Sunday, May 19, 2024

ರಾಜ್ಯ ರಸ್ತೆಗಳ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತು.!

ಬೆಂಗಳೂರು: ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ದೀರ್ಘ ಸಭೆ ಮಾಡಿದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಕರ್ನಾಟಕ ಹಾಗೂ ತಮಿಳುನಾಡು ನಡುವೆ ಅಂತರ್ ರಾಜ್ಯ ಸಂಪರ್ಕಕ್ಕೆ 260 ಕಿ.ಮೀ ಉದ್ದದ ಗ್ರೀನ್ ಫೀಲ್ಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧಾರ ಆಗಿದೆ. ಬೆಂಗಳೂರು-ಕಡಪ-ವಿಜಯವಾಡ ಹೈವೇ ನಿರ್ಮಾಣಕ್ಕೂ ತೀರ್ಮಾನ
ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿವೆ. 288 ಕಿ.ಮೀ ಉದ್ದದ ಸ್ಯಾಟಲೈಟ್ ರಿಂಗ್ ರೋಡ್ ನಿರ್ಮಾಣ, ಮಂಗಳೂರು-ಬಾಂಬೆಗೆ ಕಲ್ಪಿಸುವ ಹೈವೇ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಶಿರಾಡಿಘಾಟ್ ಕಾಮಗಾರಿ ‌ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಅರಣ್ಯ ಸಚಿವರು, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಎಲ್ಲರೂ ಭೇಟಿಯಾಗಿದ್ದಾರೆ. ಈ ಬಗ್ಗೆ ಎಲ್ಲರೂ ಕೂಡ ಚರ್ಚೆ ಮಾಡಿದ್ದಾರೆ. ದಿಲ್ಲಿಯಲ್ಲಿ ಕೂಡ ಈ ಬಗ್ಗೆ ಚರ್ಚೆಯಾಗಿದೆ. 15,000 ಕೋಟಿ ರೂ ವೆಚ್ಚದಲ್ಲಿ ಟನಲ್ ಕಾಮಗಾರಿ ಆರಂಭವಾಗಲಿದೆ. ಯುದ್ದೋಪಾದಿಯ ರೀತಿ ಅದರ ಕಾಮಗಾರಿ ಮಾಡಿ ಶೀಘ್ರವೇ ಮುಕ್ತ ಮಾಡುತ್ತೇವೆ ಎಂದರು.

ಇನ್ನು ಮೈಸೂರು ರಸ್ತೆ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಮಳೆ ಬಂದು ಸ್ವಲ್ಪ ಸಮಸ್ಯೆ ಆಗಿದೆ. ಡ್ರೈನೇಜ್ ಸಿಸ್ಟಮ್ ಸಮಸ್ಯೆ ಆಗಿದೆ. ಅದನ್ನ ಮುಂದಿನ ನಿರ್ಧಿಷ್ಟ ದಿನಗಳಲ್ಲಿ ಸರಿಪಡಿಸಲಾಗುವುದು. ಇದರಲ್ಲಿ ಯಾವುದೇ ಕರೆಪ್ಷನ್ ಆಗಿಲ್ಲ. ಕ್ವಾಲಿಟಿ ಕಾಮಗಾರಿ ಮಾಡುವ ಗುರಿ ಇದೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಕಾಮಗಾರಿ ಬಗ್ಗೆ ಅಧಿಕಾರಿಗಳ ಬಳಿ ವರದಿ ಕೇಳಿದ್ದೇನೆ. ಕಳೆದ 50 ವರ್ಷಗಳಲ್ಲಿ ಭಾರೀ ಮಾಳೆಯಾಗಿದೆ. ಮಳಯಿಂದ ಸಮಸ್ಯೆ ಆಗಿರೋದು ಸತ್ಯ. ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಕ್ರಮ ಆಗಲಿದೆ.

RELATED ARTICLES

Related Articles

TRENDING ARTICLES