Monday, May 20, 2024

12 ರಾಜ್ಯಗಳಲ್ಲಿ ನಡೆಯಲಿದೆ ಜೋಡೋ ಯಾತ್ರೆ

ದಿನದಿಂದ ದಿನಕ್ಕೆ ಕಾಂಗ್ರೆಸ್​ ತನ್ನ ಅಸ್ತಿತ್ವ ಕಳೆದುಕೊಳ್ತಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ.

ಗಾಂಧಿ ಕುಟುಂಬದ ನಾಯಕತ್ವದಲ್ಲಿ ತನ್ನ ಸ್ಥಿರತೆಯನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಹೊಸ ರೂಪದೊಂದಿಗೆ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಅನೇಕ ಸರ್ಕಸ್​ ಮಾಡುತ್ತಿದೆ. ಭಾರತ್ ಜೋಡೋ ಯಾತ್ರೆ ಎಂದು ಹೆಸರಿನಲ್ಲಿ ಕಾಂಗ್ರೆಸ್ ಕಳೆದ ಬುಧವಾರ ತಮಿಳುನಾಡಿನ ಕನ್ಯಾಕುಮಾರಿಯಿಂದ ಬರೋಬ್ಬರಿ 3,570-ಕಿಮೀ ಪಾದಯಾತ್ರೆಯನ್ನು ಪ್ರಾರಂಭಿಸಿತು. ಮೆರವಣಿಗೆಯು 5 ತಿಂಗಳವರೆಗೆ ಇರುತ್ತದೆ. ಶ್ರೀನಗರದಲ್ಲಿ ಮುಕ್ತಾಯಗೊಳ್ಳುವ ಮೊದಲು 12 ರಾಜ್ಯಗಳಿಗೆ ಈ ಯಾತ್ರೆ ಹೋಗುತ್ತದೆ. ಈ ಪಾದಯಾತ್ರೆಗೆ ಬೆಂಗಾವಲು ಪಡೆ ವಾಹನ ಇರುತ್ತದೆ. ಇವುಗಳನ್ನು ಹಾಸಿಗೆಗಳ ಲಭ್ಯತೆಗಳು ಮತ್ತು ವಸ್ತ್ರಗಳನ್ನು ಬದಲಾವಣೆ ಮಾಡಲು ಇದನ್ನು ಉಪಯೋಗಿಸಲಾಗಿದೆ.

ಟ್ರಕ್‌ಗಳಲ್ಲಿ ಅಳವಡಿಸಲಾಗಿರುವ ಈ ಕಂಟೈನರ್‌ಗಳಲ್ಲಿ ಕಾಂಗ್ರೆಸ್ ನಾಯಕರು ಮಲಗುತ್ತಾರೆ. ಜೊತೆಗೆ ರಸ್ತೆಬದಿಗಳಲ್ಲಿ ಬಿಡಾರ ಹಾಕುತ್ತಾರೆ. ಈ ಐಷಾರಾಮಿ ಕಂಟೈನರ್‌ಗಳು ಹವಾನಿಯಂತ್ರಣಗಳು ಮತ್ತು ಆಧುನಿಕ ಸೌಕರ್ಯಗಳನ್ನು ಹೊಂದಿವೆ. ಅವುಗಳಲ್ಲಿ ಒಂದನ್ನು ಮಿನಿ ಕಾನ್ಫರೆನ್ಸ್ ಹಾಲ್​ನ್ನಾಗಿ ಪರಿವರ್ತಿಸಲಾಗಿದೆ. ಪಾದಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರ ಬಳಿಯೇ ಈ ಕಂಟೈನರ್ ಇದೆ. ಗಾಂಧಿ ಕುಟುಂಬಕ್ಕೆ ಕಂಟೈನರ್ ಒಂದು ಹಾಸಿಗೆ, ಅಟ್ಯಾಚ್ಡ್ ಬಾತ್ರೂಮ್ ಮತ್ತು ಮಂಚವನ್ನು ಹೊಂದಿದೆ. ಇದು ಹಳದಿ ಬಣದಿಂದ ಕೂಡಿದೆ. ಅವರ ಭದ್ರತಾ ತಂಡವು ಕಂಟೈನರ್ ಸಂಖ್ಯೆ 2ರಲ್ಲಿ ಇರುತ್ತಾರೆ. ಅವರ ಬಟ್ಟೆ, ಅವರ ಅಲಂಕಾರ ಸಾಮಾಗ್ರಿಗಳನ್ನು ಕಂಟೈನರ್ ಸಂಖ್ಯೆ 4 ರಲ್ಲಿ ಇರಿಸಲಾಗಿದೆ.

RELATED ARTICLES

Related Articles

TRENDING ARTICLES