Sunday, December 22, 2024

11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ

ಗದಗ : 11 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ವೆಸಗಿದ್ದ 40 ವರ್ಷದ ಆರೋಪಿಗೆ ಆರೋಪಿಗೆ ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ಜೈಲುಶಿಕ್ಷೆ ವಿಧಿಸಿದೆ.

16 ಮೇ 2020 ರಂದು ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣ ನಡೆದಿತ್ತು. ತಂದೆ ತಾಯಿ ಗೋವಾಗೆ ದುಡಿಯಲು ಹೋಗಿದ್ದ ಬಾಲಕಿ, ಊರಲ್ಲಿ ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿದ್ದಳು. ಮನೆ ಮುಂದೆ ಆಟ ಆಡುತ್ತಿದ್ದ ಆಕೆಯನ್ನು ಧಾರಾವಾಹಿ ನೋಡಲು ಮನೆಯೊಳಗೆ ಕರೆದಿದ್ದ. ಒಂದು ಧಾರಾವಾಹಿ‌ ನೋಡಿ ಮರಳಿ ಬರುವಾಗ ಇನ್ನೊಂದು ಧಾರಾವಾಹಿ ಚೆನ್ನಾಗಿದೆ ನೋಡು ಅಂತಾ ಪ್ರೇರೇಪಿಸಿದ್ದಾನೆ. ಆಗ ಬಾಲಕಿ ಬೇಡ ಎಂದು ಮನೆೆಗೆ ವಾಪಸ್‌ ಆಗುತ್ತಿದ್ದರೂ, ಬಲವಂತವಾಗಿ ರೂಮ್‌ಗೆ ಹೊತ್ತೊಯ್ದು ಕೈಕಾಲು ಕಟ್ಟಿಹಾಕಿ, ತನ್ನ ವಿಕೃತ ಕಾಮ ಮೆರೆದಿದ್ದ. ಇದನ್ನು ಯಾರ ಬಳಿಯಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಅದಲ್ಲದೇ, ನಂತರ ಸಂತ್ರಸ್ತ ಬಾಲಕಿ ನೋವು ತಾಳಲಾರದೇ ತನ್ನ ಅಜ್ಜಿ ಬಳಿ ವಿಷಯ ಹೇಳಿದ್ದಳು. ಬಳಿಕ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2 ವರ್ಷದ ವಿಚಾರಣೆ ನಂತರ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಗದಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ತೀರ್ಪು ಪ್ರಕಟಿಸಿದ್ದಾರೆ.

RELATED ARTICLES

Related Articles

TRENDING ARTICLES