ಬೆಂಗಳೂರು: ರಾಜ್ಯದ ಜನರಿಗೆ ಸ್ಪಂದಿಸದೇ ಜನ ಸ್ಪಂದನ ಸಮಾವೇಶ ಮಾಡ್ತೀರಿ, ಹೇಳ್ಕೋಳೋದಕ್ಕೆ ಇವರ ಹತ್ರ ಏನು ಸಾಧನೆಗಳಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ರಾಜ್ಯ ಸರ್ಕಾರ ಈ ಸಮಾವೇಶದಲ್ಲಿ ಶೇ 40 ಕಮಿಷನ್ ಬಗ್ಗೆ ಹೇಳಿಕೊಳ್ಳಬೇಕಷ್ಟೇ, ಜನರು ಕಷ್ಟದಲ್ಲಿದ್ದಾರೆ. ನೆರೆ ಪೀಡಿತ ಪ್ರದೇಶಗಳಿಗೆ ಇವರು ಹೋಗ್ತಿಲ್ಲ. ಜನ ಸ್ಪಂದನ ಅಂದ್ರೆ ಕಷ್ಟಕೊಳಗಾದವರಿಗೆ ಸರ್ಕಾರ ಸ್ಪಂದಿಸಬೇಕು. ಆದರೆ, ಕಷ್ಟ ಕೇಳೋದು ಬಿಟ್ಟು ರಾಜಕೀಯ ಮಾಡ್ತಿದ್ದಾರೆ ಇಲ್ಲಿ, ಪ್ರವಾಹದಲ್ಲಿ ಕಷ್ಟಕ್ಕೊಳಗಾದವರಿಗೆ ಸ್ಪಂದಿಸಲಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಸಮಾವೇಶಕ್ಕೆ ಜನ ಸೇರಿಸ್ಕೊಂಡು ದುಡ್ಡು ಖರ್ಚು ಮಾಡ್ಕೊಂಡು ರಾಜಕೀಯ ಮಾಡ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಜನ ಸ್ಪಂದನ, ಜನ ಸ್ಪಂದನ ಅಂದ್ರೆ ಏನು? ಜನರ ಕಷ್ಟಕ್ಕೆ ಸ್ಪಂದಿಸುವುದು ಜನ ಸ್ಪಂದನ, ಬರೀ ಹೆಸರು ಮಾತ್ರ ಜನ ಸ್ಪಂದನ ಅಂದ್ರೆ ಆಯ್ತಾ. ಜನರ ಕಷ್ಟ ಕೇಳದೀಯೇ ಎಂದರು.
ಇನ್ನು ಬೆಂಗಳೂರಲ್ಲಿ ಬೋಟ್ ನಲ್ಲಿ ಓಡಾಡುವ ಪರಿಸ್ಥಿತಿ ಇದೆ. ಇವರ ತಪ್ಪಿನಿಂದ ಜನ ಕಷ್ಟಕ್ಕೊಳಗಾಗಿದ್ದಾರೆ. ಜನರ ಕಷ್ಟ ಸುಖಕ್ಕೆ ಸ್ಪಂದಿಸಿದ್ದಾರಾ, ಯಾವ ಸಚಿವರೂ ಯಾವ ಜಿಲ್ಲೆಗೆ ಹೋಗ್ತಿಲ್ಲ, ಸಚಿವರು ಯಾರೂ ಕ್ಷೇತ್ರಕ್ಕೆ ಹೋಗ್ತಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.