ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮ ರಾಜ್ಯಾಧ್ಯಕ್ಷರು ಸೇರಿ ಚರ್ಚೆ ನಡೆಸಿ ಭಾನುವಾರ ರಜೆ ಇರುತ್ತದೆ. ಹೀಗಾಗಿ ಸೆಪ್ಟಂಬರ್ 11ಕ್ಕೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ.
ಇನ್ನು ವಿರೋಧ ಪಕ್ಷ ಭಾನುವಾರ ಅಶುಭದಿನ ಇದೆ ಎಂದು ಒಳ್ಳೆ ಕೆಲಸ ಮಾಡುವುದು ಬೇಡ ಅಂತ ಪ್ರೀ ಪೋನ್ ನಾವು ಮಾಡಿಕೊಂಡಿದ್ದೇವೆ. ನಮ್ಮ ಎಲ್ಲಾ ಸಚಿವರು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಮೂರು ವರ್ಷಗಳ ರಾಜ್ಯ ಸರ್ಕಾರದ ಸಾಧನೆ ಈ ಕಾರ್ಯಕ್ರಮದಲ್ಲಿ ಇಡಲಿದ್ದೇವೆ ಎಂದು ಸಚಿವರು ತಿಳಿಸಿದರು.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹೇಗೆ ಕೆಲಸ ಮಾಡಿತ್ತು ಎಂದು ಸೆ.11 ರಂದು ನಡೆಯುವ ಜನೋತ್ಸವ ಕಾರ್ಯಕ್ರಮದಲ್ಲಿ ತೆರದಿಡಲಿದ್ದೇವೆ. ಜನೋತ್ಸವ ಕಾರ್ಯಕ್ರಮ ಎನ್ನುವುದು ಹಬ್ಬದ ವಾತಾವರಣ, ಅತಿವೃಷ್ಟಿಯಲ್ಲಿ ಹಬ್ಬ ಎನ್ನುವ ಪದ ಬಳಸದೆ ಜನ ಸ್ಪಂದನ ಕಾರ್ಯಕ್ರಮ ಮಾಡಬೇಕು ಎಂದು ಮಾಡಿದ್ದೇವೆ ಎಂದು ಕಾರ್ಯಕ್ರಮದ ಹೆಸರು ಬದಲಾವಣೆ ಬಗ್ಗೆ ಮಾಹಿತಿ ನೀಡಿದರು.
ಕೋವಿಡ್ ಸಂಧರ್ಭದಲ್ಲಿ, ಅಭಿವೃದ್ಧಿ ಸಂಧರ್ಭದಲ್ಲಿ ಯಾವ ರೀತಿಯಲ್ಲಿ ಸ್ಪಂದಿಸಿದೆ, ಸರ್ಕಾರ ಯಾವ ರೀತಿಯ ಸ್ಪಂದನ ನೀಡಿದೆ ಎನ್ನುವುದಕ್ಕೆ ಈ ಹೆಸರು ಬದಲಾವಣೆಗೆ ಕಾರಣವಾಗಿದೆ. ಜನೋತ್ಸವ ಹೆಸರಿನಲ್ಲಿ ದೋಷ ಏನ್ ಇರಲಿಲ್ಲ, ಸಿಎಂ ಸೆ.10 ರಂದು ಏನ್ ಹೇಳುತ್ತಾರೆ ಎಂದು ನೋಡಬೇಕು ಅವರ ಬಾಯಿನಲ್ಲಿ ನೀವೇ ಕೇಳಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಹೇಳಿದರು.