Monday, May 20, 2024

ಬೆಂಗಳೂರು ವಿಕಾಸಕ್ಕೆ ಸಿಎಂಗೆ ಕೇಂದ್ರ ಸಚಿವ ಗಡ್ಕರಿ ಸೂಚನೆ

ಬೆಂಗಳೂರು: ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿ ನಂತರ ಕೇಂದ್ರ ಸಾರಿಗೆ ಮಂತ್ರಿ ನಿತೀನ್ ಗಡ್ಕರಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು.

ಸಿಎಂ ಬೊಮ್ಮಾಯಿ ಅವರು ಭೇಟಿಯಾಗಿ ಬೆಂಗಳೂರು ಟ್ರಾಫಿಕ್ ಬಗ್ಗೆ ಕೂಡ ಚರ್ಚೆ ಮಾಡಿದ್ದಾರೆ. ಬೆಂಗಳೂರು ಹಾಗೂ ಬೆಂಗಳೂರು ರಸ್ತೆ ಬಗ್ಗೆ ನಮ್ಮ ಡಿಪಾರ್ಟ್‌ಮೆಂಟ್ ಚರ್ಚೆ ಮಾಡಿದೆ. ಬೆಂಗಳೂರು ಚೆನೈ ಕಾರಿಡಾರ್ ಬಗ್ಗೆ ಚರ್ಚೆಯಾಗಿದೆ. ದೇಶದ ಉತ್ತರ ಹಾಗೂ ದಕ್ಷಿಣ ಸಂಚಾರ ದಟ್ಟಣೆ ಕಡಿಮೆ ಮಾಡಲು ಕಾರಿಡಾರ್ ಹೈವೆ ಮಾಡಲಾಗ್ತಿದೆ. ಬೆಂಗಳೂರು ಸ್ಯಾಟಲೈಟ್ ಕಾರಿಡಾರ್ ಮಾಡಲಾಗಿದೆ. ಸುಮಾರು 16ಸಾವಿರ ಕೋಟಿ ಇದಕ್ಕಾಗಿ ಖರ್ಚಾಗುತ್ತಿದೆ.

ಅಲ್ಲದೇ, ಮುಂಬೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಮಾಡಲಾಗ್ತಿದೆ. ಮುಂಬೈನಿಂದ ಬೆಂಗಳೂರಿಗೆ ಬರಲು ಆರು ಗಂಟೆ ಪ್ರಯಾಣ ಸಮಯ ಆಗಲಿದೆ. 288 ಸ್ಯಾಟಲೈಟ್ ಹೈವೆ ಮಾಡುವ ಗುರಿ ಹೊಂದಿದ್ದೇವೆ. ಒಟ್ಟು ಎಂಟು ಪ್ರಾಜೆಕ್ಟ್ ಇದಾಗಿದೆ. ಐದು ಕಡೆ ಈಗಾಗಲೇ ಕಾಮಗಾರಿ ಶುರುವಾಗಿದೆ. ಬನ್ನೇರುಘಟ್ಟ ಫಾರೆಸ್ಟ್ ಕ್ಲಿಯೆರೆನ್ಸ್ ಸಿಕ್ಕಿಲ್ಲ. ಅದರ ಕ್ಲಿಯರೆನ್ಸ್ ಅವಶ್ಯಕತೆ ಇದೆ. ಈ ಬಗ್ಗೆ ಸಿಎಂ ಬಳಿ ಕೂಡ ಚರ್ಚೆ ಮಾಡಿದ್ದೇವೆ. ದೆಹಲಿಯಲ್ಲಿ ಇದೇ ಮಾದರಿಯಲ್ಲಿ ಮಾಡಲಾಗ್ತಿದೆ ಎಂದರು.

ಚೆನೈ-ಬೆಂಗಳೂರು, ಮುಂಬೈ-ಪುಣೆ, ಹೈವೆಗಳು ಕೂಡ ನಿರ್ಮಾಣ ಆಗ್ತಿದೆ. ಬೆಂಗಳೂರಿನ ಟ್ರಾಫಿಕ್ ಕನ್ಜೆಕ್ಷನ್ ಬಗ್ಗೆ ಅಧ್ಯಯನ ಮಾಡಲಾಗಿದೆ‌. ತುಮಕೂರು ರಸ್ತೆಯಲ್ಲಿ, ರಸ್ತೆ, ಮೆಟ್ರೋ, ಫ್ಲೈ ಓವರ್ ಮೂರು ಮಾದರಿಗಳನ್ನು ಬೇರೆ ಕಡೆ ಅಳವಡಿಸಿಕೊಳ್ಳುವಂತೆ ಮಾಡಲಾಗುವುದು. ಬೆಂಗಳೂರಿನಲ್ಲಿ ರಿಂಗ್ ರೋಡ್ ಮಾಡಲಾಗ್ತಿದೆ. ಬೇರೆ ಬೇರೆ ಮಾರ್ಗಗಳಿಗೆ ರಿಂಗ್ ರೋಡ್ ಬೇರೆ ರಾಜ್ಯಗಳಿಗೂ ಸಂಪರ್ಕ ಕಲ್ಪಿಸಲಾಗ್ತಿದೆ.

ಪಬ್ಲಿಕ್ ಮಾಸ್ ಟ್ರಾನ್ಸ್‌ಪೋರ್ಟ್‌ ನ್ನ ಪಿಲಿಪೈನ್ಸ್ ನಲ್ಲಿರೋ ಸ್ಕೈ ಬಸ್ ಮಾದರಿಯನ್ನ, ವಿಶ್ವದ ತಜ್ಞರ ಜೊತೆ ಚರ್ಚೆ ಮಾಡಿ. ಬೆಂಗಳೂರಿನಲ್ಲಿ ಪೈಲೆಟ್ ಪ್ರಾಜೆಕ್ಟ್ ಮಾಡಲು ಚಿಂತನೆ ಮಾಡಲಾಗಿದೆ. ಇದು ಯಶಸ್ವಿಯಾದ್ರೆ, ಅದನ್ನ ಅಳವಡಿಸಿಕೊಳ್ಳಬಹುದು. ಒಂದು ಮನೆಯಲ್ಲಿ ನಾಲ್ಕು ಜನ ಇದ್ರೂ ಆರು ಗಾಡಿಗಳಿವೆ. ಪಾರ್ಕಿಂಗ್ ಸಮಸ್ಯೆ ಇರುತ್ತದೆ. ಟ್ರಾಲಿ ಬಸ್ ಪ್ರಾಜೆಕ್ಟ್ ಕೂಡ ಇದೆ. ಜನ ಟಿಕೆಟ್ ಬುಕ್ ಮಾಡಿ, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿಕೊಂಡು ಹೋಗಬಹುದು. ಪೆಟ್ರೋಲ್ ಗಾಡಿಯಲ್ಲಿ ಹೋದ್ರೆ 7ರೂ, ಡಿಸಲ್ ಗಾಡಿಯಲ್ಲಿ ಹೋದ್ರೆ 5ರೂ, ಬ್ಯಾಟರಿ ಗಾಡಿಯಲ್ಲಿ ಹೋದ್ರೆ 1ರೂ ವೆಚ್ಚ ತಗುಲಲಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಬ್ಯಾಟರಿ ಕಾರ್ ಬಳಸಿದ್ರೆ ಪೆಟ್ರೋಲ್ ದರ ಕೂಡ ಕಡಿಮೆಯಾಗಲಿದೆ. ಲಿಥಿಯಂ, ಎತೆನಾಲ್ ಬಳಕೆಗೆ ಹೆಚ್ಚು ಒತ್ತು ನೀಡಲಾಗ್ತಿದೆ. ಕರ್ನಾಟಕ ಕಬ್ಬು ಹೆಚ್ಚು ಬೆಳೆಯುತ್ತಿದ್ದಾರೆ, ಅದರಿಂದ ಎಥನಾಲ್ ಬಳಸಬಹುದು. ಎಥೆನಾಲ್ ಅನ್ನ ಎಲ್ಲಾ ವಾಹನಗಳಿಗೆ ಬಳಸಿಕೊಳ್ಳುವ ಮೂಲಕ ಪೆಟ್ರೋಲ್ ಕಡಿಮೆ ಬಳಕೆ ಮಾಡಬೇಕಿದೆ. ಎಲೆಕ್ಟ್ರಿಕ್ ವಾಹನಗಳನ್ನ ಹೆಚ್ಚು ಬಳಸಬೇಕಿದೆ. ಇದರಿಂದ ಪೊಲ್ಯೂಷನ್ ಹಾಗೂ ಟ್ರಾಫಿಕ್ ಕಡಿಮೆ ಮಾಡಬಹುದು.

ಇನ್ನು ಬೆಂಗಳೂರು ವಿಕಾಸಕ್ಕೆ ಸಿಎಂಗೆ ಸೂಚನೆ ನೀಡಿದ್ದೇನೆ. ಎಲ್ಲರೂ ಸೇರಿ ಬೆಂಗಳೂರು ಬೆಳವಣಿಗೆ ಮಾಡಬೇಕಿದೆ. ಬೆಂಗಳೂರು ಬಹಳ ದೊಡ್ಡ ಎಕನಾಮಿಕ್ ಸೆಂಟರ್ ಆಗಿದೆ. ವಿಶ್ವದ ಬಹಳಷ್ಟು ಸಂಸ್ಥೆಗಳು ಇಲ್ಲಿ ಕೆಲಸ ಮಾಡ್ತಿವೆ. ಹಾಗಾಗಿ ನಾವು ಬೆಂಗಳೂರನ್ನ ಪ್ರಮುಖವಾಗಿ ಗಮನ ಹರಿಸುತ್ತಿದ್ದೇವೆ.

RELATED ARTICLES

Related Articles

TRENDING ARTICLES