ಬೆಂಗಳೂರು : ಅರೆಸ್ಟ್ ಮಾಡಲು ಬಂದಿದ್ದ ಕೇರಳದ ಪಿಎಸ್ಐ ತಲೆಗೆ ಮಕ್ಕಳಾಡುವ ಗನ್ ಇಟ್ಟು ಬೆದರಿಸಿ ಪರಾರಿಯಾಗಿದ್ದ ಡ್ರಗ್ ಪೆಡ್ಲರ್ ನನ್ನು ಎಚ್ಎಸ್ಆರ್ ಲೇಔಟ್ ಹಾಗೂ ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೇರಳ ಮೂಲದ ಜಾಫರ್ ಎಂಬಾತ ಕೇರಳದ ಕುರತಿಕಾಡ್ ಠಾಣೆಯಲ್ಲಿ ದಾಖಲಾಗಿದ್ದ ಎನ್ಡಿಪಿಎಸ್ ಪ್ರಕರಣದ ಆರೋಪಿಯಾಗಿದ್ದ. ಅಲ್ಲದೇ ಕೇರಳದಿಂದ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದ. ಆರೋಪಿಯ ನಂಬರ್ ಟ್ರೇಸ್ ಮಾಡಿದ ಕೇರಳದ ಪೊಲೀಸರು ಜಾಫರ್ ನನ್ನ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಆಗಸ್ಟ್ 24ರ ರಾತ್ರಿ ಎಚ್ಎಸ್ಆರ್ ಲೇಔಟ್ ವ್ಯಾಪ್ತಿಯಲ್ಲಿದ್ದ ಆಲ್ ಬೇಕ್ ಹೋಟೆಲ್‌ಗೆ ಬಂದಿದ್ದ ಆರೋಪಿಯನ್ನು ವಶಕ್ಕೆ ಪಡೆಯಲು ಯತ್ನಿಸಿದ್ದರು. ಈ ವೇಳೆ ಕೇರಳದ ಪಿಎಸ್ಐ ಸುನುಮಾನ್ ಗೆ ಎಂಬುವವರಿಗೆ ಸ್ಥಳೀಯ ಅಂಗಡಿಯಲ್ಲಿ ಖರೀದಿಸಿದ್ದ ರಿವಾಲ್ವಾರ್ ತೋರಿಸಿ ತನ್ನ ಸಹಚರನೊಂದಿಗೆ ಕಾರಿನಲ್ಲಿ ಎಸ್ಕೇಪ್ ಆಗಿದ್ದ.
ಘಟನೆ ಸಂಬಂಧ ಕುರತಿಕಾಡ್ ಠಾಣಾ ಪಿಎಸ್ಐ ಸುನುಮಾನ್ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ನು ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಎಚ್ಎಸ್ಆರ್ ಲೇಔಟ್ ಪೊಲೀಸರು, ಕೇರಳ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಗೆ ಇಳಿದಿದ್ರು. ಇನ್ನು ಕೋಲಾರ ಬಳಿ ಆರೋಪಿ ತಲೆಮರೆಸಿಕೊಂಡಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೊನೆಗೂ ಖತರ್ನಾಕ್ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ.
ಇನ್ನು ಪಿಎಸ್ ಐ ಗೆ ರಿವಾಲ್ವಾರ್ ತೋರಿಸಿದ ಕೇಸಲ್ಲಿ ಆರೋಪಿ ಜಾಫರ್‌ನ ವಿಚಾರಣೆ ಶುರುವಾಗಿದ್ದು, ರಿವಾಲ್ವಾರ್ ಎಲ್ಲಿಂದ ಬಂತು ಅನ್ನೊ ಬಗ್ಗೆ ತನಿಖೆ ನಡೆಸಲಾಗ್ತಿದೆ.
ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