Wednesday, January 22, 2025

ನನಗೆ ಮಂಡಿ ನೋವು ಇರುವುದರಿಂದ ನಾನು ಹೋಗಲ್ಲ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ನನಗೆ ಮಂಡಿ ನೋವು ಇರುವುದರಿಂದ ನಾನು ಹೋಗಲ್ಲ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ಕೋಟಿ ಸಂಗ್ರಹ ಮಾಡಿ ಸಿದ್ದರಾಮೋತ್ಸವ ಮಾಡಿದ್ರಲ್ಲಾ ಅದು ರಾಜಕೀಯ ಪ್ರೇರಿತ, ಕಾರ್ಯಕ್ರಮಕ್ಕೆ ಯಾರು ಯಾರೂ ದುಡ್ಡು ಕೊಟ್ರು, ಆ ದುಡ್ಡು ಎಷ್ಟು ಖರ್ಚು ಮಾಡಿದ್ರಿ, ಬಸ್ಸಿಗೆ ಎಷ್ಟು ಕೊಟ್ರಿ, ಜನರಿಗೆ ಎಷ್ಟು ಕೊಟ್ರಿ ಅದರ ಲೆಕ್ಕ ಕೊಡಿ ಮೊದಲು, ಒಂದು ಕಾರ್ಯಕ್ರಮ ಮಾಡಿ ಕಾಂಗ್ರೆಸ್ ಸರ್ಕಾರವೇ ಬಂತು ಅಂತಾ ಬೀಗಿಕೊಂಡಿದ್ರು, ಬಿಜೆಪಿ ಇಂತಹ ನೂರು ಕಾರ್ಯಕ್ರಮ ಮಾಡಿದೆ ಎಂದರು.

ಇನ್ನು, ಪ್ರಧಾನಿ ಮೋದಿ ಅವರು ಮಂಗಳೂರಿಗೆ ಬಂದಾಗ ಜ‌ನಸಾಗರವೇ ಸೇರಿತ್ತು. ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ‌ ಕಾರ್ಯಕ್ರಮ ಆಗ್ತಿದೆ. ಬಹಳ ದೊಡ್ಡ ಕಾರ್ಯಕ್ರಮ ಆಗ್ತಿದೆ. ಚುನಾವಣೆಯವರೆಗೂ ಇಂತಹ ಕಾರ್ಯಕ್ರಮ ನಡೆಸುತ್ತಿರುತ್ತೇವೆ. ಇಂತಹ ಕಾರ್ಯಕ್ರಮ ನೋಡಿ ಕಾಂಗ್ರೆಸ್ ನವರಿಗೆ ಸಮಾಧಾನ ಆಗ್ತಿಲ್ಲ. ಇದಕ್ಕೆ ನಾವೇನು ಮಾಡೋಕೆ ಆಗಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಗಣಪತಿ ವಿಸರ್ಜನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗ ಇನ್ನು ಮುಂದೆ ಎಲ್ಲಾ ವಿಚಾರದಲ್ಲೂ ಶಾಂತಿಯಿಂದ ಇರುತ್ತದೆ. ಯಾರೋ ಕೆಲವು ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಗೊಂದಲ‌ ಉಂಟು ಮಾಡುವ ಪ್ರಯತ್ನ ನಡೆಸಿದ್ದರು. ಸರ್ಕಾರ ಅಂತಹವರಿಗೆ ಸರಿಯಾದ ಬುದ್ದಿ ಕಲಿಸಿದೆ. ಅವರು ಸಹ ಬುದ್ದಿ ಕಲಿತಿದ್ದಾರೆ ಅಂತಾ ನಾನು ಭಾವಿಸುತ್ತೇನೆ. ಅವರ ಹಿರಿಯರು ಸಹ ಬುದ್ದಿ ಹೇಳಿರಬಹುದು. ಶಿವಮೊಗ್ಗ ನಗರದ ಇತಿಹಾಸದಲ್ಲಿ ನಿನ್ನೆ ನಡೆದ ಗಣಪತಿ ಉತ್ಸವದ ವೈಭವದಿಂದ ನಡೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ನನ್ನ ಜೀವನದಲ್ಲಿ ಇಷ್ಟೊಂದು ಸಂಭ್ರಮ ನೋಡಿದ್ದು ಇದೇ ಮೊದಲು ಎಂದರು.

RELATED ARTICLES

Related Articles

TRENDING ARTICLES