೇಲೆ ಪ್ರತಿಪಕ್ಷ ಮುಗಿಬಿದ್ದ ಸಂದರ್ಭದಲ್ಲಿ, ಸದನದಲ್ಲಿ ಸಿದ್ದರಾಮಯ್ಯ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣವನ್ನ ದಾಖಲೆ ಸಮೇತ ಪ್ರಸ್ತಾಪ ಮಾಡಲು ಸಿಎಂ ಬಸವರಾಜ್ ಬೊಮ್ಮಾಯಿ ನಿರ್ಧಾರ ಮಾಡಿದ್ದಾರೆ.

ಚುನಾವಣಾ ವರ್ಷದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಆಡಳಿತ ಪಕ್ಷ ಹಾಗು ಪ್ರತಿಪಕ್ಷಗಳಿಗೆ ಮಹತ್ವದಾಗಿದೆ. ಸರ್ಕಾರವನ್ನ ಕಟ್ಟಿಹಾಕಲು ಪ್ರತಿಪಕ್ಷ ಕಾಂಗ್ರೆಸ್ ಪ್ಲಾನ್ ಮಾಡಿದ್ರೆ, ಇದಕ್ಕೆ ಕೌಂಟರ್ ಅಟ್ಯಾಕ್ ಮಾಡಲು ಬೊಮ್ಮಾಯಿ ಸರ್ಕಾರ ಕೂಡ ಸಿದ್ಧತೆ ನೆಡೆಸಿದೆ.

ಗೋವಿಂದ್, ಪೊಲಿಟಿಕಲ್ ಬ್ಯುರೋ,ಪವರ್ ಟಿವಿ

RELATED ARTICLES

Related Articles

TRENDING ARTICLES