Monday, December 23, 2024

ಭೀಮನ ಅಡ್ಡೆಗೆ ಬಂದ ಆ್ಯಶ್ ಮೆಲೋ ಯಾರು..?

ಸ್ಯಾಂಡಲ್​ವುಡ್​​ ಸಲಗನಾಗಿ ಅಬ್ಬರಿಸಿ ಬೊಬ್ಬಿರಿದ ಕರಿಚಿರತೆ ದುನಿಯಾ ವಿಜಯ್​​, ಭೀಮ ಚಿತ್ರದಲ್ಲಿ ಸಖತ್​​ ಬ್ಯುಸಿ ಆಗಿದ್ದಾರೆ. ಮೊದಲ ಪ್ರಯತ್ನದಲ್ಲೇ  ಸಲಗ ಸಕ್ಸಸ್​​ ಮೂಲಕ ದಿ ಬೆಸ್ಟ್​ ಡೈರೆಕ್ಟರ್​ ಪಟ್ಟ ಗಿಟ್ಟಿಸಿಕೊಂಡ ವಿಜಯ್,​​ ಭೀಮ ಶೂಟಿಂಗ್​ ಗರಡಿಯಲ್ಲಿದ್ದಾರೆ. ಇದೀಗ ಭೀಮನ ಗರಡಿಗೆ ಹೊಸ ಕಲಾವಿದೆಯ ಎಂಟ್ರಿಯಾಗಿದೆ. ಆ್ಯಶ್​ ಮೆಲೋ ರೋಲ್​​ನಲ್ಲಿ ಕಾಣಿಸಿಕೊಳ್ಳಲಿರುವ ಪಾತ್ರದ ಸ್ಪೆಷಾಲಿಟಿ ಏನು..? ನೀವೇ ಓದಿ.

  • ಆ್ಯಕ್ಟಿಂಗ್​ಗೆ ಮನಸೋತು ಸೆಲೆಕ್ಟ್​ ಮಾಡಿದ ಸಲಗ

ಸ್ಯಾಂಡಲ್​ವುಡ್​, ಟಾಲಿವುಡ್​​​ನಲ್ಲೂ ದುನಿಯಾ ವಿಜಯ್ ಸಖತ್​ ಬ್ಯುಸಿಯಾಗಿದ್ದಾರೆ. ಬಾಲಯ್ಯನ ಸಿನಿಮಾದಲ್ಲೂ ವಿಲನ್​ ಆಗಿ ಅಬ್ಬರಿಸಲಿರೋ ಬ್ಲಾಕ್​ಕೋಬ್ರಾ, ಭೀಮ ಸಿನಿಮಾ ಮೇಕಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ರಂಗ ಭೂಮಿ ಕಲಾವಿದರೊಂದಿಗೆ ಲೋಕಲ್​ ರೌಡಿಸಂನ ವಿಭಿನ್ನವಾಗಿ ತೋರಿಸೋಕೆ ವಿಜಯ್​ ಹೊರಟಿದ್ದಾರೆ. ಈಗಾಗ್ಲೇ ಚಿತ್ರದ ಪ್ರತಿಯೊಂದು ಪಾತ್ರಗಳು ಕ್ಯೂರಿಯಾಸಿಟಿ ಮೂಡಿಸಿವೆ. ಇದೀಗ ಮತ್ತೊಬ್ಬ ನ್ಯೂ ಆರ್ಟಿಸ್ಟ್​ ಭೀಮನ ಟೀಮ್​ಗೆ ಸೇರ್ಪಡೆಯಾಗಿದ್ದಾರೆ.

ಭೀಮನನ್ನು ಕೆಣಕದಿದ್ರೆ ಕ್ಷೇಮ ಅನ್ನೋ ಕ್ಯಾಪ್ಶನ್​​ ಅಡಿಯಲ್ಲಿ ಮೂಡಿ ಬರ್ತಿರೋ ಸಿನಿಮಾ ಭೀಮ. ಡೆಡ್ಲಿ ಆ್ಯಕ್ಷನ್​ ಸೀಕ್ವೆನ್ಸ್​ ಅಬ್ಬರ ಸಿನಿಮಾದಲ್ಲಿ ಇರಲಿದೆ. ಗಿಲಿ ಗಿಲಿ ಚಂದ್ರು, ಬ್ಲಾಕ್​ ಡ್ರ್ಯಾಗನ್​ ರೋಲ್​ಗಳನ್ನು ಪರಿಚಯಿಸಿರುವ ಚಿತ್ರತಂಡ ಸಿನಿಮಾ ಮೇಲಿನ ಕುತೂಹಲವನ್ನು ಡಬಲ್​ ಮಾಡಿದೆ. ಇದೀಗ ಆ್ಯಶ್​ ಮೆಲೋ ಅನ್ನೋ ಲೇಡಿ ರೋಲ್​​ ಇಂಟ್ರಡ್ಯೂಸ್​ ಮಾಡಿದೆ. ಸಮಾಜದಲ್ಲಿ ಅನ್ಯಾಯಕ್ಕೊಳಗಾಗುವ ನಾರಿಯೇ ಆ್ಯಶ್​ ಮೆಲೋ. ಈ ರೋಲ್​​ ಕಥೆಗೆ ಟ್ವಿಸ್ಟ್​ ಕೊಡಲಿದೆ.

ಮಾಸ್ತಿಯ ಪಕ್ಕಾ ಕಲ್ಟ್​​ ಸಂಭಾಷಣೆ, ಲೋಕಲ್​​ ಸ್ಲಮ್​​ನಲ್ಲಿ ನಡೆಯೋ ಭೂಗತ ಲೋಕದ ಪುಟಗಳನ್ನು ತೆರದಿಡಲಿರುವ ನಿರ್ದೇಶಕ ದುನಿಯಾ ವಿಜಯ್​ ಪಾತ್ರಗಳ ಆಯ್ಕೆಯಲ್ಲೂ ಸಖತ್ ಚ್ಯುಸಿಯಾಗಿದ್ದಾರೆ. ಆಡಿಷನ್​ನಲ್ಲಿ ನಟನೆಯನ್ನು ಮೆಚ್ಚಿ ಆ್ಯಶ್​ ಮೆಲೋ ರೋಲ್​ಗೆ ಸೆಲೆಕ್ಟ್ ಹೊಸ ನಟಿಯನ್ನು ಸೆಲೆಕ್ಟ್​ ಮಾಡಲಾಗಿದೆ. ಇದ್ರೊಂದಿಗೆ ಕಥೆಗೆ ಇನ್ನಷ್ಟು ಜೀವ ಕಳೆ ಬಂದಿದೆ.

ಭೀಮನ ದುನಿಯಾದಲ್ಲಿ ಅಚ್ಯುತ್​​ ಕುಮಾರ್​​ ಸೇರಿ ವಿಜಯ್​ಗೆ ತಾಯಿಯಾಗಿ ಹಿರಿಯ ನಟಿ ಕಲ್ಯಾಣಿ ನಟಿಸ್ತಿದ್ದಾರೆ. ಚಿತ್ರಕ್ಕೆ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್​​ ಬಂಡವಾಳ ಹೂಡಿದ್ದು, ಯಥಾವತ್​​​​ ವಿಜಿ ಬಳಗದ ಮಾಸ್ತಿಯ ಮಾಸ್​​ ಸಂಭಾಷಣೆ ಇರಲಿದೆ. ಚರಣ್​ ರಾಜ್​​ ಮ್ಯೂಸಿಕ್​ ಕಂಪೋಸ್​​ ಮಾಡಲಿದ್ದಾರೆ. ಪಕ್ಕಾ ರೌಡಿಸಂ ಬ್ಯಾಕ್​​ ಡ್ರಾಪ್​​ ಇರೋ ಭೀಮನ ಆರ್ಭಟ ನೋಡೋಕೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES