Sunday, January 19, 2025

ನಟ ರಮೇಶ್​ ನಟನೆಯ ಶಿವಾಜಿ ಸುರತ್ಕಲ್ 2 ಟೀಸರ್ ಬಿಡುಗಡೆ

ಬೆಂಗಳೂರು: ಕನ್ನಡ ಸಿನಿಲೋಕದಲ್ಲಿ ರಮೇಶ್ ಅರವಿಂದ್ ಬಗ್ಗೆ ಕಿರು ಪರಿಚಯದ ಅವಶ್ಯಕತೆಯೇ ಇಲ್ಲ. ಅಂದೂ, ಇಂದು, ಮುಂದಿನ ಜನರೇಷನ್​ಗೂ ರಮೇಶ್ ಚಿರಯುವಕನಾಗಿಯೇ ಮಿಂಚುವ ಸ್ಯಾಂಡಲ್ವುಡ್ ನ ಅದ್ಭುತ ಸ್ಟಾರ್ ನಟ. ಮಾಸದ ಅಂದ, ಹಾಲುಗಲ್ಲದ ಚೆಲುವು, ಸದಾ ಮುಗುಳ್ನಗುವ ಸೂರ್ತಿದಾಯಕ ಮಾತಿನ ವೀರ, ಧೀರ, ಸಮ್ಮೋಹಕ ಸರದಾರ ರಮೇಶ್ ಅರವಿಂದ್.

ಇಂದು ತಮ್ಮ 58ನೇ ಹುಟ್ಟು ಹಬ್ಬ ಖುಷಿಯಲ್ಲಿರೋ ರಮೇಶ್ ಸಿನಿಜರ್ನಿಯೇ ರೋಚಕ. ಸಿನಿಮಾ, ಶಿಕ್ಷಣ, ಸಾಮಾಜಿಕ ಸೇವೆ ಎಲ್ಲಾ ರಂಗದಲ್ಲೂ ಬ್ಯುಸಿಯಾಗಿರೋ ಬಹುಬಾಷಾ ರಮೇಶ್​, ಕನ್ನಡ, ತಮಿಳು, ತೆಲುಗು ಸೇರಿದಂತೆ ಮಲಯಾಳಂ ಸಿನಿಮಾಗಳಲ್ಲೂ ಹೆಸರು ಮಾಡಿದ ಶ್ರೇಷ್ಠ ನಟ ರಮೇಶ್ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಸ್ಟಾರ್ ನಟರೊಬ್ಬರು ತಮ್ಮ ಅಭಿಮಾನಿಗಳಿಗೆ ತಮ್ಮ ಫೋನ್ ನಂಬರ್ ನೀಡಿದ್ದಾರೆ. ವಿಶ್ ಮಾಡೋ ಜತೆಗೆ ಸಲಹೆ ನೀಡೋ ಅವಕಾಶ ಕಲ್ಪಿಸಿದ್ದಾರೆ. ಅದ್ಭುತ ಭಾಷಣಕಾರ, ಯುವಕರ ಪಾಲಿನ ಆಶಾಕಿರಣ ರಮೇಶ್ ಅರವಿಂದ್ ಟೈಮ್ ಮ್ಯಾನೇಜ್ ಮೆಂಟ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

ರಮೇಶ್ ಅರವಿಂದ್ ಬರ್ತ್ ಡೇ ಸಲುವಾಗಿ ಶಿವಾಜಿ ಸುರತ್ಕಲ್ 2 ಟೀಸರ್ ರಿಲೀಸ್ ಆಗಿದೆ. ಮಿಸ್ಟೇರಿಯಸ್ ಕೇಸ್ ಮಾಯಾವಿಯಾಗಿ ರಮೇಶ್ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ಸಾವಿರ ಕೋಟಿ ದೋಚುವ ಸಿನಿಮಾಗೆ ರಮೇಶ್ ಪ್ಲಾನ್ ಮಾಡಿಕೊಂಡಿದ್ದಾರೆ.

140ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮನರಂಜಿಸಿದ ಸರಸ್ವತಿ ಪುತ್ರ ರಮೇಶ್ ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಮೃತವರ್ಷಿಣಿ, ಅಮೇರಿಕಾ ಅಮೇರಿಕಾ, ಆಪ್ತಮಿತ್ರ, ಪುಷ್ಪಕ ವಿಮಾನ ಮುಂತಾದ ಹಿಟ್ ಸಿನಿಮಾಗಳಲ್ಲಿ ರಮೇಶ್ ಅಭಿನಯಿಸಿದ್ದಾರೆ. ಅನೇಕ ಸಿನಿಮಾಗಳು ಶತಕ ಬಾರಿಸಿವೆ. ಜನಸಾಮಾನ್ಯರಿಗೆ ಬದುಕನ್ನು ಜೀವಿಸುವ ಸರಳ ಸಂದೇಶವನ್ನು ರಮೇಶ್ ಬಿಚ್ಚಿಟ್ಟಿದ್ದಾರೆ.

ಜನಮಾನಸದ ಮೆಚ್ಚಿನ ಹೀರೋ ಆಗಿ ಮಿಂಚುತ್ತಿರುವ ರಮೇಶ್ ಅರವಿಂದ್ ಬಾಳು ಹಸನಾಗಿರಲಿ. ಕನ್ನಡದ ಹೆಮ್ಮೆಯ ಪ್ರತೀಕವಾಗಿರೋ ಅದ್ಭುತ ಕಲಾವಿದನಿಗೆ ಕನ್ನಡಾಭಿಮಾನಿಗಳ ಪರವಾಗಿ ಪವರ್ ಟಿವಿ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯ.

ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES