Wednesday, January 22, 2025

ಬಿಗ್​ಬಿ ಜೊತೆ ದೀಪಿಕಾ, ರಶ್ಮಿಕಾ.. ಕನ್ನಡತಿಯರ ಕಮಾಲ್

ಬಾಲಿವುಡ್​ನ ಬಾಕ್ಸ್ ಆಫೀಸ್​ ಕಲೆಕ್ಷನ್​ನಲ್ಲಿ ಪೀಕು ಕಮಾಲ್​ ಮಾಡಿತ್ತು. ದೀಪಿಕಾ ಪಡುಕೋಣೆ, ಅಮಿತಾಬ್​​​ ಕಾಂಬೋಗೆ ಪ್ರೇಕ್ಷಕರು ಬಹುಪರಾಕ್​ ಎಂದಿದ್ರು. ಇದೀಗ ಮತ್ತೊಮ್ಮೆ ಕನ್ನಡತಿ ರಶ್ಮಿಕಾ ಮಂದಣ್ಣ ಬಿಟೌನ್ ಶೆಹೆನ್​ಷಾ​​ ಜತೆ ಸಿನಿಪರದೆಯ ಮೇಲೆ ಮ್ಯಾಜಿಕ್​ ಮಾಡೋಕೆ ಸಜ್ಜಾಗಿದ್ದಾರೆ. ವರ್ಲ್ಡ್​ವೈಡ್​​ ಮತ್ತೊಮ್ಮೆ ಹಿಸ್ಟರಿ ರಿಪೀಟ್​​ ಆಗಲಿದೆ. ಪಕ್ಕಾ ಫ್ಯಾಮಿಲಿ ಎಂಟರ್​ಟೈನರ್​​ ಗುಡ್​​​ಬೈ ಚಿತ್ರದ ಟ್ರೈಲರ್ ಝಲಕ್ ನಿಮಗಾಗಿ.

ಮಸ್ತ್​​ ಕಾಮಿಡಿಯ ಕಲಬೆರೆಕೆ.. ಸಂಬಂಧಗಳ ಜೀವಂತಿಕೆ

ಬಿಗ್​ ಬಿ ಅಮಿತಾಬ್​ ಜತೆ ಸ್ಕ್ರೀನ್​ ಶೇರ್​ ಮಾಡೋದೆ ಕಲಾವಿದರಿಗೆ ಜೀವಮಾನದ ಸೌಭಾಗ್ಯ. ಈ ಸಾಲಿಗೆ ಇಬ್ಬರು ಕನ್ನಡಿತಿಯರು ಸೇರ್ಪಡೆಯಾಗಿರೋದು ಹೆಮ್ಮೆಯ ವಿಷ್ಯ. ಈ ಹಿಂದೆ  2015ರಲ್ಲಿ ರಿಲೀಸ್​ ಆಗಿದ್ದ ಪೀಕು ಚಿತ್ರದಲ್ಲಿ ಮಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಹಾಸ್ಯ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಂಡಿದ್ರು. ಬಿಗ್​ ಬಿ ಮಗಳಾಗಿ ದೀಪಿಕಾ ಪ್ರೇಕ್ಷಕರ ಹೃದಯ ಗೆದ್ದಿದ್ರು. ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಇದೀಗ, ಕೊಡಗಿನ ಕುವರಿ ರಶ್ಮಿಕಾ ಬಿಗ್​ ಬಿ ಮಗಳಾಗಿ ಗುಡ್​​ಬೈ ಚಿತ್ರದಲ್ಲಿ ಕಾಣಿಸಿದ್ದಾರೆ.

