Monday, December 23, 2024

ನಗುತ್ತಲೇ ಶಿಷ್ಯನಿಗೆ ಸುಳ್ಳ, ಮಹಾಕಳ್ಳ ಎಂದ ಸಿದ್ದರಾಮಯ್ಯ

ಬಾಗಲಕೋಟೆ: ರಾಜ್ಯ ಸರ್ಕಾರ ಸರ್ಕಾರ ಏನು ಮಾಡುವುದಿಲ್ಲ. ಇನ್ನು ಆರೇಳು ತಿಂಗಳಾದ್ರೆ ನಾವೇ ಮತ್ತೇ ಅಧಿಕಾರಕ್ಕೆ ಬರ್ತಿವಿ. ಆಗ ನಿಮ್ಮ ಕೆಲಸ ನಾವೇ ಮಾಡ್ತೀವಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೇ ಸಿಎಂ ಕನಸು ಕಂಡಿದ್ದಾರೆ.

ಇಂದು ಬಾಗಲಕೋಟೆ ಜಿಲ್ಲೆಯ ಕಿತ್ತಲಿ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನೆ ಮಂಜೂರು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಈ ಮಾತುಗಳನ್ನ ಆಡಿದ್ದಾರೆ.

ಸಿಎಂ ಆದ್ರೆ ಸಿದ್ದರಾಮಯ್ಯ ಪೂರ್ಣ ಗ್ರಾಮ ಬೇರೆ ಕಡೆ ಸ್ಥಳಂತರಿಸುತ್ತಾರೆ ಎಂದು ಗ್ರಾಮದ ಅಭಿಮಾನಿಯೊಬ್ಬ ಹೇಳಿದ ವೇಳೆ ಸಿದ್ದರಾಮಯ್ಯ ಮಾತನಾಡಿ, ಹೌದು, ಪೂರ್ಣ ಗ್ರಾಮ ಶಿಫ್ಟ್ ಮಾಡಿ ಕೊಡ್ತೀನಿ ಎಂದು ಗ್ರಾಮಸ್ಥರಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.

ಅಂತೆಯೇ ಮಾತನಾಡಿ, ಸಚಿವ ಕೆ. ಸುಧಾಕರ ನನ್ನ‌ ಮಾತು ಕೇಳ್ತಾನೆ ಅಂತ ಯಾರು ಹೇಳಿದ್ದಾರೆ. ನನ್ ಮಗ ಸುಳ್ಳು ಹೇಳ್ತಾನೋ. ಅವನು ಮಹಾಕಳ್ಳ. ಸಚಿವ ಡಾ. ಸುಧಾಕರ ಬಗ್ಗೆ ನಗುತ್ತಲೇ ಸುಳ್ಳ, ಮಹಾಕಳ್ಳ ಎಂದು ಸಿದ್ದರಾಮಯ್ಯ ಹೇಳಿದರು.

ಗ್ರಾಮಸ್ಥರು ನಮ್ಮ ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ಮಾಡಿಸಿ ಎಂದು ಜನರು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಸರ್ ಇಲ್ಲಿ ಜಾಗೆ ಇದೆ. ಈ ಕೆಲಸ ಮಾಡಿಸಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ರಾಜ್ಯ ಸರ್ಕಾರದವರು ಮಾಡಬೇಕಲ್ಲಪ್ಪ ಮಾರಾಯ. ಈ ಬಗ್ಗೆ ಪತ್ರ ಬರೆದಿದ್ದೇನೆ ಎಂದರು.

ಈ ವೇಳೆ ಮತ್ತೆ ಗ್ರಾಮಸ್ಥರು ಸಿದ್ದರಾಮಯ್ಯ ಅವರಿಗೆ ಸರ್ ಆರೋಗ್ಯ ಸಚಿವ ಕೆ. ಸುಧಾಕರ ಅವರು ನಿಮ್ಮ ಮಾತು ಕೇಳ್ತಾರೆ. ಈ ಕೆಲಸ ಮಾಡಿಸಿ ಎಂದ ಜನರು ಮನವಿ ಮಾಡ್ತಾರೆ, ಆಗ ಸಿದ್ದರಾಮಯ್ಯ ಮಾತನಾಡಿ, ಯಾರ್ ಹೇಳ್ತಾರೆ, ನನ್ನ ಮಾತು ಕೇಳ್ತಾರೆ ಎಂದು, ಕೇಳ್ತಾನೆ ಅಂತ ಸುಳ್ಳು ಹೇಳ್ತಾವ್ನೆ. ನಾನೇ ಅವನ್ನ ಎಂಎಲ್ ಎ ಮಾಡಿದ್ದು. ಅಲ್ಲಿ ಮಂತ್ರಿ ಆಗೋಕೆ ಹೋಗಾವ್ನೆ ಅಂತ ಸಚಿವ ಸುಧಾಕರ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

RELATED ARTICLES

Related Articles

TRENDING ARTICLES