Sunday, May 19, 2024

ಮಾನ್ಸೂನ್ ರಾಗ ಭರಾಟೆ.. ಡಾಲಿ ಬಾರ್ ಗಲಾಟೆ

ಮಾನ್ಸೂನ್​ ರಾಗ ಪ್ರಮೋಷನ್​ನಲ್ಲಿ ಸಖತ್​ ಬ್ಯುಸಿ ಇರೋ ಡಾಲಿ ರಾತ್ರೋರಾತ್ರಿ ಬಾರ್​ಗೆ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಮಾನ್ಸೂನ್​ ಎಫೆಕ್ಟ್​​​ಗೆ ರಾತ್ರೋರಾತ್ರಿ ಲೋಕಲ್​ ಬಾರ್​​ ಒಳಗೆ ನುಗ್ಗಿದ್ದಾರೆ. ಅರೆ..! ಏಕಾಏಕಿ ಬಾರ್​​​ ಒಳಗೆ ನುದ್ದಿದ ಡಾಲಿ ಅಂಡ್​ ಟೀಮ್​​ ನೀತಿ ಪಾಠ ಕೂಡ ಮಾಡಿದೆ. ಮೇಷ್ಟ್ರ ಪಾಠ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಅಮೃತ ಘಳಿಗೆಯಲ್ಲಿ ನಡೆದಿದ್ದೇನ್​ ಗೊತ್ತಾ..? ನೀವೇ ಓದಿ.

ಮೊನ್ನೆ ತಾನೆ ತಮಟೆ ಏಟಿಗೆ ಬಿಂದಾಸ್​ ಸ್ಟೆಪ್​  ಹಾಕಿದ್ದ ಡಾಲಿ ಧನಂಜಯ ಮಾನ್ಸೂನ್​ ರಾಗ ಸಿನಿಮಾದ ಪ್ರಮೊಷನ್​​ನಲ್ಲಿ ಬ್ಯುಸಿಯಾಗಿದ್ದಾರೆ. ಸೆ. 16ಕ್ಕೆ ತೆರೆಗೆ ಬರಲಿರೋ ಬಹುನಿರೀಕ್ಷಿತ ಸಿನಿಮಾ ಮಾನ್ಸೂನ್​ ರಾಗ ಹೊಸ ಅಲೆ ಎಬ್ಬಿಸಿದೆ. ವಿಭಿನ್ನವಾಗಿ ಪ್ರಚಾರ ಗಿಟ್ಟಿಸುತ್ತಿರೋ ಮಾನ್ಸೂನ್​ ಟೀಮ್​ ರಾತ್ರೋರಾತ್ರಿ ಬಾರ್​ ಒಳಗೆ ನುಗ್ಗಿದೆ.

ಬೆಂಗಳೂರಿನ ಲೋಕಲ್​ ಬಾರ್​​ಗೆ ಲೋಕಲ್​ ಸ್ಟೈಲ್​ನಲ್ಲೇ ಡಾಲಿ ಧನಂಜಯ ಎಂಟ್ರಿ ಕೊಟ್ಟಿದ್ದಾರೆ. ಕ್ಯಾಸುಯೆಲ್​​ ವೈಟ್ ಟೀ ಶರ್ಟ್​, ಶಾರ್ಟ್​ ತೊಟ್ಟು ಆಟೋದಲ್ಲಿ ಬಂದಿಳಿದ ಡಾಲಿ ಧನಂಜಯ ನೇರವಾಗಿ ಬಾರ್​​ ಒಳಗೆ ಎಂಟ್ರಿ ಕೊಟ್ರು. ಟೇಬಲ್​ನಲ್ಲಿ ಕುಳಿತ ಮದ್ಯ ಪ್ರಿಯರಿಗೆ ಶೇಕ್​ ಹ್ಯಾಂಡ್​ ಮಾಡಿ ಜೋರಾ ಪಾರ್ಟಿ ಎಂದು ಕೇಳಿದ್ದಾರೆ. ಅರೆ ಕ್ಷಣ ಶಾಕ್​ ಆದ ಮಂದಿ ಡಾಲಿ ಕಂಡು ಕುಡಿದ ಎಣ್ಣೆ ಅಮಲು ಇಳಿದು ಹೋಗಿದೆ.

  • ಬಾರ್​ ಸಪ್ಲೈಯರ್​​ ಜತೆಗೆ ಡಾಲಿ ಖುಲ್ಲಂ ಖುಲ್ಲಾ ಟಾಕ್​​
  • ಕುಡಿದ ಮತ್ತಿನಲ್ಲಿ ಡಾಲಿ ಧನಂಜಯ ಫುಲ್​​ ಎಣ್ಣೆ ಸಪ್ಲೈ..?

ಮಾನ್ಸೂನ್​ ರಾಗ ಪ್ರಮೋಷನ್​​ಗೆ ಬಾರ್​ಗೆ ಎಂಟ್ರಿ ಕೊಟ್ಟಿದ್ದ ಡಾಲಿ ಎಲ್ಲರೊಂದಿಗೆ ಸಿಂಪಲ್​ ಆಗಿ ಕೂತು ಮಾತನಾಡಿದ್ರು. ಬಾರ್​ ಸಪ್ಲೈಯರ್​ ರೋಲ್​ನಲ್ಲಿ ನಟಿಸ್ತಾ ಇರೋ ಡಾಲಿ ವಿಭಿನ್ನವಾಗಿ ಪ್ರಚಾರ ಮಾಡೋಕೆ ಈ ಪ್ಲಾನ್​ ಮಾಡಿಕೊಂಡಿದ್ರು. ಫ್ಯಾನ್ಸ್​​​ ಜತೆಗೆ ವೀಡಿಯೋ ಕಾಲ್​ ಮಾಡಿ ಮಾತನಾಡಿದ್ರು. ಕುಡಿವಾಗ ಕಾಲ್​ ಮಾಡ್ತೀಯಾ ಅಂತಾ ಅವಾಜ್​ ಹಾಕಿದ್ರು.

ಮದ್ವೇನಾ ಬೇಡ ಅಂದೋರಿಗೆ ಕೆಲವು ಸಲಹೆಗಳನ್ನು ನೀಡಿದ್ರು. ಪ್ರೀತಿಯಲ್ಲಿ ನೊಂದು ಬೆಂದವ್ರಿಗೆ, ಬದಲಾವಣೆ ಜಗದ ನಿಯಮ. ಮದ್ವೆ ಆಗಿ ಲೈಫ್​ ಚೇಂಜ್​ ಆಗಬಹುದು ಎಂದ್ರು.

ಇದ್ರ ಜತೆಗೆ ಬಾರ್​ನಲ್ಲಿದ್ದ ಎಲ್ಲಾ ಅಭಿಮಾನಿಗಳ ಜತೆಗೆ ಫೋಟೋ ಕ್ಲಿಕ್ಕಿಸಿ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡ್ರು. ನಾನು ಮೊದ್ಲು ಕುಡಿಯೋಕೆ ಬರ್ತಿದ್ದೆ. ಯಾರಿಗೆ ಗೊತ್ತು ನೀವೆಲ್ಲಾ ಮುಂಚೆ ಸಿಕ್ಕಿರಬಹುದು ಎಂದು ಹಳೆ ನೆನಪುಗಳನ್ನು ಮೆಲಕು ಹಾಕಿದ್ರು.

ಕೊನೆಯಲ್ಲಿ ಬಾರ್​​​ ಕೌಂಟ್​​ರ್​​ನಲ್ಲಿ ನಿಂತು ಎಣ್ಣೆ ಕೂಡ ಸಪ್ಲೈ ಮಾಡಿದ್ರು. ಸೆಪ್ಟೆಂಬರ್​ 16ಕ್ಕೆ ನಮ್​ ಸಿನಿಮಾ ಬರ್ತಿದೆ. ಲವ್​ ಫೇಲ್ಯೂರ್​ ಆದವ್ರು, ಎಲ್ಲರೂ ಸಿನಿಮಾ ನೋಡಿ ಇಷ್ಟವಾಗುತ್ತೆ ಎಂದ್ರು. ಜತೆಗೆ ಎಣ್ಣೆ ಬಾಟಲ್​ ಓಪನ್​ ಮಾಡಿ ಚಿಲ್​ ಮಾಡಿದ್ರು.

ಯೆಸ್​​.. ಮಾನ್ಸೂನ್​ ರಾಗ ರೆಟ್ರೋ ಸ್ಟೈಲ್​ನಲ್ಲಿ ಮೂಡಿ ಬರ್ತಿರೋ ವಿಭಿನ್ನ ಕಥೆಯ ಸಿನಿಮಾ. ಎ.ಆರ್​ ವಿಖ್ಯಾತ್​ ನಿರ್ಮಾಣದಲ್ಲಿ, ಎಸ್​.ರವೀಂದ್ರನಾಥ್​ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಅನೂಪ್​ ಸೀಳಿನ್​ ಮ್ಯೂಸಿಕ್​ ಕಂಪೋಸ್​ ಸಿನಿಮಾಗಿದ್ದು ರಿಲೀಸ್​ಗೂ ಮುನ್ನವೇ ಸಖತ್​ ಹೈಪ್​ ಕ್ರಿಯೇಟ್​ ಮಾಡಿದೆ. ವಿಭಿನ್ನವಾಗಿ ಪ್ರಚಾರ ಗಿಟ್ಟಿಸ್ತಿರೋ ಮಾನ್ಸೂನ್​ ರಾಗ ಸಿನಿಮಾ ತೆರೆಯ ಮೇಲೆ ಕಮಾಲ್​ ಮಾಡುತ್ತಾ ಕಾದು ನೋಡ್ಬೇಕಾಗಿದೆ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ  

RELATED ARTICLES

Related Articles

TRENDING ARTICLES