ಲಕ್ಕಿ ಚಾರ್ಮ್​​ ರಶ್ಮಿಕಾ ಸಿನಿಜರ್ನಿಯೇ ನೋಡುಗರಿಗೆ ಅಚ್ಚರಿ ಮೂಡಿಸಿದೆ. ಈಗಾಗ್ಲೇ ಪರಭಾಷೆಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಪಂಚಭಾಷೆಗಳಲ್ಲೂ ರಶ್ಮಿಕಾ ಹವಾ ಜೋರಾಗಿದೆ. ಇದೀಗ ಅಮಿತಾಬ್​​​ ಜತೆ ತೆರೆ ಹಂಚಿಕೊಂಡಿರೋ ಕೂರ್ಗ್​​​ ಚೆಲುವೆ, ಬಾಲಿವುಡ್​​​​​​ಗೂ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸೌತ್​​ ಸುಂದ್ರಿ ಬಿ ಟೌನ್​ನಲ್ಲಿ ಮಿಷನ್​ ಮಜ್ನು, ಗುಡ್​​ಬೈ ಸಿನಿಮಾಗಳಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ. ಅಂತೂ ಗುಡ್​ಬೈ ಚಿತ್ರದ ಟ್ರೈಲರ್​ ರಿಲೀಸ್​ ಆಗಿದ್ದು ಯೂಟ್ಯೂಬ್​ನಲ್ಲಿ ಭಾರೀ ಸಂಚಲನ ಮೂಡಿಸಿದೆ.

ಪಕ್ಕಾ ಫ್ಯಾಮಿಲಿ ಮೂವಿಯಾಗಿರೋ ಗುಡ್​​ಬೈ, ನೋಡುಗರಿಗೆ ಮಸ್ತ್​ ಮನರಂಜನೆ ನೀಡಲಿದೆ. ಟ್ರೈಲರ್​ನಲ್ಲಿ ಬಿಗ್​ಬಿ ಅಮಿತಾಬ್​ ಜತೆಗೆ ಮಗಳು ರಶ್ಮಿಕಾ ಮಾತಿನ ಜಟಾಪಟಿ ಹಾಸ್ಯಭರಿತವಾಗಿದೆ. ಕಂಪ್ಲೀಟ್​ ಕಾಮಿಡಿ ಜಾನರ್​ ಸಿನಿಮಾ ಇದಾಗಿದ್ದು, ಹೃದಯ ತಟ್ಟುವ ಕೆಲವು ಅಂಶಗಳು ಚಿತ್ರದಲ್ಲಿವೆ. ಫ್ಯಾಮಿಲಿ ಸದಸ್ಯರ ನಡುವಿನ ಜಗಳ, ಗಲಾಟೆ, ಬಿನ್ನಾಭಿಪ್ರಾಯಗಳು ಹೇಗೆ ಹಾಸ್ಯದ ಬುಗ್ಗೆಯ ಜೊತೆ ಕಣ್ಣೀರು ತರಿಸುತ್ತೆ ಅನ್ನೋ ಸೀರಿಯಸ್​ ಕಥೆ ಗುಡ್​ಬೈ.

ಇದ್ರೊಂದಿಗೆ ಕನ್ನಡತಿಯರು ವಿಶ್ವಮಟ್ಟದಲ್ಲಿ ಛಾಪು ಮೂಡಿಸ್ತಿದ್ದಾರೆ. ಕಾಮಿಡಿ, ಪ್ರೀತಿ​​, ಎಮೋಷನ್ಸ್ ಸೇರಿದಂತೆ​​ ಎಲ್ಲವೂ ಗುಡ್​ಬೈ ಚಿತ್ರದಲ್ಲಿದೆ. ಬಿಗ್​ ಬಿ ಹಾಗೂ ರಶ್ಮಿಕಾ ಜತೆಗೆ ನೀನಾ ಗುಪ್ತಾ, ಗುಲಾಟಿ, ಆಶಿಶ್​ ವಿದ್ಯಾರ್ಥಿ ಮುಂತಾದವ್ರ ಕಲಾಸಂಗಮವಿದೆ. ವಿಕಾಸ್​ ಬಾಹ್ಲ್​​ ನಿರ್ದೇಶನದ ಈ ಚಿತ್ರ ಇದೇ ಅಕ್ಟೋಬರ್ 7ಕ್ಕೆ ತೆರೆಗೆ ಬರಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES