Saturday, January 4, 2025

ಸೇತುವೆ ಮುಳುಗಡೆ ವಿದ್ಯಾರ್ಥಿಗಳಿಗೆ ಸಂಕಷ್ಟ

ಬಳ್ಳಾರಿ :  ವರುಣಾರ್ಭಟ ಮುಂದುವರೆದಿದ್ದು ರಾರಾವಿ ಸೇತುವೆ ಮುಳುಗಿದ್ದು ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಸೇತುವೆ ಮುಳುಗಡೆಯಿಂದ ಹಲವು ಭಾಗಗಳ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆ ಪರೀಕ್ಷೆ ಬರೆಯುವ ಪದವಿ ವಿದ್ಯಾರ್ಥಿಗಳಿಗೆ ಮತ್ತೆ ಸಮಸ್ಯೆಯಾಗಿದೆ. ಸೇತುವೆ ಮುಳುಗಡೆಯಿಂದ ಸಿರುಗುಪ್ಪಕ್ಕೆ ತೆರಳಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಈ ಸಮಸ್ಯೆಯಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ನಿನ್ನೆಯ ಪರೀಕ್ಷೆ ಮಾತ್ರ ಮುಂದೂಡಿತ್ತು. ಆದರೆ ಕಾಲೇಜುಗಳು ಇವತ್ತಿನ ಪರೀಕ್ಷೆ ಮುಂದೂಡುವುದಿಲ್ಲವೆಂದು ಸ್ಪಷ್ಟಪಡಿಸಿವೆ. ಪರೀಕ್ಷೆ ಮುಂದೂಡುವುದಿಲ್ಲ ವಿದ್ಯಾರ್ಥಿಗಳು ಪರ್ಯಾಯ ಕಲ್ಪಿಸಿಕೊಳ್ಳಬೇಕು ಎಂದು ಎಲ್ಲಾ ಕಾಲೇಜುಗಳು ತಿಳಿಸಿದ್ದು ವಿದ್ಯಾರ್ಥಿಗಳು ಸರ್ಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES