Monday, December 23, 2024

ಯುವಕರ ಮೇಲೆ ದಾಳಿ ಮಾಡಿದ ಕಾರ್ಪೋರೇಟರ್ ಹೆಂಡತಿ

ತುಮಕೂರು: ಗಣಪತಿ ಮೆರವಣಿಗೆ ವೇಳೆ ಇದ್ದಕ್ಕಿದ್ದಂತೆ ಯುವಕರ ಮೇಲೆ ಕಾರ್ಪೋರೇಟರ್ ಹೆಂಡತಿ ದಾಳಿ ಮಾಡಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ 4ನೇ ವಾರ್ಡ್ ನ ಸುಭಾಷ್ ನಗರದಲ್ಲಿ ನಡೆದಿದೆ.

ಗಣೇಶ ವಿಸರ್ಜನೆ ಮಾಡಿ ವಾಪಸ್ ತೆರಳುವ ವೇಳೆ ಕಾರ್ಪೋರೇಟರ್ ಹೆಂಡತಿ ಯುವಕರ ಮೇಲೆ ದಾಳಿ ಮಾಡಿದ್ದು, ಹೆಂಡಿತಿಗೆ ಬಿಜೆಪಿ ಕಾರ್ಪೋರೇಟರ್ ಶ್ರೀನಿವಾಸ ಅವರು ಸಾಥ್ ನೀಡಿ ಹಲ್ಲೆ ಮಾಡಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಕಾರ್ಪೋರೇಟರ್ ಶ್ರೀನಿವಾಸ್​ ಹಾಗೂ ಹೆಂಡತಿಯ ವಿರುದ್ಧ ಇದೇನಾ ನಿಮ್ಮ ಸಂಸ್ಕೃತಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES