Monday, December 23, 2024

ದೊಡ್ಡಬಳ್ಳಾಪುರದಲ್ಲಿ ಕೇಸರಿ ಬ್ರಿಗೇಡ್‌ ರಣಕಹಳೆ..!

ದೊಡ್ಡಬಳ್ಳಾಪುರ : ಕಾಂಗ್ರೆಸ್‌- ಜೆಡಿಎಸ್‌ಗೆ ಟಕ್ಕರ್‌ ಕೊಡಲು ದೊಡ್ಡಬಳ್ಳಾಪುರದಲ್ಲಿ ಇಂದು ಬಿಜೆಪಿ ‘ಜನಸ್ಪಂದನ’ ಸಮಾವೇಶ ಜರುಗಲಿದೆ.

ನಗರದ ಬೀದಿ ಬೀದಿಯಲ್ಲಿ ಬಿಜೆಪಿ ನಾಯಕರ ಕಟೌಟ್‌ ರಾರಾಜಿಸುತ್ತಿದ್ದು, ವಿಪಕ್ಷಗಳ ಟೀಕೆಗೆ ಜನಸ್ಪಂದನ ಮೂಲಕ ಟಕ್ಕರ್‌ ಕೊಡಲು ಪ್ಲ್ಯಾನ್‌ ಮಾಡಿದ್ದಾರೆ. ಇನ್ನು, ಬೃಹತ್‌ ವೇದಿಕೆಯಲ್ಲಿ ಸರ್ಕಾರದ 3 ವರ್ಷದ ಸಾಧನಾ ವರದಿ ಮಂಡಿಸಲಿದ್ದು, 140 ಅಡಿ ಅಗಲ, 1800 ಅಡಿ ಉದ್ದದ ಬೃಹತ್‌ ವೇದಿಕೆ ರೆಡಿಯಾಗಿದೆ.
ಇನ್ನು, ಜನಸ್ಪಂದನ ಸಮಾವೇಶದಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಲಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿ ಸಂಪುಟದ ಸಚಿವರು ಭಾಗಿಯಾಗಲಿದ್ದಾರೆ.

ಅದಲ್ಲದೇ, ಜನಸ್ಪಂದನ ಸಮಾವೇಶದಲ್ಲಿ 3 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸುಮಾರು 200 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ, ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ 5,000 ಬಸ್​ಗಳು, ಜನಸ್ಪಂದನ ಕಾರ್ಯಕ್ರಮಕ್ಕೆ ಬರುವವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಇನ್ನು, ಕಾರ್ಯಕರ್ತರಿಗಾಗಿ ಪಲಾವ್‌, ಮೊಸರನ್ನ ಬಾದುಷಾ ರೆಡಿ ಮಾಡಲಾಗಿದ್ದು, 1 ಸಾವಿರ ಬಾಣಸಿಗರಿಂದ ಊಟ, ತಿಂಡಿ ಸಿದ್ಧತೆ, ಕಾರ್ಯಕರ್ತರಿಗಾಗಿ 203 ಊಟದ ಕೌಂಟರ್‌ ಓಪನ್‌, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ಊಟದ ಕೌಂಟರ್‌, ಸಮಾವೇಶದ ಭದ್ರತೆಗೆ 2,300 ಪೊಲೀಸರನ್ನು ನಿಯೋಜಿಸಲಾಗಿದೆ.

RELATED ARTICLES

Related Articles

TRENDING ARTICLES