ಲಂಡನ್: ಧೂಮಪಾನ(ಸಿಗರೇಟ್) ಮಾಡದವರಿಗೂ ಶ್ವಾಸ ಕೋಶದ ಕ್ಯಾನ್ಸರ್ ಬರುತ್ತದೆ ಎಂದು ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ವರದಿಯ ಅಧ್ಯಯನದಿಂದ ಮಾಹಿತಿ ಹೊರ ಬಿದ್ದಿದೆ.
ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್ ಹಾಗೂ ಯೂನಿವರ್ಸಿಟಿ ಕಾಲೇಜ್ ಲಂಡನ್ ಜಂಟಿಯಾಗಿ ಅಧ್ಯಯನ ನಡೆಸಿ, ಇಂಧನದಿಂದ ಬರುವ ಹೊಗೆ, ಬಸ್ ಇನ್ನೀತರ ವಾಹನದ ಹೊಗೆ, ಧೂಳಿನ ಕಣವನ್ನ ಸೇವಿಸಿದರೇ ಧೂಮಪಾನ ಮಾಡದ ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎಂದು ಈ ಅಧ್ಯಯನದ ವರದಿ ಹೇಳಿದೆ.
ಈ ಅಧ್ಯಯನದ ವರದಿ ಪ್ರಕಾರ, ವಾಹನದ ಹೊರಸೋಸುವಿಕೆ ಗಾಳಿ ಹಾಗೂ ಇಂಧನಗಳಿಂದ ಬರುವ ಹೊಗೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕಣಗಳಿಂದ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರಿ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್ (NSCLC) ಬರುತ್ತದೆ ಎಂದು ಹೇಳಿದೆ. ವಿಶ್ವದಲ್ಲಿ ಈ ರೀತಿಯ ರೋಗಕ್ಕೆ ತುತ್ತಾಗಿ ಸಾವೀಗಿಡಾಗುವರ ಸಂಖ್ಯೆ 1 ವರ್ಷಕ್ಕೆ 250,000 ಜನರು ಎಂದು ವರದಿಯಲ್ಲಿ ತಿಳಿಸಿದೆ.
ಈ ಎರಡು ತಂಡಗಳು ಸಿಗರೇಟ್ ಸೇದದವರ ಬಗ್ಗೆ ಅಧ್ಯಯನ ಮಾಡಿ ವರದಿಯನ್ನ ತಯಾರಿಸಲು ಲಂಡನ್ನಿಂದ ಧನಸಹಾಯ ನೀಡಿದ್ದು, ಈ ವರದಿಯನ್ನ ESMO ಕಾಂಗ್ರೆಸ್ ಪ್ರಸ್ತುತಪಡಿಸಿದರು.