Monday, November 18, 2024

ಅಣ್ಣಾವ್ರ ಅಕಾಡೆಮಿ ನ್ಯೂ ರೆಕಾರ್ಡ್​.. ರಾಘಣ್ಣ ದಿಲ್​ಖುಷ್

ಸ್ಯಾಂಡಲ್​ವುಡ್​ನ ದೊಡ್ಮನೆ ಅಂದ್ರೆ ಅದು ಬರೀ ಸಿನಿಮಾಗಷ್ಟೇ ಸೀಮಿತವಾದ ಮನೆಯಲ್ಲ. ವಿದ್ಯೆಯನ್ನೂ ಕೊಡೋ ಆಲಯವಾಗಿದೆ. ಡಾ ರಾಜ್​ಕುಮಾರ್ ಅಕಾಡೆಮಿ ಒಂದೇ ವರ್ಷದಲ್ಲಿ 70 ಮಂದಿ ಆಫೀಸರ್ಸ್​ನ ನೀಡಿದೆ. ಇದೊಂದು ಅಪರೂಪದ ದಾಖಲೆ ಆಗಿದ್ದು, ಈ ಬಗ್ಗೆ ರಾಘಣ್ಣ ಹಾಗೂ ರಾಜ್ ಕುಟುಂಬ ಹರ್ಷ ವ್ಯಕ್ತಪಡಿಸಿದೆ.

  • ರಾಜರತ್ನ ಅಪ್ಪುನೇ ಅಕಾಡೆಮಿಯ ಬ್ರ್ಯಾಂಡ್ ಅಂಬಾಸಿಡರ್
  • 2017-18ನೇ ಸಾಲಿನ KPSC ನಲ್ಲಿ 70 ಮಂದಿ ಆಫೀಸರ್ಸ್​ ..!

ಡಾ. ರಾಜ್​ ಕುಟುಂಬದಿಂದ ಶಿವಣ್ಣ- ರಾಘಣ್ಣ- ಪುನೀತ್ ಒಂದು ತಲೆಮಾರಿನ ಹೀರೋಗಳಾದ್ರೆ, ಮತ್ತೊಂದು ಜನರೇಷನ್​ನ ವಿನಯ್, ಧೀರೇನ್, ಧನ್ಯಾ ರಾಮ್​ಕುಮಾರ್, ಯುವ ಎಂಟ್ರಿ ಕೊಟ್ಟಾಯ್ತು. ಆದ್ರೆ ಇವ್ರ ಕುಟುಂಬ ಬರೀ ಚಿತ್ರರಂಗಕ್ಕಷ್ಟೇ ದೊಡ್ಮನೆ ಆಗಲಿಲ್ಲ. ವಿದ್ಯಾದಾನದ ಮೂಲಕ ಅದೆಷ್ಟೋ ಮಂದಿ ಗ್ರಾಮೀಣ ಪ್ರದೇಶದ ಅಸಹಾಯಕ ಮಕ್ಕಳಿಗೆ ಆಸರೆ ಆಗಿದೆ.

ಹೌದು.. ಡಾ ರಾಜ್​ಕುಮಾರ್ ಸಿವಿಲ್ ಸಿರ್ವಿಸ್ ಅಕಾಡೆಮಿಯಿಂದ ಕಳೆದ ನಾಲ್ಕೈದು ವರ್ಷಗಳಲ್ಲಿ ಸುಮಾರು ಅಧಿಕಾರಿಗಳನ್ನ ಕೊಡುಗೆಯಾಗಿ ನೀಡಿದೆ ಕಸ್ತೂರಿ ನಿವಾಸ. ರಾಘವೇಂದ್ರ ರಾಜ್​ಕುಮಾರ್​ರ ಕಿರಿಯ ಪುತ್ರ ಯುವರಾಜ್ ಕುಮಾರ್ ಹಾಗೂ ಸೊಸೆ ಶ್ರೀದೇವಿ ಭೈರಪ್ಪ ಅವ್ರೇ ಇದ್ರ ಉಸ್ತುವಾರಿ ವಹಿಸಿಕೊಂಡಿದ್ದು, ಅದು ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾ ಹೋಗ್ತಿದೆ.

2017-18ನೇ ಸಾಲಿನ KPSC ಫಲಿತಾಂಶ ಹೊರಬಿದ್ದಿದ್ದು, ಕರ್ನಾಟಕದಲ್ಲಿ ಗ್ರೂಪ್ ಎ ಹಾಗೂ ಬಿ ಗೆಜೆಟೆಡ್ ಪ್ರೊಬೆಷನರ್ಸ್​ ಆಗಿ ಸುಮಾರು ನೂರಕ್ಕೂ ಅಧಿಕ ಮಂದಿ ಆಯ್ಕೆ ಆಗಿದ್ದಾರೆ. ಆ ಪೈಕಿ ಡಾ ರಾಜ್​ಕುಮಾರ್ ಅಕಾಡೆಮಿಯ ವಿದ್ಯಾರ್ಥಿಗಳೇ ಸುಮಾರು 70 ಮಂದಿ ಇರೋದು ಖುಷಿಯ ವಿಚಾರ. ಇದು ಇಡೀ ರಾಜ್​ ಕುಟುಂಬದ ಜೊತೆ ಕರುನಾಡೇ ಸಂಭ್ರಮ ಪಡೋ ವಿಷಯ. ಡಿವೈಎಸ್​ಪಿ, ಎಎಸ್​​ಪಿ, ತಹಸೀಲ್ದಾರ್, ಅಸಿಸ್ಟೆಂಡ್ ಡೈರೆಕ್ಟರ್ಸ್​ ಹೀಗೆ ಸಾಲು ಸಾಲು ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಜೊತೆ ರಾಘಣ್ಣ ಖುಷಿ ಹಂಚಿಕೊಂಡರು.

ಪುನೀತ್ ರಾಜ್​ಕುಮಾರ್ ಅವ್ರೇ ಇದ್ರ ರಾಯಭಾರಿ ಆಗಿದ್ದು, ಇಂತಹ ಸೇವೆ ಒದಗಿಸುತ್ತಿರೋದು ನಿಜಕ್ಕೂ ನಮ್ಮ ಪುಣ್ಯ ಅಂತಾರೆ ರಾಘಣ್ಣ. ಯಾವುದೇ ಪ್ಲಾನ್ಸ್ ಇಲ್ಲದೆ, ವಿದ್ಯಾರ್ಥಿಗಳಿಂದಲೇ ಇದು ನಡೆದುಕೊಂಡು ಹೋಗ್ತಿದೆ. ಅವ್ರೆಲ್ಲರಿಗೂ ಅಭಿನಂದನೆ ಸಲ್ಲಿಸೋದ್ರ ಜೊತೆ ದಕ್ಷ ಅಧಿಕಾರ ನಿರ್ವಹಿಸಲು ಸಲಹೆ ಸೂಚಿಸಿದ್ರು. ನಿಜಕ್ಕೂ ದೊಡ್ಮನೆಗೊಂದು ಸಲಾಂ ಹೇಳಲೇಬೇಕು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES