Thursday, December 19, 2024

ನಟ ರಮೇಶ್​ ಯಶಸ್ಸಿನ ಸರಳ ಸೂತ್ರಗಳ ಪುಸ್ತಕ ಲೋಕಾರ್ಪಣೆ

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಮೇರು ನಟ ರಮೇಶ್​ ಅರವಿಂದ್​​ ಅವರು ನಿನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಕರೆ ಮಾಡಿ ವಿಶ್​ ಮಾಡಿ ಎಂದು ಅಭಿಮಾನಿಗಳಿಗೆ ಬಹಿರಂಗವಾಗಿ ಆಹ್ವಾನ ನೀಡಿದ್ದರು. ಈಗ ರಮೇಶ್​ ಮತ್ತೆ ಅಭಿಮಾನಿಗಳಿಗೆ ಕೊಡುಗೆ ನೀಡಿದ್ದಾರೆ.

ಇಂದು ಪ್ರೀತಿಯಿಂದ ರಮೇಶ್​ ಯಶಸ್ಸಿನ ಸರಳ ಸೂತ್ರಗಳು ಪುಸ್ತಕ ಲೋಕಾರ್ಪಣೆಗೊಂಡಿದೆ. ಸಿನಿಮಾದ ಜತೆಗೆ ಅದ್ಭುತ ಬರಹಗಾರರಾಗಿ ಗುರುತಿಸಿಕೊಂಡಿರುವ ರಮೇಶ್​ ಅರವಿಂದ್​​ ತಮ್ಮೆಲ್ಲರ ಜೀವನದ ಸೋಲು, ಗೆಲುವು, ಏರುಪೇರುಗಳ ನಡುವೆ ಯಶಸ್ವಿ ವ್ಯಕ್ತಿಯಾಗಿ ಬದುಕುವ ಕಲೆಯನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

ಈ ಪುಸ್ತಕವನ್ನು ಸಾವಣ್ಣ ಪಬ್ಲಿಕೇಷನ್​ ಪ್ರಕಟಿಸಿದ್ದು ಮೊದಲ ಮುದ್ರಣದ ಎಲ್ಲಾ ಪುಸ್ತಕಗಳು ಲೋಕಾರ್ಪಣೆಗೊಂಡ ದಿನವೇ ಹಲವು ದಾಖಲೆ ಬರೆದಿವೆ. ಈ ಸುಂದರ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ಅನಂತ್​ ನಾಗ್​​, ಸಾಹಿತಿ ಜೋಗಿ, ರಾಘವೇಂದ್ರ ಹುಣಸೂರು ಪಾಲ್ಗೊಂಡು ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

RELATED ARTICLES

Related Articles

TRENDING ARTICLES