Wednesday, January 22, 2025

ವಾರ್ ನಂತ್ರ ಬಿಟೌನ್​ನಲ್ಲಿ ಹೃತಿಕ್ ಮತ್ತೊಂದು ಮೆಗಾ ವಾರ್

ಬಾಲಿವುಡ್​ನ ಗ್ರೀಕ್ ಗಾಡ್ ಹೃತಿಕ್ ರೋಷನ್ ಕರಿಯರ್​ನ ಬಿಗ್ಗೆಸ್ಟ್ ಹಿಟ್ ವಾರ್. ಅದಾದ ಬಳಿಕ ಅಂಥದ್ದೇ ಹೇ ವೋಲ್ಟೇಜ್ ಆ್ಯಕ್ಷನ್ ವೆಂಚರ್​ಗೆ ಕೈ ಹಾಕಿರೋ ಹ್ಯಾಂಡ್ಸಮ್ ಹಂಕ್, ಸೈಫ್ ಜೊತೆ ಟಗ್ ಆಫ್ ವಾರ್​ಗೆ ಇಳಿದಿದ್ದಾರೆ. ಸೌತ್ ಸಿನಿಮಾದ ಸ್ಫೂರ್ತಿ ಪಡೆದಿರೋ ಅದ್ರ ಮಾಸ್ ಗತ್ತು, ಗಮ್ಮತ್ತು ಹೇಗಿದೆ ಅನ್ನೋದ್ರ ಝಲಕ್ ನೀವೇ ಓದಿ.

  • ನವರಾತ್ರಿಗೆ ಬಾಲಿವುಡ್​ನಿಂದ ಬಗ್ಗೆಸ್ಟ್ ಆ್ಯಕ್ಷನ್ ಧಮಾಕ ಔಟ್
  • ಹೃತಿಕ್- ಸೈಫ್ ಕಾಂಬೋನಿಂದ ಖಾಕಿ ವರ್ಸಸ್ ಗ್ಯಾಂಗ್​ಸ್ಟರ್
  • ಸೌತ್​ನ ವಿಕ್ರಂ ವೇದ ರಿಮೇಕ್​ನಲ್ಲಿ ಹಿಂದಿ ಸೂಪರ್ ಸ್ಟಾರ್ಸ್​..!

ಬಾಲಿವುಡ್ ಇತ್ತೀಚೆಗೆ ಸಿಕ್ಕಾಪಟ್ಟೆ ಡಲ್ ಹೊಡೀತಿದೆ. ದೊಡ್ಡ ದೊಡ್ಡ ಸ್ಟಾರ್​ಗಳ ಸಿನಿಮಾಗಳೇ ಅತೀವ ನಿರೀಕ್ಷೆ ಮೂಡಿಸಿ, ರಿಲೀಸ್ ಬಳಿಕ ಠುಸ್ ಪಟಾಕಿಯಾಗ್ತಿರೋದು ಹೊಸತೇನಲ್ಲ. ಇಡೀ ಹಿಂದಿ ವೀಕ್ಷಕರ ವರ್ಗ ನಮ್ಮ ಸೌತ್ ಸಿನಿಮಾಗಳ ಫ್ಯಾನ್ಸ್ ಆಗಿ ಬದಲಾಗ್ತಿದ್ದಾರೆ. ಇಂತಹ ಸಮಯದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋಕೆ ಅಂತ್ಲೇ ವಿಕ್ರಂ ವೇದ ಬರ್ತಿದೆ. ಅದೂ ಗ್ರೀಕ್ ಗಾಡ್ ಹೃತಿಕ್ ರೋಷನ್ ಹಾಗೂ ಸೈಫ್ ಆಲಿ ಖಾನ್ ಸ್ಪೆಷಲ್ ಕಾಂಬೋನಲ್ಲಿ ಅನ್ನೋದು ಇಂಟರೆಸ್ಟಿಂಗ್.

ಯೆಸ್.. ವಾರ್ ಸಿನಿಮಾದ ಬಳಿಕ ಹೃತಿಕ್ ನಟನೆಯ ಬಿಗ್ಗೆಸ್ಟ್ ಮಲ್ಟಿಸ್ಟಾರ್ ಸಿನಿಮಾ ಇದಾಗಿದ್ದು, ಮಗದೊಮ್ಮೆ ಪ್ರೇಕ್ಷಕರಿಗೆ ಆ್ಯಕ್ಷನ್ ಧಮಾಕ ತೋರಿಸೋದು ಪಕ್ಕಾ ಆಗಿದೆ. 2019ರಲ್ಲಿ ಟೈಗರ್ ಶ್ರಾಫ್- ಹೃತಿಕ್ ಜೋಡಿ ಬಿಗ್ ಸ್ಕ್ರೀನ್ ಮೇಲೆ ಅಕ್ಷರಶಃ ಮೋಡಿ ಮಾಡಿದ್ರು. ಬಾಕ್ಸ್ ಆಫೀಸ್​ನಲ್ಲಿ 475 ಕೋಟಿ ಪೈಸಾ ವಸೂಲ್ ಮಾಡೋ ಮುಖೇನ ಎಲ್ಲರನ್ನ ದಂಗುಬಡಿದಿತ್ತು.

ಇದೀಗ ಅದೇ ಹೃತಿಕ್, ಸೈಫ್ ಜೊತೆಗೂಡಿ ಮಾಡಿರೋ ಚಿತ್ರ ವಿಕ್ರಂ ವೇದ. ಇದು ಪೊಲೀಸ್ ಖಾಕಿ ಖದರ್ ಹಾಗೂ ಗ್ಯಾಂಗ್​ಸ್ಟರ್ ಗನ್ ಪವರ್ ನಡುವಿನ ಟಗ್ ಆಫ್ ವಾರ್ ಆಗಿರಲಿದ್ದು, ಇಲ್ಲಿ ಕಳ್ಳ- ಪೊಲೀಸರಾಗಿ ಹೃತಿಕ್- ಸೈಫ್ ಜುಗಲ್ಬಂದಿ ನೋಡುಗರ ಮೈ ಜುಮ್ಮೆನಿಸಲಿದೆ. ಅಷ್ಟರ ಮಟ್ಟಿಗೆ ಆ್ಯಕ್ಷನ್ ಬ್ಲಾಕ್ಸ್ ಮೈಂಡ್ ಬ್ಲೋಯಿಂಗ್ ಆಗಿರಲಿವೆ ಅನ್ನೋದು ಟ್ರೈಲರ್​ನಿಂದ ಗೊತ್ತಾಗ್ತಿದೆ.

2017ರಲ್ಲಿ ಪುಷ್ಕರ್ ಗಾಯತ್ರಿ ನಿರ್ದೇಶನದ ವಿಕ್ರಂ ವೇದ ಅನ್ನೋ ತಮಿಳು ಸಿನಿಮಾದ ರಿಮೇಕ್ ಈ ಹಿಂದಿ ಸಿನಿಮಾ. ಮೂಲ ಸಿನಿಮಾದಲ್ಲಿ ಮಾಧವನ್ ಹಾಗೂ ವಿಜಯ್ ಸೇತುಪತಿ ಮಿಂಚು ಹರಿಸಿದ್ರು. ಇದೀಗ ಅದೇ ಪಾತ್ರಗಳನ್ನ ಹೃತಿಕ್- ಸೈಫ್ ಪೋಷಿಸಿದ್ದು, ಮೇಕಿಂಗ್ ನೆಕ್ಸ್ಟ್ ಲೆವೆಲ್​ಗಿದೆ. 175 ಕೋಟಿ ಬೃಹತ್ ವೆಚ್ಚದಲ್ಲಿ ತಯಾರಾಗಿರೋ ಈ ಹಿಂದಿ ಸಿನಿಮಾಗೂ ಪುಷ್ಕರ್ ಗಾಯತ್ರಿ ಅವ್ರೇ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದು ಗನ್​ಗಳ ಮೊರೆತದ ಜೊತೆ ಆತ್ಮ ವಿಮರ್ಶೆಯ ಕುರಿತ ಎಮೋಷನಲ್ ಜರ್ನಿಯೂ ಹೌದು. ಇಲ್ಲಿ ಹೃತಿಕ್- ಸೈಫ್ ಜೋಡಿಗೆ ರಾಧಿಕಾ ಆಪ್ಟೆ, ಯೋಗಿತಾ ಬಿಹಾನಿ, ಶಾರಿಬ್ ಹಶ್ಮಿ, ಸತ್ಯದೀಪ್ ಮಿಶ್ರಾ ಹೀಗೆ ಸಾಕಷ್ಟು ಕಲಾವಿದರು ಸಾಥ್ ನೀಡಿದ್ದಾರೆ. ಅಂದಹಾಗೆ ಟ್ರೈಲರ್ ಹಾಗೂ ಮೇಕಿಂಗ್​ನಿಂದ ವ್ಹಾವ್ ಫೀಲ್ ತರಿಸಿರೋ ವಿಕ್ರಂ ವೇದ, ನವರಾತ್ರಿ ವಿಶೇಷ ಇದೇ ಸೆಪ್ಟೆಂಬರ್ 30ಕ್ಕೆ ಪ್ರೇಕ್ಷಕರನ್ನ ರಂಜಿಸಲಿದೆ.

ಟ್ರೈಲರ್ ರಿಲೀಸ್ ಆದ ಒಂದೇ ದಿನದಲ್ಲಿ ಯೂಟ್ಯೂಬ್​ನಲ್ಲಿ ಬರೋಬ್ಬರಿ 42ಕ್ಕೂ ಅಧಿಕ ಮಿಲಿಯನ್ ವೀವ್ಸ್ ಪಡೆದಿದೆ ವಿಕ್ರಂ ವೇದ. ತಮಿಳಿನ ಮೂಲ ಸಿನಿಮಾಗಿಂತ ದೊಡ್ಡ ಮಟ್ಟಕ್ಕೆ ಹೈಪ್ ಕ್ರಿಯೇಟ್ ಮಾಡಿರೋ ಹಿಂದಿ ವರ್ಷನ್, ಬಾಲಿವುಡ್​ ಬಾಕ್ಸ್ ಆಫೀಸ್​ಗೆ ಬೆಂಗಾವಲಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES