ತುಮಕೂರು: ದೂರು ನೀಡಲು ಬಂದಿದ್ದ ವ್ಯಕ್ತಿಗೆ ಪಾವಗಡ ಸಿಪಿಐ ಅಜಯ್ ಸಾರಥಿ ಅವಾಜ್ ಹಾಕಿದ ಘಟನೆ ಜಿಲ್ಲೆಯ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೂರು ನೀಡಲು ಬಂದಿದ್ದ ಬಿಜೆಪಿ ಮುಖಂಡ ಪ್ರಭಾಕರ್ ಗೆ ಏನ್ರಿ ಕಿತ್ತುಕೋಳ್ತಿರಾ ಎಂದು ಪಾವಗಡ ಸಿಪಿಐ ಅಜಯ್ ಸಾರಥಿ ಅವಾಜ್ ಹಾಕಿದ್ದಾರೆ. ಆಗ ಅಸಂಬದ್ಧ ಪದ ಬಳಕೆ ಮಾಡಿದ ಸಿಪಿಐ ಹಾಗೂ ಬಿಜೆಪಿ ಮುಖಂಡನ ನಡುವೆ ಪರಸ್ಪರ ವಾಗ್ವಾದ ನಡೆದಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕನಕಪುರ ಗ್ರಾಮದಲ್ಲಿ ಬಿಲ್ಡಿಂಗ್ ಕಟ್ಟುತ್ತಿರುವ ಪ್ರಭಾಕರ್, ಬಿಲ್ಡಿಂಗ್ ಗೆ ಸೆಂಟ್ರಿಂಗ್ ಸಾಮಾಗ್ರಿಗಳನ್ನು ಹಾಕಿದ್ದ ಗುತ್ತಿಗೆದಾರ ಪುಟ್ಟನಾಯ್ಕ್, ಪ್ರಭಾಕರ್ ಬಳಿ ಸುಮಾರು ಆರೂವರೆ ಲಕ್ಷ ಪಡೆದು ಸಾಮಾಗ್ರಿಗಳನ್ನು ಹಾಕಿದ್ದ ಎನ್ನಲಾಗಿದೆ. ಕಾಮಗಾರಿ ಮಾಡದೇ ಬಿಲ್ಡಿಂಗ್ ಬಳಿ ಸೆಂಟ್ರಿಂಗ್ ಸಾಮಾಗ್ರಿಗಳನ್ನು ಪುಟ್ಟನಾಯ್ಕ್ ಹಾಕಿದ್ದರು. ಈ ಬಗ್ಗೆ ಗುತ್ತಿಗೆದಾರನಿಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ ಎನ್ನಲಾಗಿದೆ. ಸದ್ಯ ಸೆಂಟ್ರಿಂಗ್ ಸಾಮಾಗ್ರಿಗಳನ್ನು ತುಂಬಿಕೊಂಡು ಹೋಗಲು ಬಂದಿದ್ದ ಚಾಲಕ, ಪ್ರಭಾಕರ್‌ಗೆ ಮಾಹಿತಿ ಇಲ್ಲದೇ ಚಾಲಕ ಬಂದು ಕಾಮಗಾರಿ ಮಾಡದೇ ಸಾಮಾಗ್ರಿಗಳನ್ನು ತುಂಬಿಕೊಂಡು ಹೋಗ್ತಿದ್ದ ಗೂಡ್ಸ್ ವಾಹನ ಪ್ರಭಾಕರ್ ತಡೆದಿದ್ದರು.
ಇನ್ನು ಕೆಲಸ ಮುಗಿಸಿ ಬಳಿಕ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಎಂದು ಬಿಜೆಪಿ ಮುಖಂಡ ತಡೆದಿದ್ದರು. ಈ ವೇಳೆ ವಾಹನ ಬಿಟ್ಟು ಸ್ಥಳದಿಂದ ಚಾಲಕ ಪರಾರಿಯಾಗಿದ್ದ, ಈ ಬಗ್ಗೆ ದೂರು ನೀಡಿದ್ರೆ ಕ್ರಮ ಕೈಗೋಳ್ಳದೇ ದೂರುದಾರರಿಗೆ ಸಿಪಿಐ ಅಜಯ್ ಸಾರಥಿ ಅವಾಜ್ ಹಾಕಿದ್ದಾರೆ. ಅಲ್ಲದೇ, ಅಸಂಬದ್ಧ ಪದ ಬಳಕೆ ಮಾಡಿದ ಸಿಪಿಐ ಅಜಯ್ ಸಾರಥಿ ಬಳಕೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರೋಪಿಸಿದ್ದಾರೆ.