Sunday, December 22, 2024

ಪುನೀತ್​ ಕನಸಿನ ಶಕ್ತಿಧಾಮಕ್ಕೆ ಭೇಟಿ ನೀಡಿದ ತಮಿಳು ನಟ

ಮೈಸೂರು: ದಿವಂಗತ ನಟ ಪುನೀತ್​ ರಾಜಕುಮಾರ್​ ನಡೆಸುತ್ತಿದ್ದ ಮೈಸೂರಿನ ಆಶ್ರಮಕ್ಕೆ ಇದೇ ಮೊದಲ ಬಾರಿ ಶಕ್ತಿಧಾಮಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಮಾತುಕತೆಯನ್ನ ತಮಿಳಿನ ಖ್ಯಾತ ನಟ ವಿಶಾಲ್ ನಡೆಸಿದ್ದಾರೆ.

ಇಂದು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ ವಿಶಾಲ್, ಈ ಹಿಂದೆ ಪುನೀತ್ ನಮನ ಕಾರ್ಯಕ್ರಮದಲ್ಲಿ ಆಶ್ರಮ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿವಹಿಸಿಕೊಳ್ಳುವುದಾಗಿ ಹೇಳಿದ್ದರು. ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಆರಂಭಿಸಿದ್ದ ಶಕ್ತಿಧಾಮ ಸಾವಿರಾರು ಬಡ ಹೆಣ್ಣುಮಕ್ಕಳಿಗೆ ಆಶ್ರಯ ನೀಡುತ್ತಿದೆ. ಪಾರ್ವತಮ್ಮನವರ ನಿಧನದ ನಂತರ ಶಕ್ತಿಧಾಮದ ಸಂಪೂರ್ಣ ಜವಾಬ್ದಾರಿಯನ್ನು ಪವರ್​ಸ್ಟಾರ್ ಪುನೀತ್ ರಾಜ್​ ಕುಮಾರ್ ವಹಿಸಿಕೊಂಡಿದ್ದರು.

ಪುನೀತ್ ರಾಜ್​ಕುಮಾರ್ ಅವರ ನಿಧನದ ಬೆನ್ನಲ್ಲೇ ತೆರೆಮರೆಯಲ್ಲೇ ನಡೆಯುತ್ತಿದ್ದ ಅವರ ಸಾಮಾಜಿಕ ಕಾರ್ಯಗಳ ಮಾಹಿತಿ ಹೊರಬಿದ್ದಿತ್ತು. ಇದು ತಮಿಳು ನಟ ವಿಶಾಲ್ ಅವರ ಗಮನಕ್ಕೂ ಬಂದಿತ್ತು. ಅಲ್ಲದೆ ಬೆಂಗಳೂರಿನಲ್ಲಿ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ವಿಶಾಲ್​, ಪುನೀತ್​ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನದು. ಅಲ್ಲದೆ ಶಕ್ತಿಧಾಮದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಜವಾಬ್ದಾರಿಯನ್ನು ನಾನು ಹೊತ್ತು ಕೊಳ್ಳುತ್ತೇನೆ ಎಂದು ವಿಶಾಲ್ ತಿಳಿಸಿದ್ದರು.

RELATED ARTICLES

Related Articles

TRENDING ARTICLES