Friday, November 22, 2024

ಪ್ರೇಕ್ಷಕರಿಗೆ ಗುಡ್​ನ್ಯೂಸ್.. ಟಿವಿಯಲ್ಲಿ ಮತ್ತೆ ‘ಮಾಯಾಮೃಗ’

ಕಿರುತೆರೆಯಲ್ಲಿ ಸಂಚಲನ ಮೂಡಿಸಿ ಇತಿಹಾಸ ಬರೆದ ಧಾರಾವಾಹಿ ಮಾಯಾಮೃಗ. ಬಿಟ್ಟು ಬಿಡದೆ ಕಾಡಿದ ಧಾರಾವಾಹಿ ಮಾಯಾಮೃಗ ಅಪಾರ ಅಭಿಮಾನಿ ಬಳಗ ಹೊಂದಿದೆ. ಮಾಯಾಮೃಗ ಸೀರಿಯಲ್​​​ ಹೊಸ ಅಲೆಯನ್ನೇ ಎಬ್ಬಿಸಿತ್ತು. ಇದೀಗ ಕಿರುತೆರೆಯಲ್ಲಿ ಮತ್ತೆ ಬರ್ತಿದೆ ಮಾಯಾಮೃಗ. ಯೆಸ್​​.. ಟಿ.ಎನ್​ ಸಾರಥ್ಯದಲ್ಲಿ ಮಾಯಾಮೃಗ ರಿ ಟೆಲಿಕಾಸ್ಟ್​ ಆಗ್ತಾ ಇದೆಯಾ..? ಅಥ್ವಾ, ಮುಂದುವರೆದಾ ಭಾಗಾನಾ..? ಹೇಗಿರುತ್ತೆ ಹೊಸತನದ ಮಾಯಾಮೃಗ..? ನೀವೇ ಓದಿ.

  • ದಾಖಲೆ ಮೇಲೆ ದಾಖಲೆ ಬರೆದ ಧಾರಾವಾಹಿ ಮತ್ತೆ ಕಿರುತೆರೆಗೆ

ಆಗಿನ ಕಾಲಕ್ಕೆ ಕಿರುತೆರೆಯಲ್ಲಿ ಬರ್ತಿದ್ದ ಸೀಮಿತ ಧಾರಾವಾಹಿಗಳಲ್ಲಿ ಮ್ಯಾಜಿಕ್​ ಮಾಡಿದ ಸೀರಿಯಲ್​ ಮಾಯಾಮೃಗ. 1998 ರ ಕಾಲಘಟ್ಟದ ಚಂದನ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಮೆಗಾ ಸೀರಿಯಲ್​​​. ಟಿ.ಎನ್​ ಸೀತಾರಾಂ, ಪಿ.ಶೇಷಾದ್ರಿ, ನಾಗೇಂದ್ರ ಶಾ ಸಾರಥ್ಯದಲ್ಲಿ ಮೋಡಿ ಮಾಡಿದ ಅದ್ಭುತ ಕಥಾನಕ. ಪ್ರತಿಯೊಬ್ಬರ ದಿನಚರಿಯಲ್ಲಿ ಮಾಯಾಮೃಗ ಸೀರಿಯಲ್​​ಗೆ ಮೊದಲ ಸ್ಥಾನವಿತ್ತು. ಊಟ, ತಿಂಡಿ, ನಿದ್ದೆ ಬಿಟ್ಟು ಆಸಕ್ತಿಯಿಂದ ನೋಡ್ತಿದ್ದ ಧಾರಾವಾಹಿ ಮಾಯಾಮೃಗ.

ಇಳಿ ಸಂಜೆಯಾಗ್ತಿದ್ದಂತೆ ಮಾಯಾಮೃಗ ಸೀರಿಯಲ್​ ತಂಗಾಳಿ ಕಿವಿಗೆ ಸೋಕುತ್ತಿತ್ತು. ಎಲ್ಲೇ ಇದ್ರು ಎಲ್ಲರು ಓಡಿ ಬಂದು ಟಿವಿ ಮುಂದೆ ಕೂರುತಿದ್ರು. ಮಕ್ಕಳಿಂದ ಹಿಡಿದು, ವಯಸ್ಕರು, ಶ್ರೀಮಂತರು, ಬಡವರು ಎಲ್ಲರನ್ನು ಮಂತ್ರಮುಗ್ಧಗೊಳಿಸುತ್ತಿದ್ದ ಸಂಭಾಷಣೆ ಮಾಯಾಮೃಗ ಸೀರಿಯಲ್​​ನಲ್ಲಿತ್ತು. ಲಾಯರ್​ ಪಾತ್ರದಲ್ಲಿ ಮಿಂಚುತ್ತಿದ್ದ ಟಿ.ಎನ್​. ಸೀತಾರಾಂ ಸೀರಿಯಲ್​​​ನ ಇಡೀ ಜನರೇಷನ್​​ ಮಿಸ್​ ಮಾಡಿಕೊಳ್ತಿದೆ. ಇದೀಗ ಮಾಯಾಮೃಗ ಟೀಮ್​ನಿಂದ ಗುಡ್​ ನ್ಯೂಸ್​ ಸಿಕ್ಕಿದೆ. ಮತ್ತೆ ಹೊಸ ಕಥೆಯ ಮೂಲಕ ಮಾಯಾಮೃಗ ಸೀರಿಯಲ್​ ಪ್ರಸಾರವಾಗ್ತಿದೆ.

  • ಮತ್ತೆ ‘ಮಾಯಾಮೃಗ’.. ಅಭಿಮಾನಿಗಳಿಗೆ ಪುಳಕ
  • ಹಿಸ್ಟರಿ ರೀ ಕ್ರಿಯೇಟ್​ ಮಾಡೋಕೆ ಸೀತಾರಾಂ ಸಜ್ಜು

ಯೆಸ್​​.. 24 ವರ್ಷದ ನಂತ್ರ ಮತ್ತೊಮ್ಮೆ ಕಿರುತೆರೆ ಇತಿಹಾಸದಲ್ಲಿ ಮಾಯಾಮೃಗ ಧಾರಾವಾಹಿ ಸೀಕ್ವೆಲ್​ ಬರ್ತಿದೆ. ಹೊಸತನದ ಟಚ್​​ ಕೊಟ್ಟು, ಮುಂದಿನ ಜನರೇಷನ್​​ ಕಥೆಯನ್ನು ವಿಭಿನ್ನವಾಗಿ ತಮ್ಮದೇ ಸಿಗ್ನೇಚರ್​ ಸ್ಟೈಲ್​ನಲ್ಲಿ ಹೇಳಲಿದ್ದಾರೆ ಸೀತಾರಾಂ. ವಾಸ್ತವತೆಯ ಸಂಬಂಧ, ಸಂಭ್ರಮ, ಟೆಕ್ನಾಲಜಿಯನ್ನು ವಿಮರ್ಶಾತ್ಮಕವಾಗಿ ಸ್ಕೀನ್​ ಮೇಲೆ ತರೋಕೆ ತಯಾರಿ ನಡೆಸಿದ್ದಾರೆ. ಶೀಘ್ರದಲ್ಲೇ ಮತ್ತೆ ಮಾಯಾಮೃಗ ಮೆಗಾ ಸೀರಿಯಲ್ ದರ್ಬಾರ್​​​ ಶುರುವಾಗಲಿದೆ.

ಮದರ್ ಆಫ್​ ಆಲ್​ ಸೀರಿಯಲ್ಸ್​​​ ಎಂದು ಹೆಸರಾಗಿದ್ದ ಮಾಯಾಮೃಗ ಮತ್ತೆ ಕಿರುತೆರೆಗೆ ಬರೋ ಸುದ್ದಿ ಕೇಳಿ ಫ್ಯಾನ್ಸ್​ ಕೂಡ ಎಗ್ಸೈಟ್​ ಆಗಿದ್ದಾರೆ. ಪ್ಲಾಶ್​ ಬ್ಯಾಕ್​​ ದೃಶ್ಯಗಳು ಹಲವು ಸಲ ರಿಪೀಟ್​ ಆಗಲಿದೆ. ಮಾಯಾಮೃಗ ಸೀರಿಯಲ್​ ನಂತ್ರ ಸಿಕ್ಕಾಪಟ್ಟೆ ಖ್ಯಾತಿ ಪಡೆದ ಸೀತಾರಾಂ ಅನೇಕ ಸೀರಿಯಲ್​ ಗಳನ್ನು ನಿರ್ದೇಶನ ಮಾಡಿದ್ರು. ಇತ್ತೀಚೆಗೆ ಮಗಳು ಜಾನಕಿ ಧಾರಾವಾಹಿ ಕೂಡ ಸಿಕ್ಕಾಪಟ್ಟೆ ಹೆಸ್ರು ಮಾಡಿತ್ತು. ಹೊನ್ನಿನ ಜಿಂಕೆಯ ಬೆನ್ನತ್ತೋಕೆ ಪ್ರೇಕ್ಷಕರು ಸಖತ್​ ಕಾತರರಾಗಿದ್ದಾರೆ.

ಹಳೆ ಮಾಯಾಮೃಗ ಕಥೆಯಲ್ಲಿ ಶಾಸ್ತ್ರಿಗಳ ಕಥೆ ವ್ಯಥೆ, ಮುಗ್ಧ ಮನಸ್ಸಿನ ಕಮಲಮ್ಮ. ಅವ್ರ ಮಕ್ಕಳಾದ ಲಕ್ಷ್ಮಿ, ಶಾರದಾ, ಶ್ಯಾಮ ಮೊದಲಾದ ಪಾತ್ರಗಳು ಎಲ್ಲರ ಮನಸ್ಸು ಮುಟ್ಟಿದ್ದವು. ದತ್ತಣ್ಣ, ಮಾಳವಿಕಾ, ಅವಿನಾಶ್​, ರೇಖಾ ಅವ್ರ ಸಹಜಾಭಿನಯ ಸೀರಿಯಲ್​​ನ ಜನಪ್ರಿಯತೆಯ ಮೊದಲ ಪಂಕ್ತಿಯಲ್ಲಿ ನಿಲ್ಲಿಸಿದ್ದವು. ಇದೀಗ ಕೆಲವು ಬದಲಾವಣೆಗಳೊಂದಿಗೆ ಖಾಸಗಿ ವಾಹಿನಿಯಲ್ಲಿ ಹೊಚ್ಚ ಹೊಸ ಮಾಯಾಮೃಗ ಬರ್ತಿದೆ.

ನವನವೀನ ಕಥೆಯೊಂದಿಗೆ ಮತ್ತೆ ಮಾಯಾಮೃಗ ಹೊಸ ದಾಖಲೆ ಬರೆಯುತ್ತಾ ಕಾದು ನೋಡ್ಬೇಕಾಗಿದೆ. ಇಂದಿನ ಪಾಸ್ಟ್​ ಜನರೇಷನ್​​​ ಮಂದಿ ಮಾಯಾಮೃಗ ಸೀರಿಯಲ್​​ನ ಮತ್ತೆ ಒಪ್ಪಿಕೊಳ್ತಾರಾ ಅನ್ನೋದು ಇನ್ನು ಯಕ್ಷಪ್ರಶ್ನೆಯಾಗಿದೆ. ಎನಿವೇ, ಟಿ.ಎನ್​ ಸೀತಾರಾಂ ಟೀಮ್​ಗೆ ಆಲ್​ ದಿ ಬೆಸ್ಟ್ ಹೇಳೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES