Wednesday, January 22, 2025

ಭುವಿಗಿಳಿದ ಪರಮಾತ್ಮ.. ಅಪ್ಪುನ ನೋಡಿ ಫ್ಯಾನ್ಸ್ ಭಾವುಕ..!

ದಿ ವೆಯ್ಟ್​ ಈಸ್​ ಓವರ್​​​. ಅಪ್ಪು ವಿಷ್ಣುವಿನ ಅವತಾರದಲ್ಲಿ ಧರೆಗಿಳಿದಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಅಮರ ಪ್ರೇಮದ ನಾಯಕ, ಸನ್​ ಆಫ್​ ಬಂಗಾರದ ಮನುಷ್ಯ ಲಕ್ಕಿಮ್ಯಾನ್​ ಮೂಲಕ ತೆರೆಯ ಮೇಲೆ ಮಿಂಚಿದ್ದಾರೆ. ಪ್ರೇಕ್ಷಕರು ಅಪ್ಪುನ ಕಂಡು ಕಣ್ಣೀರಾಕಿದ್ದಾರೆ. ಜನಮಾನಸದ ಜನಾರ್ಧನ ಅಪ್ಪು ಹಾಗೂ ಡಾರ್ಲಿಂಗ್​ ಕೃಷ್ಣ ಅಭಿನಯದ ಲಕ್ಕಿಮ್ಯಾನ್​​ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಹೇಗಿತ್ತು ಅಪ್ಪು ಎಂಟ್ರಿ..?ಸಿನಿಮಾದ ಕಥೆ ಏನು..? ಪಾಸಿಟಿವ್​, ನೆಗೆಟಿವ್​ ಅಂಶಗಳೇನು..? ಕಂಪ್ಲೀಟ್​ ರಿಪೋರ್ಟ್​ ನಿಮಗಾಗಿ ಕಾಯ್ತಿದೆ. ನೀವೇ ಓದಿ.

  • ಲಕ್ಕಿಮ್ಯಾನ್ ಥಿಯೇಟರ್ಸ್​ನಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಭಕ್ರ ಪ್ರಹ್ಲಾದ ಸಿನಿಮಾದಲ್ಲಿ ಹರಿಭಕ್ತನಾಗಿ ಎಲ್ಲರ ಕಣ್ಮನ ಸೂರೆ ಮಾಡಿದ್ದ ಪುಟಾಣಿ ಅಪ್ಪು ಇಂದು ತೆರೆಯ ಮೇಲೆ ತಾವೇ ಹರಿಯಾಗಿದ್ದಾರೆ. ವಿಷ್ಣುವಿನ ಅವತಾರದಲ್ಲಿ ಲಕ್ಕಿಮ್ಯಾನ್​ ಚಿತ್ರದ ಮೂಲಕ ಎಲ್ಲರಿಗೂ ಜೀವನ ಪಾಠ ಹೇಳುವ ಯುವರತ್ನನನ್ನು ಕಂಡು ಪ್ರೇಕ್ಷಕರಂತು ಭಾವುಕರಾಗಿದ್ರು. ಅವರ ಮಾತು, ನುಡಿ, ಮುಖದ ಮೇಲಿನ ಮುದ್ದು ನಗು ಚಿತ್ರಪ್ರೇಮಿಗಳ ಹೃದಯ ಕಲಕುತ್ತಿತ್ತು. ಲಕ್ಕಿಮ್ಯಾನ್​​ ಸಿನಿಮಾ ಅಪ್ಪು ಅಭಿಮಾನಿಗಳ ಪಾಲಿಗೆ ಲಕ್ಕಿಯೆಸ್ಟ್​ ಸಿನಿಮವಾಗಿದೆ.

