Friday, November 22, 2024

ನೇತಾಜಿ ಕಂಡ ಆದರ್ಶ ಕನಸು ಇಂದು ನನಸು; ನರೇಂದ್ರ ಮೋದಿ

ನವದೆಹಲಿ: ನವದೆಹಲಿಯಲ್ಲಿಂದು 3.2 ಕಿ.ಮೀ ವ್ಯಾಪ್ತಿಯ ಕರ್ತವ್ಯ ಪಥ(ಸೆಂಟ್ರಲ್​ ವಿಸ್ತಾ) ಉದ್ಘಾಟನೆ ಮಾಡಿ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದರು.

ಇಂದು ಬ್ರೀಟಿಷ್​ ರು ಅಳವಡಿಸಿದ್ದ ಪ್ರತಿಮೆಯನ್ನ ತೆಗೆದು ಹಾಕಿ ಸ್ವಾತಂತ್ರ್ಯವೀರ ಸುಭಾಷ್ ಚಂದ್ರ ಬೋಸ್​ ಅವರ ಪ್ರತಿಮೆ ನಿರ್ಮಾಣ ಮಾಡಿದ್ದೇವೆ. ನೇತಾಜಿ ಕಂಡ ಆದರ್ಶ ಕನಸು ಇಂದು ನನಸಾಗಿದೆ. ಅವರ ಸಾಧನೆ ಇಡೀ ದೇಶಕ್ಕೆ ಪ್ರೇರಣೆ ಎಂದು ನರೇಂದ್ರ ಮೋದಿ ಬಣ್ಣಿಸಿದರು.

ದೇಶದ ಶಿಕ್ಷಣ ನೀತಿಯಲ್ಲು ಭಾರತೀಶ ಶಿಕ್ಷಣ ನೀತಿ ತಂದಿದ್ದೇವೆ. ನಮ್ಮ ದೇಶವು ಈ ಕರ್ತವ್ಯ ಪಥದ ಮೂಲಕ ಆರಂಭವಾಗಿದೆ. ಕರ್ತವ್ಯ ಪಥ ನಿರ್ಮಾಣದಿಂದ ಹೊಸ ಭಾರತವನ್ನು ನಿರ್ಮಾನ ಮಾಡಿದ್ದೇವೆ. ಈ ಹಿಂದೆ ಇದ್ದ ಹಲವು ರಸ್ತೆಗಳ ಹಳೆಯ ಹೆಸರನ್ನ ನಾವು ಬದಲಾವಣೆ ಮಾಡಿದ್ದೇವೆ.

ದೇಶದ ಕರ್ತವ್ಯ ಪಥದಲ್ಲಿ ಹೋಗಲು ಬ್ರಿಟಿಷ್​ ಅಧಿಕಾರಿಗಳಿಗೆ ಮಾತ್ರ ಅವಕಾಶ ಇತ್ತು. ದೇಶದ ಯುವಕರಲ್ಲಿ ಗುಲಾಮಿ ಮಾನಸಿಕತೆ ತೊಡೆದು ಹಾಕಿದ್ದೇವೆ. ದೇಶದ ನೌಕಾ ಪಡೆಯ ಧ್ವಜದಲ್ಲಿಯೂ ಶಿವಾಜಿಯ ಸಂಕೇತ ತಂದಿದ್ದೇವೆ. ನಾವು ಸರ್ವಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡಿಯೇ ಸಿದ್ಧ ಎಂದು ಮೋದಿ ಹೇಳಿದರು.

ಕೇಂದ್ರದ ಸರ್ಕಾರದಿಂದ ಶಿಕ್ಷಣ ನೀತಿಯಲ್ಲೂ ಬದಲಾವಣೆಯಾಗುತ್ತಿದೆ. ಕರ್ತವ್ಯ ಪಥ ಲೋಕಾರ್ಪಣೆ ಮಾಡಿರುವು ನನ್ನ ಸೌಭಾಗ್ಯ, ಅಖಂಡ ಕನಸನ್ನು ಸುಭಾಷ್ ಚಂದ್ರ ಕಂಡಿದ್ದರು, ಆದರೆ ಸ್ವಾತಂತ್ರ್ಯ ನಂತರ ಕೆಲವರು ಮರೆತಿದ್ದರು. ಈಗ ಮತ್ತೆ ಪುತ್ಥಳಿ ಮಾಡುವ ಮೂಲಕ ಇಡೇರಿಸಿದ್ದು, ಇದೊಂದು ಅಸ್ಮರಣೀಯ ಗಳಿಗೆ ಎಂದು ಮೋದಿ ತಿಳಿಸಿದರು.

 

RELATED ARTICLES

Related Articles

TRENDING ARTICLES