ಬೆಂಗಳೂರು: ಬೆಂಗಳೂರಿನಲ್ಲಾದ ಮಳೆ ಹಾನಿಗೆ ಹಿಂದಿನ ಸರ್ಕಾರ ಕಾರಣ ಅಂತ ಹೇಳ್ತಾರೆ, ಅನಗತ್ಯವಾಗಿ ಈ ರೀತಿ ಹೇಳಿ ನುಣುಚಿಕೊಳ್ಳುವ ಕೆಲಸ ಮಾಡಬೇಡಿ, ನಾವೇನು ಮಾಡಿದ್ದೇವೆ ಅಂತ ಜನರಿಗೆ ಹೇಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಾದ ಮಳೆ ಹಾನಿ ಬಗ್ಗೆ ಪರೀಶಿಲಿಸಿದ ಸಿದ್ದರಾಮಯ್ಯ ಅವರು, ಇಡೀ ಬೆಂಗಳೂರಿಗೆ ಒಬ್ಬ ಕಮಿಷನರ್ ಮಾತ್ರ ಇರೋದು. ಒತ್ತುವರಿ ತೆರವಿಗೂ ಕೂಡ ವಿರೋಧ ಮಾಡಿದ್ದರು ಇವರು, ನಿಮ್ಮ ಕೆಲಸ ಮಾಡದೇ ನಿಮ್ಮ ವೈಪಲ್ಯ ಮುಚ್ಚಿಕೊಳ್ಳಲು ನಮ್ಮ ಮೇಲೆ ರಾಜ್ಯ ಸರ್ಕಾರ ಮಾತನಾಡುತ್ತಿದೆ.
ಸ್ಥಳೀಯ ಶಾಸಕರು ಎಷ್ಟು ವರ್ಷದಿಂದ ಇದಾರೆ, ಅವರು ಏನು ಮಾಡ್ತಾ ಇದ್ದಾರೆ ಅವರು, ಇದಕ್ಕೆ ಜವಬ್ದಾರಿ ಬಿಜೆಪಿ ಅಲ್ವಾ, ಅವರು ಮೂರು ವರ್ಷದಿಂದ ಏನೂ ಮಾಡಿಲ್ಲ. ಅದಕ್ಕೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡ್ತಾ ಇದ್ದಾರೆ. ಒತ್ತುವರಿ ಮಾಡಲು ಯಾರು ಕಾರಣ ಎಂದು ಸುದೀರ್ಘವಾಗಿ ನಾನು ಅಧಿವೇಶನದಲ್ಲಿ ಪ್ರಸ್ತಾಪ ಮಾಡ್ತೀನಿ, ಯಾರ ಕಾಲದಲ್ಲಿ ಏನು ಆಗಿತ್ತು ಅಂತ ಹೇಳ್ತೀನಿ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರನ್ನ ಐಟಿ ಬಿಟಿ ಸಿಟಿ ಅಂತ ಹೇಳ್ತೀವಿ, ಇದೇ ತರ ಬೆಂಗಳೂರಿನಲ್ಲಿ ಪ್ರವಾಹ ಮುಂದುವರೆದರೆ ನಾವು ಬಿಡ್ತೀವಿ ಇಲ್ಲಿಂದ ಖಾಲಿ ಮಾಡ್ತೀವಿ ಎಂದು ಐಟಿ-ಬಿಟಿಯವರು ಹೇಳುತ್ತಿದ್ದಾರೆ. ನಷ್ಟ ಮಾಡಿಕೊಂಡು ಅವರು ಯಾಕೆ ಇರ್ತಾರೆ, ನಾನು ಸರ್ಕಾರಕ್ಕೆ ಹೇಳ್ತೀನಿ ಒತ್ತುವರಿ ತೆರವು ಮಾಡೋದಿಕ್ಕೆ ಹಾಗೂ ರಾಜಕಾಲುವೆ ಒತ್ತುವರಿ ಮಾಡಿಕೊಂಡವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದರು.
ನಮ್ಮ ಸರ್ಕಾರದಲ್ಲಿ 1953 ಒತ್ತುವರಿ ಜಾಗವನ್ನು ನಾವು ಐಡೆಂಟಿಟಿ ಮಾಡಿದ್ವಿ, 1300 ಒತ್ತುವರಿ ಜಾಗವನ್ನು ತೆರವು ಮಾಡಿದ್ವಿ, 653 ಒತ್ತವರಿ ಜಾಗವನ್ನು ಇನ್ನೂ ಉಳಿದುಕೊಂಡಿದ್ದಾವೆ. ಆ ವೇಳೆಯಲ್ಲಿ ನಮ್ಮ ಸರ್ಕಾರ ಪತನವಾಯಿತು. ನಾವು ಮುಂದುವರಿಸಲಿಲ್ಲ, ಈ ಬಿಜೆಪಿ ಸರ್ಕಾರ ಇದನ್ನು ಮುಂದುವರಿಸಿದರೆ ಈ ಪರಿಸ್ಥಿತಿ ಆಗ್ತಿರಲಿಲ್ಲ. ಸಿಎಂ ಹಿಂದಿನ ಸರ್ಕಾರ ಕಾರಣ ಎಂದು ಹೇಳ್ತಿದ್ದಾರೆ, ಈ ಬಿಜೆಪಿ ಸರ್ಕಾರ ಬಂದು ಮೂರು ವರ್ಷ ಆಯ್ತು, ಏನಪ್ಪ ಮಾಡಿದ್ರು ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.