Monday, December 23, 2024

ಮಲ್ಲಿಗೆ ಹೂವ ಆಶಿಕಾ ಜೊತೆ ಆಲ್ ಓಕೆ ಲವ್ವಿ ಡವ್ವಿ

ಹಾಲಲ್ಲಿ ಅದ್ದಿರೋ ಅಪರೂಪದ ಚೆಲುವೆ ಆಶಿಕಾ ರಂಗನಾಥ್​​. ಚಂದಮಾಮನ ಹೊಳಪಲ್ಲಿ ಪಡ್ಡೆ ಹೈಕಳ ನಿದ್ದೆ ಕದ್ದ ಸಹಜ ಸುಂದರಿ. ಯೆಸ್​​.. ಬಾಳೆದಿಂಡಿನ ಬಾಲೆಯ ವಯ್ಯಾರಕ್ಕೆ ಫ್ಯಾನ್ಸ್​ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಕಡಲ ಅಲೆಗಳ ಮೇಲೆ ಚಂದನವನದ ನವಿಲೆ ಮಸ್ತ್​ ಹಾಟ್​ ಆಗಿ ಕಾಣಿಸ್ತಿದ್ದಾರೆ. ಕನ್ನಡದ ಮಲ್ಲಿಗೆ ಆಶಿಕಾ ರಂಗನಾಥ್​​ ರಂಗು ಹೇಗಿದೆ ಗೊತ್ತಾ..? ಈ ಸ್ಟೋರಿ ಓದಿ.

  • ಪಡ್ಡೆ ಹೈಕಳ ನಿದ್ದೆ ಕದ್ದಿರೋ ದೇವಕನ್ಯೆಯ ವೈಯ್ಯಾರ

ಕನ್ನಡದ ಟಾಪ್​​ ಮೋಸ್ಟ್​ ನಟಿಯರ ಸಾಲಿನಲ್ಲಿ ಆಶಿಕಾ ಕಿಕ್ಕು, ಮ್ಯಾಜಿಕ್​​ಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಜಿಂಕೆಯ ಕಣ್ಣುಗಳಲ್ಲಿ, ಹಂಸದ ನಡಿಗೆಯಲ್ಲಿ ಎಲ್ಲರ ಮನಸೂರೆ ಮಾಡೋ ಮೋಹಕ ಸುಂದರಿ ಆಶಿಕಾ. ಅವಳ ಒನಪು ವಯ್ಯಾರಕ್ಕೆ, ಬಿಂಕ ಭಿನ್ನಾಣಕ್ಕೆ, ನವಿಲು ಕೂಡ ನಾಚುವ ನಾಟ್ಯ ಸಿಂಗಾರಕ್ಕೆ ಕನ್ನಡ ಸಿನಿಲೋಕದ ರಾಣಿಯಾಗಿ ಮಿಂಚ್ತಿದ್ದಾರೆ.

ಸಹಜ ಸೌಂದರ್ಯದಿಂದ್ಲೇ ಯುವಕರ ಕನಸುಗಳಲ್ಲಿ, ಅನುಮತಿಯಿಲ್ಲದೇ ಜಾರುವ ಬ್ಯೂಟಿಫುಲ್​ ಕ್ವೀನ್​ ಅಲ್ಬಂ ಸಾಂಗ್​​ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಚುಟು ಚುಟು ಚೆಲುವೆ ಪೋಲಿ ಹುಡುಗರ ಚಳಿ ಬಿಡಿಸಿದ್ದಾರೆ. ಆಲ್​ ಓಕೆ ಹಾಡಿನ ಕಂಪಲ್ಲಿ ಆಶಿಕಾ ಮಸ್ತ್​ ಸ್ಪೆಪ್ಸ್​ ಹಾಕಿದ್ದಾರೆ. ಯೆಸ್​​.. ಕನ್ನಡ ಮತ್ತು ಹಿಂದಿಯಲ್ಲಿ ಮೂಡಿ ಬರ್ತಿರೋ ಮಲ್ಲಿಗೆ ಹೂವ ಅಲ್ಬಂ ಸಾಂಗ್​​ನಲ್ಲಿ ಚೆಂದುಳ್ಳಿ ಚೆಲುವೆ ಹೆಜ್ಜೆ ಹಾಕಿದ್ದಾರೆ.

  • ಆಲ್​​​ ಓಕೆ ಹಾಡಿಗೆ ಆಶಿಕಾ ಗ್ಲಾಮರಸ್​ ಕಿಕ್​​​​
  • ಮಾದಕ ನೋಟದಲ್ಲೇ ನಶೆ ಏರಿಸಿದ ಬ್ಯೂಟಿ

ಆಶಿಕಾ ಬಾಡಿ ಶೇಕ್​ಗೆ ಆಲ್​​ ಓಕೆ ಟೈಟಾಗಿದ್ದಾರೆ. ಕಡಲ ಅಲೆಗಳ ಮೇಲೆ ಬೃಹತ್​ ಕ್ರ್ಯೂಸ್​​ನಲ್ಲಿ ಆಶಿಕಾ ಗುಂಗಿಡಿಸಿದ್ದಾರೆ. ಮಲೇಶಿಯಾ, ಸಿಂಗಾಪೂರ್​​​ನಲ್ಲಿ ಮಲ್ಲಿಗೆ ಹೂವ ಸಾಂಗ್​ ಶೂಟಿಂಗ್​ ಆಗಿದ್ದು ದಾಖಲೆ ಮಟ್ಟದ ವೀಕ್ಷಣೆ ಕಂಡಿದೆ. ಆಕಾಶದಲ್ಲಿ ಎಷ್ಟೇ ಚುಕ್ಕಿಗಳಿದ್ದರೂ ನೀನೆ ಬ್ರೈಟ್​​ ಅನ್ನೋ ಸಾಲುಗಳು ಕೇಳುಗರಿಗೆ ಕಿಕ್ಕೇರಿಸಿವೆ.

ತುಟಿಯ ಕಚ್ಚಿ ಕಣ್ಣೊಡೆಯೋ ಆಶಿಕಾ ಕಣ್ಣ ಕಾಂತಿಯಲ್ಲಿ ಪಡ್ಡೆ ಹೈಕಳ ಹೃದಯ ಅರೆ ಬರೆ ಬೆಂದೋಗಿದೆ. ರಾಪರ್​ ಆಲ್​ ಓಕೆ ಮ್ಯೂಸಿಕ್​ ಕಂಪೋಸ್​​​, ಸಿಂಗಿಂಗ್​​, ಡೈರೆಕ್ಷನ್​ನಲ್ಲಿ ಮಲ್ಲಿಗೆಯ ಮಕರಂದ ಮೂಲೆ ಮೂಲೆಗೂ ಹಬ್ಬಿದೆ. ಯೂಟ್ಯೂಬ್​​​​ನಲ್ಲಿ ಹಲ್​ಚಲ್​ ಎಬ್ಬಿಸ್ತಿದೆ. ಅರ್ಜುನ್ ಶೆಟ್ಟಿ ಕ್ಯಾಮೆರಾ ಕಣ್ಣಲ್ಲಿ ಬಣ್ಣದ ಮೆರಗು ತುಂಬಿದೆ.

ಫ್ರೇಶ್​ ಫೀಲ್​ ಕೊಡ್ತಿರೋ ಮಲ್ಲಿಗೆ ಹಾಡಿನ ಸೆಳೆತಕ್ಕೆ ಆಲ್​ ಓಕೆ ಫ್ಯಾನ್ಸ್​ ಕೂಡ ಫಿದಾ ಆಗಿದ್ದಾರೆ. ಆಲ್​ ಓಕೆ ರಾಪರ್​ ಸ್ಟೈಲ್​ನಲ್ಲಿ ನೀವೊಮ್ಮೆ ಹಾಡು ಕೇಳಿ ನೋಡಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ.

RELATED ARTICLES

Related Articles

TRENDING ARTICLES