ಕರುನಾಡಿನ 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಲಕ್ಕಿಮ್ಯಾನ್​ ದರ್ಬಾರ್​​ ಶುರುವಾಗಿದೆ. ಅಪ್ಪು ಕಟೌಟ್​ಗಳು ಮುಗಿಲ ಚುಂಬಿಸುತ್ತಿವೆ. ಪ್ರೀತಿಸುವ ಭಕ್ತರಿಗೆ ವಿಷ್ಣುವಾಗಿ, ಆಲಿಂಗಿಸುವ ಪ್ರೇಮಿಗಳಿಗೆ ಏಸುವಾಗಿ, ಅರಿಯುವ ಜನತೆಗೆ ಅಲ್ಲಾ ಆಗಿ, ಶಾಂತಿ ಬಯಸುವವರಿಗೆ ಬುದ್ಧನಾಗಿ ನೀತಿ ಪಾಠ ಮಾಡಿದ್ದಾರೆ ಅಪ್ಪು. ಸಿನಿಮಾ ಆರಂಭದಿಂದ ಕೊನೆಯವರೆಗೂ ಅಪ್ಪು ಝೇಂಕಾರದ ಕಹಳೆ ಮೊಳಗಿದೆ. ಯೆಸ್​​​​.. ಎಲ್ಲಾ ಥಿಯೇಟರ್​ಗಳಲ್ಲೂ ಒಂದೇ ನಾದ ನಿನಾದ. ಅಪ್ಪು..ಅಪ್ಪು..ಅಪ್ಪು..ಅಪ್ಪು..

ನಗರದ ನರ್ತಿಕಿ ಥಿಯೇಟರ್​​ನಲ್ಲಿ ಫ್ಯಾನ್ಸ್​ ಸಂಭ್ರಮ ಮುಗಿಲು ಮುಟ್ಟಿತ್ತು. ನಾಟ್ಯಲೋಕ ಡ್ಯಾನ್ಸ್​ ಮಕ್ಕಳಿಂದ ಅಪ್ಪುಗೆ ನೃತ್ಯಾರ್ಪಣೆ ಮಾಡಲಾಯ್ತು. ಅಪ್ಪು ಎಂಟ್ರಿಗೆ ಪ್ರೇಕ್ಷಕರೆಲ್ಲಾ ಎದ್ದು ನಿಂತು ಭಕ್ತಿಯಿಂದ ಕೈ ಮುಗಿದ್ರು. ಅಂತೂ ಲಕ್ಕಿಮ್ಯಾನ್​ ಚಿತ್ರಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್​ ವೆಲ್ಕಮ್​ ಸಿಕ್ತು.

ಚಿತ್ರ: ಲಕ್ಕಿಮ್ಯಾನ್​​

ನಿರ್ದೇಶನ: ಎಸ್​. ನಾಗೇಂದ್ರ ಪ್ರಸಾದ್​​

ನಿರ್ಮಾಣ: ಸುಂದರ ಕಾಮರಾಜ್​​

ಸಂಗೀತ: ವಿಜಯ್​ ವಿಕ್ಕಿ

ಸಿನಿಮಾಟೋಗ್ರಫಿ: ಜೀವ ಶಂಕರ್​​

ತಾರಾಗಣ: ಡಾರ್ಲಿಂಗ್​ ಕೃಷ್ಣ, ಸಂಗೀತ ಶೃಂಗೇರಿ, ರೋಶಿನಿ ಪ್ರಕಾಶ್, ನಾಗಭೂಷಣ್​​, ಸುಂದರ್​ ರಾಜ್​, ಸಾಧು ಕೋಕಿಲ, ರಂಗಾಯಣ ರಘು, ಯೋಗರಾಜ್​ ಭಟ್​​​, ಸುಧಾ ಬೆಳವಾಡಿ, ಮಾಳ್ವಿಕಾ ಅವಿನಾಶ್​​ ಮುಂತಾದವರು.

ಲಕ್ಕಿಮ್ಯಾನ್​ ಸ್ಟೋರಿಲೈನ್

ಕಷ್ಟ ಆದ್ರೂ ಪರವಾಗಿಲ್ಲ ಇಷ್ಟ ಇಲ್ಲದ ಕೆಲಸ ಮಾಡಬಾರದು ಅನ್ನೋದು ಲೋಕಾರೂಡಿ. ಶ್ಯಾಮ ಸುಂದರ ಕೃಷ್ಣ ಕೂಡ ಅರ್ಜುನನಿಗೆ ಅದನ್ನೇ ಗೀತೋಪದೇಶ ಮಾಡಿ ಸಂದಿಗ್ಧ ಪರಿಸ್ಥಿತಿಯಲ್ಲಿ ಕಣ್ಣು ತೆರೆಸಿದ್ದರು. ಲಕ್ಕಿಮ್ಯಾನ್​ ಚಿತ್ರದಲ್ಲಿ ಪೇಚಿಗೆ ಸಿಕ್ಕು ಒದ್ದಾಡುವ ನಾಯಕ ಅರ್ಜುನನಿಗೆ, ಕೃಷ್ಣನಾಗಿ ಅಪ್ಪು ಅವತರಿಸಿದ್ದಾರೆ. ಬದುಕಿಗೆ ಹೊಸ ಅರ್ಥ ಕಲ್ಪಿಸಿದ್ದಾರೆ. ಜೀವನದಲ್ಲಿ ಯಾರೂ ಕೂಡ ಕನ್ಫ್ಯೂಶನ್​​ನಲ್ಲಿ ನಿರ್ಧಾರ ತಗೋಬಾರ್ದು. ಪಾಪ ನಮ್​ ಹೀರೋ ಬೆಸ್ಟ್​ ಫ್ರೆಂಡ್​​ ಮದ್ವೆ ಆಗ್ತಿಯಾ ಅಂತ ಕೇಳಿದ್ರೆ, ನೋ ಅನ್ನಲ್ಲ. ಥಟ್​ ಅಂತ ಕುಡಿದ ಅಮಲಿನಲ್ಲಿ ಯೆಸ್​ ಅಂದ್ಬಿಡ್ತಾನೆ. ಕೈಯಲ್ಲಿ ಕೆಲಸ ಇಲ್ಲ, ಜೇಬಲ್ಲಿ ದುಡ್ಡಿಲ್ಲ. ಮಾವ ಕೆಲಸ ಕೊಟ್ಟು, ಮಗಳನ್ನು ಕೊಡೋವಷ್ಟು ಉದಾರಿ. ಕಲ್ಯಾಣ ಭಾಗ್ಯವೂ ಲೀಲಾಜಾಲವಾಗಿ ನಡೆದು ಹೋಗುತ್ತೆ. ಕಾಲರ್​ ಹಿಡಿದು ಕಿತ್ತಾಡಿದ ಗೆಳತಿ ಜತೆ ಕೈ ಹಿಡಿದು ಮುದ್ದಾಡು ಅಂದ್ರೆ ನಾಯಕನ ಪಾಡು ಹೇಳತೀರದು. ಇದೇ ಕಥೆಗೆ ಸ್ಟಾರ್ಟಪ್​​​.

ಸೋಡಾ ಸ್ಪಿರಿಟ್​ ತರಹ ಮದ್ವೆ 10 ದಿನದಲ್ಲಿ ಠುಸ್​ ಪಟಾಕಿ. ಮಾವನ ಟಾಯ್ಲೆಟ್​ ಸೆರಾಮಿಕ್​ ಅಂಗಡಿಯೂ ಅರ್ಜುನ್​ಗೆ ಬೋರ್​ ಹೊಡೆಸುತ್ತೆ. ಕೊನೆಗೆ  ಹಳೆ ಗೆಳತಿ, ಹೊಸ ಪ್ರೇಮದ ಚಿಗುರು. ಹೆಂಡತಿ ಅನುಗೆ ಈ ಹೊಸ ಅನುರಾಗ ಕಂಡು ಅಸೂಯೆ. ಅಂತೂ ಫ್ಯಾಮಿಲಿ ವ್ಯಾಜ್ಯ ಫ್ಯಾಮಿಲಿ ಕೋರ್ಟ್​ ಅಂಗಳಕ್ಕೆ ಬಂದು ನಿಲ್ಲುತ್ತೆ. ಸಮಸ್ಯೆಗಳನ್ನು ಸೃಷ್ಟಿ ಮಾಡೋದು ಭಗವಂತನಾದ್ರೆ, ಆ ಸಮಸ್ಯೆಗೆ ಪರಿಹಾರ ಕೊಡೋನೂ ಸಹ ಅವನೇ ಅಲ್ಲವೇ. ಯೆಸ್​​.. ಮಾಡಿದ ತಪ್ಪನ್ನು ತಿದ್ದಿಕೊಳ್ಳೋಕೆ ದೇವರಾಗಿ ಸೆಕೆಂಡ್​ ಚಾನ್ಸ್ ಕೊಡ್ತಾರೆ ರಾಜರತ್ನ ಅಪ್ಪು. ಇನ್ಮುಂದೆ ನಡೆಯೋದೆಲ್ಲಾ ಭಗವಂತನ ಲೀಲೆ. ಕಂಪ್ಲೀಟ್​​​ ಕೃಷ್ಣನ ಲೀಲೆಯನ್ನು ನೀವು ಭಗವಂತನ ಸನ್ನಿಧಿಯಲ್ಲೇ ನೋಡ್ಬೇಕು. ಯೆಸ್​.. ಉಳಿದಿದ್ದನ್ನ ನೀವು ಮಿಸ್​ ಮಾಡದೇ ಥಿಯೇಟರ್​ಗೆ ಹೋಗಿ ತಿಳಿಬೇಕು.

ಲಕ್ಕಿಮ್ಯಾನ್​​​ ಆರ್ಟಿಸ್ಟ್ ಪರ್ಫಾಮೆನ್ಸ್

ಫ್ಯಾಮಿಲಿ ಕೋರ್ಟ್​ನಿಂದ ಲವ್​ ಕೋರ್ಟ್​​ವರೆಗೂ ಸಿನಿಮಾ ಟೇಕ್​ ಆಫ್​​​​​​. ಡಾರ್ಲಿಂಗ್​ ಕೃಷ್ಣ ಸಿನಿಮಾದಲ್ಲಿ ಪಾರ್ಥ ಸಾರಥಿಯಾಗಿ 100% ಪರ್ಫಾಮೆನ್ಸ್​​. ಸಂಗೀತ ಶೃಂಗೇರಿ, ರೋಶಿನಿ ಪ್ರಕಾಶ್​ ಇಬ್ಬರೂ ನಟಿಯರು ನಟನೆಯಲ್ಲಿ ಒಬ್ಬರಿಗಿಂತ ಮೇಲೋಬ್ಬರು. ಡಾರ್ಲಿಂಗ್​ ಕೃಷ್ಣ ಕೆಲವು ಸೀನ್​ಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.

ಅಪ್ಪು ಎಂಟ್ರಿಗೆ ಫ್ಯಾನ್ಸ್​​ ಫುಲ್​ ಸ್ಟನ್​ ಆಗಿ ಹೋಗ್ತಾರೆ. ಅಪ್ಪು ನಗುಮುಖದ ತೇರು ಇಲ್ಲಿ ಕೂಡ ಮುಂದುವರೆದಿದೆ. ಸಾಧು, ರಂಗಾಯಣ ರಘು ನಗುವಿನ ಟಾನಿಕ್​​​​ ಮಸ್ತ್​ ಆಗಿದೆ. ಭಟ್ರ ಅನಿರೀಕ್ಷಿತ ಎಂಟ್ರಿ ಸಖತ್​ ಆಗಿದೆ. ನಾಗಭೂಷಣ್​ ಫಸ್ಟ್​ ಆಫ್​ ಪವರ್​ ಪ್ಲೇನಲ್ಲೇ ಕಾಮಿಡಿಯ ಸಿಕ್ಸರ್​​ಗಳನ್ನು ಬಾರಿಸಿದ್ದಾರೆ.

ಲಕ್ಕಿಮ್ಯಾನ್​​​ ಪ್ಲಸ್ ಪಾಯಿಂಟ್ಸ್

ನಗುವಿನ ಹೈಡೋಸ್​ ಗುಳಿಗೆ

ಅಪ್ಪು ನೀತಿ ಪಾಠ ದಿವ್ಯೌಷಧಿ

ನಾಗಭೂಷಣ್​​ ಸೀದಾ ಸಾದಾ ಸಖತ್ ಫನ್​

ಅಪ್ಪು- ಪ್ರಭುದೇವ ಡ್ಯಾನ್ಸ್ ಧಮಾಕ

ನಾಗೇಂದ್ರ ಪ್ರಸಾದ್ ನಿರ್ದೇಶನ, ನಿರೂಪಣೆ

ಡಾರ್ಲಿಂಗ್ ಕಷ್ಣ​ ಎಕ್ಸಲೆಂಟ್​​ ಆ್ಯಕ್ಟಿಂಗ್​​

ಲಕ್ಕಿಮ್ಯಾನ್​ ಮೈನಸ್ ಪಾಯಿಂಟ್ಸ್

ಅಪ್ಪು ಅಬ್ಬರದಲ್ಲಿ ಮೊದಲಾರ್ಧ​ ಬಿಗ್​ಹಿಟ್ ಆಗಿದೆ. ಸೆಕೆಂಡ್​ ಹಾಫ್​​ನಲ್ಲಿ ಅಪ್ಪು ಪ್ರೆಸೆನ್ಸ್​ ಕಡಿಮೆ ಸಮಯವಾಗಿರೋದ್ರಿಂದ ಸ್ವಲ್ಪ ನೀರಸ ಎನಿಸಬಹುದು. ದ್ವಿತಿಯಾರ್ಧದ​​ ಕಿಕ್​​ ಎಫೆಕ್ಟ್​​​ ಕೂಡ ಸಾಧಾರಣವಾಗಿದೆ. ಸಿನಿಮಾದುದ್ದಕ್ಕೂ ನಮ್ಮಲ್ಲಿರೋ ನೆಗೆಟಿವಿಟಿ ತೆಗೆದು ಹಾಕೋ ಸಿನಿಮಾ ಇದು. ಜತೆಗೆ ಅಪ್ಪು ಗೀತೋಪದೇಶ ಪ್ರೇಕ್ಷಕರನ್ನು ಪದೇ ಪದೇ ಎಚ್ಚರಿಸುತ್ತದೆ. ಹಾಗಾಗಿ ಸಿನಿಮಾದಲ್ಲಿ ನೆಗೆಟಿವ್​ ಅಂಶಗಳಿಗೆ ಜಾಗ ಕಮ್ಮಿ.

  • ಲಕ್ಕಿಮ್ಯಾನ್​​ಗೆ ಪವರ್​​ ಟಿವಿ ರೇಟಿಂಗ್:   4/5
  • ಲಕ್ಕಿಮ್ಯಾನ್​​ ಫೈನಲ್ ಸ್ಟೇಟ್​ಮೆಂಟ್ :

ಮೊದಲ ಪ್ರಯತ್ನದಲ್ಲೇ ನಿರ್ದೇಶಕ ನಾಗೇಂದ್ರ ಪ್ರಸಾದ್​ ಪರ್ಫೆಕ್ಟ್​​ ಎನಿಸಿದ್ದಾರೆ. ಎಲ್ಲೂ ಬೋರ್​ ಹೊಡೆಸದೆ, ಪ್ರತಿ ಫ್ರೇಮಿನಲ್ಲೂ, ಪ್ರತಿ ಸೀನ್​ನಲ್ಲೂ ಪ್ರೇಕ್ಷಕರನ್ನು ಹಿಡಿದು ಕೂರಿಸಿದ್ದಾರೆ. ಅಪ್ಪು ನಟನೆಯ ಸಿನಿಮಾ ಎನ್ನುವುದಕ್ಕಿಂತ, ಒಂದೊಳ್ಳೆ ಸಿನಿಮಾ ಎಂದು ಎಂಜಾಯ್​ ಮಾಡಬಹುದು. ಮೀನಾಕ್ಷಿ ಸುಂದರಂ, ಸುಂದರ ಕಾಮರಾಜ್​ ಬಂಡವಾಳಕ್ಕೆ ನಿರ್ದೇಶಕರು ನ್ಯಾಯ ಒದಗಿಸಿದ್ದಾರೆ. ವಿಜಯ್​ ವಿಕ್ಕಿ ಮ್ಯೂಸಿಕ್​ ಕೂಡ ಹಿತವಾಗಿದೆ. ಅಪ್ಪು ಅಭಿನಯವನ್ನು ಮಿಸ್​ ಮಾಡ್ಕೊಂಡವ್ರು, ಒಳ್ಳೆ ಫ್ಯಾಮಿಲಿ ಸಿನಿಮಾ ನೋಡಬೇಕು ಅಂದುಕೊಂಡವ್ರು, ಜತೆಗೆ ಲವರ್ಸ್​​​​​, ಬೆಸ್ಟ್ ಫ್ರೆಂಡ್ಸ್​​​, ಕಪಲ್ಸ್​ ಕಡ್ಡಾಯ ನೋಡಲೇಬೇಕಾದ ಸಿನಿಮಾ ಲಕ್ಕಿಮ್ಯಾನ್​​​​. ಕೊನೆಯಲ್ಲಿ, ಸಿನಿಮಾ ನೋಡೋಕೆ ಸೆಕೆಂಡ್​ ಚಾನ್ಸ್ ತಗೋಬೇಡಿ. ಬೇಗ ಥಿಯೇಟರ್​ಗೆ ಹೋಗಿಬಿಡಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES