ಮಡಿಕೇರಿ : ಕೊಡಗಿನ ಜನರು ಮಳೆಗಾಲ ಬಂದ್ರೆ ಸಾಕು ಜೀವ ಕೈಯಲ್ಲಿ ಹಿಡಿದು ಬದುಕು ಸ್ಥಿತಿ ನಿರ್ಮಾಣವಾಗುತ್ತೆ. ಗಡಿ ಭಾಗ ಮಡಿಕೇರಿ ತಾಲ್ಲೂಕಿನ ಕೊಯಾನಾಡು, ಸಂಪಾಜೆ, ಪೆರಾಜೆ, ಚಂಬು ಇನ್ನಿತರ ಗ್ರಾಮಗಳು ನಾಲ್ಕು ವರ್ಷಗಳಿಂದ ಮಳೆಯ ಹೊಡೆತಕ್ಕೆ ಸಿಲುಕಿ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಗಡಿ ಭಾಗದಲ್ಲಿ ಹರಿಯುವ ಪಯಸ್ಪಿನಿ ನದಿಗೆ ಅಡ್ಡಲಾಗಿ ಅವೈಜ್ಞಾನಿಕವಾಗಿ ಜನರ ವಿರೋಧದ ನಡುವೆ ಬೆಟ್ಟ ಗುಡ್ಡಗಳಿಂದ ಹರಿದು ಬರುವ ನದಿಗೆ ಅಡ್ಡಲಾಗಿ ಕಿಂಡಿ ಆಣೆಕಟ್ಟನ್ನು ಕಟ್ಟಲಾಗಿದೆ. ಆದ್ರೆ ಈ ಅಣೆಕಟ್ಟು ಕಟ್ಟೆಯಿಂದ ಗಡಿ ಭಾಗದ ಜನರಿಗೆ ಭಾರೀ ತೊಂದರೆಯಾಗಿದ್ದು, ಪ್ರತಿ ವರ್ಷ ಮಳೆ ಬಂದ್ರೆ ನಮಗೆ ನಿರಾಶ್ರಿತರ ಕೇಂದ್ರವೇ ಗತಿಯಾಗಿದೆ. ಈ ಭಾಗದಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ ಅಂತಾ 8 ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಕೊಹಿನಾಡು ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಕಟ್ಟಲಾದ ಅಣೆಕಟ್ಟೆಯಿಂದ ಬೆಟ್ಟ ಗುಡ್ಡಗಳಿಂದ ಹೆಚ್ಚು ನೀರು ಹರಿದು ಬರುತ್ತದೆ. ಅಣೆಕಟ್ಟೆಯಿಂದ ನೀರು ಸರಾಗವಾಗಿ ಹರಿಯಲಾಗದೆ ವಾಸ ಮಾಡುವ ಮನೆಗಳಿಗೆ ನುಗ್ಗಿ ಮನೆಗಳನ್ನು ನೆಲಸಮ ಮಾಡುತ್ತಿದೆ. ಈ ಬಾರಿ ಮಳೆ ಬಂದು 10ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಸಾಕುಪ್ರಾಣಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಪ್ರತಿ ವರ್ಷ ಇದೇ ಸಮಸ್ಯೆ ಯಾಗುತ್ತದೆ. ಮೊದಲು ಎಷ್ಟು ಮಳೆ ಬಂದ್ರು ನೀರು ಹೋಗುತ್ತಿತ್ತು. ಈಗ ಸೇತುವೆ ಜೊತೆಗೆ ಅಣೆಕಟ್ಟು ಕಟ್ಟಿ ಸಮಸ್ಯೆಯಾಗಿದೆ. ಹೀಗಾಗಿ ಅಣೆಕಟ್ಟು ತೆರವು ಮಾಡಿ ನಾವು ನೆಮ್ಮದಿಯಿಂದ ಜೀವನ ಮಾಡಲು ಅವಕಾಶ ಮಾಡಿಕೊಡಿ ಎಂದು ಜನರು ಗೋಳಾಡುತ್ತಿದ್ದಾರೆ.
ಪ್ರವಾಹ ಉಂಟಾದಾಗ ಮುಖ್ಯಮಂತ್ರಿ ಸೇರಿ ಹಲವು ಸಚಿವರು ಬಂದು ಹೋದರು, ಯಾರಿಂದಲೂ ಪರಿಹಾರ ದೊರಕಿಲ್ಲ, ಪ್ರತಿ ಮಳೆಗಾಲ ಸಂದರ್ಭದಲ್ಲಿ ನೀವು ಕೂಡ ನಮ್ಮ ಸಮಸ್ಯೆಯನ್ನು ಕೇಳುವ ಪರಿಸ್ಥಿತಿಯಲ್ಲಿಲ್ಲ. ಪ್ರವಾಹದ ಸಮಯದಲ್ಲಿ ಜಿಲ್ಲಾಡಳಿತ ಬಂದು ನಮ್ಮ ನಿರಾಶ್ರಿತರ ಕೇಂದ್ರಕ್ಕೆ ಬಿಡುತ್ತಾರೆ. ಮತ್ತೆ ಕುಸಿದು ಬಿದ್ದ ಮನೆಗಳಿಗೆ ಹೋಗಿ ಅಂತ ಕಳುಹಿಸುತ್ತಾರೆ. ಬಿದ್ದ ಮನೆಗಳನ್ನಾದ್ರೂ ಕಟ್ಟಿಸಿ ಕೊಡುವ ಕೆಲಸ ಮಾಡಲ್ಲ. ಮಕ್ಕಳನ್ನು, ವಯಸ್ಕರನ್ನು ಹೇಗೆ ಸಾಕೋದು. ಇಲ್ಲಿನ ಸ್ಥಳೀಯ ಶಾಸಕರು ಭೇಟಿ ನೀಡುತ್ತಾರೆ ಸಮಸ್ಯೆ ಕೇಳದೆ ಸುಮ್ಮನೆ ನೋಡಿ ಹೋಗುತ್ತಾರೆ. ನಮಗೆ ಸೂಕ್ತ ಪರಿಹಾರ ಕೊಡಿ ಇಲ್ಲ 8 ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ಎಂದು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ.
ಒಟ್ಟಾರೆ, ಜೋರು ಮಳೆಗೆ ಕೊಡಗಿನ ಜನ ಸಂಕಷ್ಟಕ್ಕೀಡಾಗಿದ್ದು, ಎಷ್ಟೇ ಮನವಿ ಮಾಡಿದ್ರೂ ಸರ್ಕಾರ ಇವರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ನೊಂದ ಜನ ದಯಾಮರಣ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈಗಲಾದರೂ ಸರ್ಕಾರ ಇವರ ಕಷ್ಟಗಳಿಗೆ ಸ್ಪಂದಿಸುತ್ತಾ..? ಕಾದು ನೋಡಬೇಕಿದೆ.
ಸುರೇಶ್ ಬಿ. ಪವರ್ ಟಿವಿ ಮೈಸೂರು.